ನಟಿ ಶ್ರುತಿ ಹಾಸನ್ ಅವರು ‘ಸಲಾರ್’ (Salaar Movie) ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಡಿಸೆಂಬರ್ 22ರಂದು ಬಿಡುಗಡೆಯಾದ ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದ ಗೆಲುವಿನಿಂದ ಶ್ರುತಿ ಹಾಸನ್ (Shruti Haasan) ಅವರ ಡಿಮ್ಯಾಂಡ್ ಹೆಚ್ಚಾಗಿದೆ. ಇದರ ನಡುವೆ ಅವರ ಮದುವೆ (Shruti Haasan Marriage) ಕುರಿತು ಗಾಸಿಪ್ ಹರಿದಾಡಿದೆ. ಇದಕ್ಕೆಲ್ಲ ಕಾರಣ ಆಗಿದ್ದು ಒಂದೇ ಒಂದು ಕಮೆಂಟ್. ಆದರೆ ಅದಕ್ಕೆ ಸ್ವತಃ ಶ್ರುತಿ ಹಾಸನ್ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ತಾವು ಇನ್ನೂ ಮದುವೆ ಆಗಿಲ್ಲ ಎಂದು ಅವರು ಹೇಳಿದ್ದಾರೆ. ಅದರ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ..
ಬಾಲಿವುಡ್ ಸೆಲೆಬ್ರಿಟಿಗಳ ಸ್ನೇಹಿತ ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಪ್ರಶ್ನೋತ್ತರ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುವಾಗ ‘ಶ್ರುತಿ ಹಾಸನ್ ಗಂಡನ ಜೊತೆ ನನಗೆ ಸ್ನೇಹ ಇದೆ’ ಎಂದು ಒರಿ ಹೇಳಿದರು. ಹಾಗಾಗಿ ಶ್ರುತಿ ಹಾಸನ್ ಅವರು ಬಾಯ್ಫ್ರೆಂಡ್ ಶಾಂತನು ಹಜಾರಿಕಾ ಜೊತೆ ಗುಟ್ಟಾಗಿ ಮದುವೆ ಆಗಿರಬಹುದು ಎಂದು ಎಲ್ಲರೂ ಊಹಿಸಿದ್ದಾರೆ. ಅದಕ್ಕೆ ಶ್ರುತಿ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ.
‘ನಾನು ಮದುವೆ ಆಗಿಲ್ಲ. ಎಲ್ಲದರ ಬಗ್ಗೆಯೂ ತಿಳಿಸುವ ನಾನು ಮದುವೆ ವಿಚಾರವನ್ನು ಯಾಕೆ ಮುಚ್ಚಿಡಲಿ? ನನ್ನ ಬಗ್ಗೆ ಏನೂ ಗೊತ್ತಿಲ್ಲದೇ ಇರುವವರು ದಯವಿಟ್ಟು ಸುಮ್ಮನಿರಿ’ ಎಂದು ಶ್ರುತಿ ಹಾಸನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಶಾಂತನು ಹಜಾರಿಕಾ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಮದುವೆ ಬಗ್ಗೆ ಇನ್ನೂ ನಿರ್ಧಾರ ತಿಳಿಸಿಲ್ಲ.
ಇದನ್ನೂ ಓದಿ: ‘ಸಲಾರ್’ ಚಿತ್ರಕ್ಕೆ ಪ್ರಭಾಸ್, ಪ್ರಶಾಂತ್ ನೀಲ್, ಶ್ರುತಿ ಹಾಸನ್ ಪಡೆದ ಸಂಭಾವನೆ ಎಷ್ಟು?
ಕಮಲ್ ಹಾಸನ್ ಅವರ ಮಗಳು ಎಂಬ ಕಾರಣಕ್ಕೆ ಶ್ರುತಿ ಹಾಸನ್ಗೆ ಬೇಗ ಅವಕಾಶಗಳು ಸಿಕ್ಕವು. ಈಗಲೂ ಅವರು ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಸ್ಟಾರ್ ಹೀರೋಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಆಗಾಗ ಹೊಸ ಫೋಟೋ ಹಂಚಿಕೊಳ್ಳುತ್ತಾರೆ. ಮದುವೆ ಕುರಿತು ಅವರು ನೀಡಿರುವ ಸ್ಪಷ್ಟನೆ ಬಗ್ಗೆ ಒರಿ ಏನು ಹೇಳ್ತಾರೆ ಎಂಬುದನ್ನು ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.