
ಕನ್ನಡ, ಮಲಯಾಳಂ, ಹಿಂದಿ ಮೊದಲಾದ ಭಾಷೆಗಳಲ್ಲಿ ನಟಿಸಿ ಫೇಮಸ್ ಆದ ಶ್ವೇತಾ ಮೆನನ್ಗೆ ಈಗ ಸಂಕಷ್ಟ ಎದುರಾಗಿದೆ. ಅವರು 51ನೇ ವಯಸ್ಸಿನಲ್ಲಿ ಅಶ್ಲೀಲ ಸಿನಿಮಾಗಳಲ್ಲಿ ನಟಿಸುತ್ತಿರುವ ಆರೋಪ ಬಂದಿದೆ. ಅಲ್ಲದೆ, ಈ ವಿಡಿಯೋಗಳನ್ನು ಅವರು ವಿವಿಧ ವೆಬ್ಸೈಟ್ಗಳಿಗೆ ಮಾರಾಟ ಮಾಡಿ ಹಣ ಮಾಡುತ್ತಿರುವುದಾಗಿಯೂ ದೂರಲಾಗಿದೆ. ಈ ವಿಷಯವಾಗಿ ಮಾರ್ಟಿನ್ ಮೆನಶೆರಿ ಹೆಸರಿನ ಸಾಮಾಜಿಕ ಹೋರಾಟಗಾರ ಈ ಬಗ್ಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎರ್ನಾಕುಲಂ ಸಿಜೆಎಂ ಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ಐಟಿ ಕಾಯ್ದೆ ಸೆಕ್ಷನ್ 67 (ಎ) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಶ್ವೇತಾ ಅವರು ಕೆಲವು ಅಶ್ಲೀಲ ಸಿನಿಮಾಗಳ ಭಾಗವಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಕೆಲವು ಕಾಂಡೋಮ್ ಜಾಹೀರಾತಿನಲ್ಲೂ ಶ್ವೇತಾ ನಟಿಸಿದ್ದಾರಂತೆ. ಸಿನಿಮಾ ಹಾಗೂ ಜಾಹೀರಾತಿನಲ್ಲಿ ನಗ್ನತೆ ಇದೆ. ಅಲ್ಲದೆ, ಇದನ್ನು ಅವರು ಆರ್ಥಿಕ ಲಾಭ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ಅಭಿಮಾನಿಗಳ ಬಳಿ ಎಷ್ಟು ಸ್ವೀಟ್ ಆಗಿ ನಡೆದುಕೊಳ್ತಾರೆ ನೋಡಿ; ಈ ವಿಡಿಯೋ ಉತ್ತಮ ಸಾಕ್ಷಿ
ಶ್ವೇತಾ ಚಂಡೀಗಢದವರು. ಅವರು 1991ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಟಿಯಾಗಿ, ಮಾಡೆಲ್ ಆಗಿ ಹಾಗೂ ಟಿವಿ ಆ್ಯಂಕರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಪರಿಚಿತರಾಗಿದ್ದಾರೆ. ಅವರು ಕನ್ನಡದಲ್ಲಿ ಉಪೇಂದ್ರ ಅಭಿನಯದ ‘ಓಂಕಾರ’ ಚಿತ್ರದ ಭಾಗ ಆಗಿದ್ದರು. ಶ್ವೇತಾ ಅವರು ಕಿರುತೆರೆ ಲೋಕದಲ್ಲೂ ಗಮನ ಸೆಳೆದಿದ್ದಾರೆ. ‘ಬಿಗ್ ಬಾಸ್ ಮಲಯಾಳಂ ಸೀಸನ್ 1’ರಲ್ಲಿ ಸ್ಪರ್ಧಿಸಿದ್ದರು. 2018ರಲ್ಲಿ ಶೋ ಪ್ರಸಾರ ಕಂಡಿತು. ಕೇವಲ ಒಂದು ತಿಂಗಳು ಮಾತ್ರ ಇವರು ದೊಡ್ಮನೆಯಲ್ಲಿ ಇದ್ದರು.
ಶ್ವೇತಾ ಮೆನನ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರು. ಇವರ ವಿರುದ್ಧ ಕೇಸ್ ದಾಖಲಾದರೆ ನಟಿಯನ್ನು ರೇಸ್ನಿಂದ ಹೊರಗೆ ಇಡಬಹುದು ಎಂದು ಯಾರಾದರೂ ಸಂಚು ರೂಪಿಸಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶ್ವೇತಾ ಮೆನನ್ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.