
ನಟಿ ಅದಿತಿ ರಾವ್ ಹೈದರಿ (Aditi Rao Hydari) ಅವರು ವೈಯಕ್ತಿಕ ಜೀವನದ ಕಾರಣಕ್ಕೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಈಗ ಅವರು ಸಿನಿಮಾ ಚಟುವಟಿಕೆಗಳಿಂದ ಬಿಡುವು ಪಡೆದುಕೊಂಡು ರಜೆಯ ಮಜಾ ಸವಿಯುತ್ತಿದ್ದಾರೆ. ಅವರಿಗೆ ನಟ ಸಿದ್ದಾರ್ಥ್ ಸಾಥ್ ನೀಡಿದ್ದಾರೆ. ಸಿದ್ದಾರ್ಥ್ (Siddharth) ಮತ್ತು ಅದಿತಿ ರಾವ್ ಹೈದರಿ ಅವರು ಒಂದಷ್ಟು ದಿನಗಳಿಂದ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಫೋಟೋಗಳು ವೈರಲ್ ಆಗಿವೆ. ಈಗ ಈ ಜೋಡಿ ಹಕ್ಕಿಗಳು ರಾಜಸ್ಥಾನಕ್ಕೆ ತೆರಳಿವೆ. ಅಲ್ಲಿ ಇಬ್ಬರೂ ಜೊತೆಯಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ಒಟ್ಟಿನಲ್ಲಿ ಇಬ್ಬರ ನಡುವಿನ ಪ್ರೀತಿಗೆ ಹೊಸ ಹೊಸ ಸಾಕ್ಷಿ ಸಿಗುತ್ತಲೇ ಇವೆ. ಆದಷ್ಟು ಬೇಗ ಇವರಿಬ್ಬರು ತಮ್ಮ ರಿಲೇಷನ್ಶಿಪ್ ಬಗ್ಗೆ ಬಹಿರಂಗವಾಗಿ ಮಾತನಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಅದಿತಿ ರಾವ್ ಹೈದರಿ ಅವರಿಗೆ ಬಹುಭಾಷೆಯಲ್ಲಿ ಡಿಮ್ಯಾಂಡ್ ಇದೆ. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿ ಅವರು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅದೇ ರೀತಿ ಸಿದ್ದಾರ್ಥ್ ಕೂಡ ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಇವರಿಬ್ಬರು ಮದುವೆ ಆಗಬಹುದು ಎಂಬುದು ಅನೇಕರ ಊಹೆ.
ಅದಿತಿ ರಾವ್ ಹೈದರಿ ಮತ್ತು ಸಿದ್ದಾರ್ಥ್ ನಡುವಿನ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಡುವಿನ ಸಮಯದಲ್ಲಿ ಒಟ್ಟಾಗಿ ಕಾಲ ಕಳೆದಿರುವ ಅದಿತಿ ರಾವ್ ಹೈದರಿ ಮತ್ತು ಸಿದ್ದಾರ್ಥ್ ಅವರು ಇತ್ತೀಚೆಗೆ ‘ಟಮ್ ಟಮ್..’ ಹಾಡಿಗೆ ಹೆಜ್ಜೆ ಹಾಕಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿತ್ತು. ದಿಯಾ ಮಿರ್ಜಾ, ಫರ್ಹಾ ಖಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದರು. ಈ ಹಿಂದೆ ಅವರಿಬ್ಬರು ಬರ್ತ್ಡೇ ಪ್ರಯುಕ್ತ ಪರಸ್ಪರ ವಿಶ್ ಮಾಡಿಕೊಂಡಿದ್ದು ಗಮನ ಸೆಳೆದಿತ್ತು. ಸಿದ್ದಾರ್ಥ್ ಅವರು ‘ಹೃದಯದ ರಾಜಕುಮಾರಿ’ ಎಂಬ ಕ್ಯಾಪ್ಷನ್ನೊಂದಿಗೆ ಅದಿತಿ ಫೋಟೋ ಹಂಚಿಕೊಂಡಿದ್ದರು.
ಇದನ್ನೂ ಓದಿ: ನಟಿ ಅದಿತಿ ರಾವ್ ಜತೆ ತಮಿಳು ನಟ ಸಿದ್ದಾರ್ಥ್ ಡೇಟಿಂಗ್? ಮುಂಬೈನಲ್ಲಿ ಸುತ್ತಾಟ
ಅದಿತಿ ರಾವ್ ಹೈದರಿ ಅವರು ಹಲವು ಭಾಷೆಯ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಅವರು ಇತ್ತೀಚೆಗೆ ಕಾನ್ ಚಿತ್ರೋತ್ಸವಕ್ಕೆ ಹಾಜರಿ ಹಾಕಿದ್ದರು. ಕಾನ್ ಚಿತ್ರೋತ್ಸವದಲ್ಲಿ ವಿವಿಧ ದೇಶ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಭಾರತದ ಅನೇಕ ನಟಿಯರು ಕೂಡ ಪಾಲ್ಗೊಂಡಿದ್ದರು. ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಅದಿತಿಗೆ ಈ ಚಾನ್ಸ್ ಸಿಕ್ಕಿದ್ದಕ್ಕೆ ಅವರ ಅಭಿಮಾನಿಗಳಿಗೆ ಖುಷಿ ಆಗಿತ್ತು. ಕಳೆದ ವರ್ಷ ಕೂಡ ಅದಿತಿ ರಾವ್ ಹೈದರಿ ಅವರು ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದರು. ಈ ಬಾರಿ ಅವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿತು. ಹಳದಿ ಬಣ್ಣದ ಗೌನ್ ಧರಿಸಿ ಅವರು ರೆಡ್ ಕಾರ್ಪೆಟ್ನಲ್ಲಿ ಮಿಂಚಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.