ಸಿದ್ದಾರ್ಥ್ ಮಲ್ಹೋತ್ರಾ ಅವರು ಕಿಯಾರಾ ಅಡ್ವಾಣಿಯನ್ನು ಮದುವೆಯಾಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಆಲಿಯಾ ಭಟ್ ಕೂಡ ರಣಬೀರ್ ಕಪೂರ್ ಅವರನ್ನು ಮದುವೆ ಆಗಿದ್ದಾರೆ. ಈ ದಂಪತಿಗೆ ರಹಾ ಹೆಸರಿನ ಮಗಳು ಕೂಡ ಇದ್ದಾಳೆ. ಈ ಮೊದಲು ಆಲಿಯಾ ಹಾಗೂ ಸಿದ್ದಾರ್ಥ್ ಡೇಟಿಂಗ್ ಮಾಡುತ್ತಿದ್ದರು. ಈ ವಿಚಾರವನ್ನು ಇಬ್ಬರೂ ಒಪ್ಪಿಕೊಂಡಿದ್ದರು. ಆಲಿಯಾ ಅವರಿಗೆ ಎಡ್ವರ್ಡ್ ಹೆಸರಿನ ಬೆಕ್ಕನ್ನು ಸಿದ್ದಾರ್ಥ್ ಉಡುಗೊರೆಯಾಗಿ ನೀಡಿದ್ದರು.
ಆಲಿಯಾ ಭಟ್ ಹಾಗೂ ಸಿದ್ದಾರ್ಥ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾ ಮೂಲಕ. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾ ಈ ಜೋಡಿಯ ಮೊದಲ ಸಿನಿಮಾ. ಇಬ್ಬರ ಕೆಮಿಸ್ಟ್ರಿ ಸಖತ್ ಇಷ್ಟ ಆಯಿತು. ಇಬ್ಬರೂ ಸೆಲೆಬ್ರಿಟಿ ಮಕ್ಕಳಾದ್ದರಿಂದ ಇವರಿಗೆ ಮೊದಲೇ ಪರಿಚಯ ಇತ್ತು. ಆದರೆ, ಹೆಚ್ಚು ಆಪ್ತತೆ ಬೆಳೆದಿದ್ದು ಈ ಸಿನಿಮಾದಲ್ಲಿ. ಇವರು ಇದಾದ ಬಳಿಕ ಡೇಟಿಂಗ್ ಕೂಡ ಆರಂಭಿಸಿದರು.
ಆಲಿಯಾ ಹಾಗೂ ಸಿದ್ದಾರ್ಥ್ ಮಧ್ಯೆ ಮೊದಲಿನಿಂದಲೂ ಫ್ರೆಂಡ್ಶಿಪ್ ಇದ್ದಿದ್ದರಿಂದ ಇವರು ಲವ್ನಲ್ಲಿ ಇದ್ದರೂ ಅಂಥ ಬದಲಾವಣೆ ಏನೂ ಇರಲಿಲ್ಲ. ಆದರೆ, ಒಂದು ಹಂತಕ್ಕೆ ಹೋದ ಬಳಿಕ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದರು. ಇವರು ಪ್ರೀತಿಯಲ್ಲಿ ಇದ್ದಾಗ ಆಲಿಯಾ ಭಟ್ಗೆ ಸಿದ್ದಾರ್ಥ್ ಅವರು ಬಿಳಿ ಬಣ್ಣದ ಬೆಕ್ಕನ್ನು ನೀಡಿದ್ದರು. ಆಲಿಯಾ ಬಳಿ ಈ ಬೆಕ್ಕು ಇನ್ನೂ ಇದೆ. ಇದನ್ನು ಅವರು ಸಾಕಷ್ಟು ಇಷ್ಟಪಡುತ್ತಾರೆ.
ಇದನ್ನೂ ಓದಿ: ಅಭಿಮಾನಿಗೆ 50 ಲಕ್ಷ ರೂಪಾಯಿ ದೋಖಾ; ಕೂಡಲೇ ಪ್ರತಿಕ್ರಿಯೆ ನೀಡಿದ ನಟ ಸಿದ್ದಾರ್ಥ್ ಮಲ್ಹೋತ್ರಾ
ಈ ಮೊದಲು ಸಿದ್ದಾರ್ಥ್ ಅವರು ಬೆಕ್ಕಿನ ಬಗ್ಗೆ ಮಾತನಾಡಿದ್ದರು. ‘ಎಕ್ಸ್ನಿಂದ ನೀವು ಮಿಸ್ ಮಾಡಿಕೊಳ್ಳೋದು ಏನು’ ಎಂದು ಕೇಳಿದಾಗ ಅವರು ‘ಬೆಕ್ಕು’ ಎಂದು ಹೇಳಿದ್ದರು. ಈ ಮೂಲಕ ಸಿದ್ದಾರ್ಥ್ಗೂ ಈ ಬೆಕ್ಕು ಇಷ್ಟ ಆಗಿತ್ತು ಅನ್ನೋದು ಸ್ಪಷ್ಟವಾಗಿದೆ. ಆಲಿಯಾ ಕೂಡ ಬೆಕ್ಕಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಗಿಫ್ಟ್ ಆಗಿ ಬೆಕ್ಕು ಸಿಕ್ಕ ಬಗ್ಗೆ ಅವರಿಗೆ ಖುಷಿ ಇದೆ. ಆಲಿಯಾ ಹಾಗೂ ಸಿದ್ದಾರ್ಥ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರೂ ಸಿನಿಮಾ ರಂಗದಲ್ಲಿ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.