Ayalaan: ದೀಪಾವಳಿ ಹಬ್ಬಕ್ಕೆ ಬರಲಿದೆ​ ಶಿವಕಾರ್ತಿಕೇಯನ್ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ ‘ಅಯಲಾನ್​’

Ayalaan Movie Release Date: ‘ಅಯಲಾನ್​’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ನವೆಂಬರ್​ ತಿಂಗಳಲ್ಲಿ ವಿಶ್ವಾದ್ಯಂತ ಈ ಚಿತ್ರ ರಿಲೀಸ್ ಆಗಲಿದೆ.

Ayalaan: ದೀಪಾವಳಿ ಹಬ್ಬಕ್ಕೆ ಬರಲಿದೆ​ ಶಿವಕಾರ್ತಿಕೇಯನ್ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ ‘ಅಯಲಾನ್​’
ಶಿವಕಾರ್ತಿಕೇಯನ್
Follow us
ಮದನ್​ ಕುಮಾರ್​
|

Updated on:Apr 24, 2023 | 10:06 PM

ಹಾಲಿವುಡ್​ಗೆ ಹೋಲಿಸಿದರೆ ಭಾರತದಲ್ಲಿ ಸೈನ್ಸ್​ ಫಿಕ್ಷನ್​ ಸಿನಿಮಾಗಳ (Science Fiction Movie) ಸಂಖ್ಯೆ ವಿರಳ. ಆಗೊಮ್ಮೆ ಈಗೊಮ್ಮೆ ಮಾತ್ರ ಅಂಥ ಸಿನಿಮಾಗಳು ಬರುತ್ತವೆ. ಮಾಮೂಲಿ ಚಿತ್ರಗಳಿಗಿಂತಲೂ ಡಿಫರೆಂಟ್​ ಆಗಿರುವ ಸೈನ್ಸ್​ ಫಿಕ್ಷನ್​ ಸಿನಿಮಾಗಳ ಮೇಲೆ ಪ್ರೇಕ್ಷಕರಿಗೆ ವಿಶೇಷ ಆಸಕ್ತಿ ಇರುತ್ತದೆ. ಹಾಗಾಗಿ ಅಂಥ ಚಿತ್ರಗಳ ಬಿಡುಗಡೆಗಾಗಿ ಸಿನಿಪ್ರಿಯರು ಕಾದಿರುತ್ತಾರೆ. ಕಾಲಿವುಡ್​ ನಟ ಶಿವಕಾರ್ತಿಕೇಯನ್​ (Sivakarthikeyan) ಅವರು ‘ಅಯಲಾನ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಸೈನ್ಸ್​ ಫಿಕ್ಷನ್​ ಪ್ರಕಾರಕ್ಕೆ ಸೇರುವ ಸಿನಿಮಾ. ಈ ಚಿತ್ರ ಯಾವಾಗ ರಿಲೀಸ್​ ಆಗಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಈ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ‘ಅಯಲಾನ್​’ (Ayalaan Movie) ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಇದನ್ನು ತಿಳಿಸಲು ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ಆರ್. ರವಿಕುಮಾರ್ ಅವರು ಕಥೆ ಬರೆದು ನಿರ್ದೇಶಿಸುತ್ತಿರುವ ‘ಅಯಲಾನ್’ ಚಿತ್ರದ ಬಿಡುಗಡೆಯು ಕಾರಣಾಂತರಗಳಿಂದ ತಡವಾಯಿತು. ಆದ್ದರಿಂದ ಅಭಿಮಾನಿಗಳು ಕಾಯುವುದು ಅನಿವಾರ್ಯ ಆಯಿತು. ಆದರೆ ಆ ಕಾಯುವಿಕೆಗೆ ಅರ್ಥ ಬರುವ ರೀತಿಯಲ್ಲಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ನವೆಂಬರ್​ ತಿಂಗಳಲ್ಲಿ ವಿಶ್ವಾದ್ಯಂತ ಈ ಚಿತ್ರ ರಿಲೀಸ್ ಆಗಲಿದೆ. 24 ಎಎಂ ಸ್ಟುಡಿಯೋಸ್ ಬ್ಯಾನರ್​ ಮೂಲಕ ಆರ್.ಡಿ. ರಾಜ ಅವರು ಅದ್ದೂರಿಯಾಗಿ ನಿರ್ಮಿಸಿರುವ ಈ ಸಿನಿಮಾವನ್ನು ‘ಕೆಜೆಆರ್ ಸ್ಟುಡಿಯೋ’ನ ಕೋಟಪಾಡಿ ಜೆ. ರಾಜೇಶ್ ಅವರು ಬಿಡುಗಡೆ ಮಾಡಲಿದ್ದಾರೆ. ಎ.ಆರ್. ರೆಹಮಾನ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಇದು ಸೈನ್ಸ್​ ಫಿಕ್ಷನ್​ ಸಿನಿಮಾ ಆದ್ದರಿಂದ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿಯಾಗಬಾರದು ಎಂಬುದು ಚಿತ್ರತಂಡದ ಆಶಯ. ಹಾಗಾಗಿ ಸಾಕಷ್ಟು ಕಾಳಜಿ ವಹಿಸಿ ಗ್ರಾಫಿಕ್ಸ್​ ಕೆಲಸ ಮಾಡಿಸಲಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ 4500ಕ್ಕೂ ಹೆಚ್ಚು VFX ಶಾಟ್‌ಗಳನ್ನು ಹೊಂದಿರುವ ಮೊದಲ ಪೂರ್ಣಾವಧಿ ಲೈವ್-ಆ್ಯಕ್ಷನ್​ ಸಿನಿಮಾ ಎಂಬ ಹೆಗ್ಗಳಿಕೆಗೂ ‘ಅಯಲಾನ್’ ಚಿತ್ರ ಪಾತ್ರವಾಗುತ್ತಿದೆ.

ಇದನ್ನೂ ಓದಿ: ಸಮಂತಾಗೆ ಆ್ಯಕ್ಷನ್​ ಹೇಳಿಕೊಡೋಕೆ ಬಂದ ಹಾಲಿವುಡ್​ ಸ್ಟಂಟ್​ ಮಾಸ್ಟರ್​

ಹಾಲಿವುಡ್​ನ ಹಲವು ಚಿತ್ರಗಳಿಗೆ ಗ್ರಾಫಿಕ್ಸ್​ ಕೆಲಸ ಮಾಡಿರುವ ‘ಫ್ಯಾಂಟಮ್ FX’ ಸಂಸ್ಥೆಯು ‘ಅಯಲಾನ್​’ ಸಿನಿಮಾದ ತೆರೆ ಹಿಂದೆ ಶ್ರಮಿಸುತ್ತಿದೆ. ಆ ಕಾರಣಕ್ಕೂ ನಿರೀಕ್ಷೆ ಮೂಡಿದೆ. ಈ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಅವರಿಗೆ ಜೋಡಿಯಾಗಿ ರಕುಲ್ ಪ್ರೀತ್ ಸಿಂಗ್ ನಟಿಸುತ್ತಿದ್ದಾರೆ. ಕರುಣಾಕರನ್, ಯೋಗಿ ಬಾಬು, ಶರದ್ ಕೇಳ್ಕರ್, ಇಶಾ ಕೊಪ್ಪಿಕರ್, ಭಾನುಪ್ರಿಯಾ, ಬಾಲ ಸರವಣನ್ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ.

ಇದನ್ನೂ ಓದಿ: Aishwarya Rai: ‘ಪೊನ್ನಿಯಿನ್ ಸೆಲ್ವನ್ 2’ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಮಿಂಚಿದ ಐಶ್ವರ್ಯಾ ರೈ; ಇಲ್ಲಿವೆ ಫೋಟೋಸ್

ಕಾಲಿವುಡ್​ ನಟ ಶಿವಕಾರ್ತಿಕೇಯನ್ ಅವರು ಹಂತ ಹಂತವಾಗಿ ಸಾಧನೆಯ ಮೆಟ್ಟಿಲುಗಳನ್ನು ಏರಿದವರು. ಆರಂಭದಲ್ಲಿ ರಿಯಾಲಿಟಿ ಶೋಗಳಿಂದ ಗುರುತಿಸಿಕೊಂಡು, ನಂತರ ತಮಿಳು ಚಿತ್ರರಂಗದಲ್ಲಿ ಹಾಸ್ಯನಟನಾಗಿ, ಬರಹಗಾರನಾಗಿ ನಿರ್ಮಾಪಕನಾಗಿ ತಮ್ಮದೇ ರೀತಿಯಲ್ಲಿ ಛಾಪು ಮೂಡಿಸಿದ್ದಾರೆ. ಮಾಸ್ ಆಗಿ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮಾಡಿದ್ದಾರೆ. ಆ ಕಾರಣಕ್ಕಾಗಿ ‘ಅಯಲಾನ್’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:06 pm, Mon, 24 April 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ