ಭಾರತ-ಪಾಕಿಸ್ತಾನದ ಸಂಬಂಧ ಕುರಿತ ಡಾಕ್ಯುಮೆಂಟರಿಗಳಿವು

India and Pakistan: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಪರಿಸ್ಥಿತಿ ಇದೆ. ಕದನ ವಿರಾಮ ಘೋಷಣೆ ಆಗಿದೆಯಾದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧಗಳು, ಸಂಬಂಧ ಇನ್ನಿತರೆ ವಿಷಯಗಳ ಬಗ್ಗೆ ನಿರ್ಮಾಣವಾಗಿರುವ ಆಸಕ್ತಿಕರ ಡಾಕ್ಯುಮೆಂಟರಿಗಳ ಪಟ್ಟಿ ಇಲ್ಲಿದೆ...

ಭಾರತ-ಪಾಕಿಸ್ತಾನದ ಸಂಬಂಧ ಕುರಿತ ಡಾಕ್ಯುಮೆಂಟರಿಗಳಿವು
India Vs Pakistan

Updated on: May 10, 2025 | 9:42 PM

ಸಿನಿಮಾಗಳು (Cinema) ಸದಾ ರೋಚಕತೆಯನ್ನು ತುಂಬಿಕೊಂಡಿರುತ್ತವೆ. ಸಿನಿಮಾಗಳು ಸತ್ಯ ಘಟನೆ ಆಧರಿತವಾದರೂ ಸತ್ಯವಾಗಿರುವುದಿಲ್ಲ. ಆದರೆ ಡಾಕ್ಯುಮೆಂಟರಿಗಳು ಹಾಗಲ್ಲ, ಡಾಕ್ಯುಮೆಂಟರಿಗಳು ಆಳವಾದ ಅಧ್ಯಯನ, ಸಾಕ್ಷಿಗಳು, ಹಲವು ಚಿತ್ರ, ವಿಡಿಯೋ ಮಾಹಿತಿಗಳನ್ನು ಒಳಗೊಂಡಿರುತ್ತವೆ. ಡಾಕ್ಯುಮೆಂಟರಿಗಳು ಕಲ್ಪನೆಯಲ್ಲ, ವಾಸ್ತವ. ಇದೀಗ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ಇದೆ. ಸದ್ಯಕ್ಕೆ ಕನದವಿರಾಮ ಘೋಷಣೆ ಆಗಿದೆಯಾದರೂ ಬೂದಿ ಮುಚ್ಚಿದ ಕೆಂಡ ನಿಗಿ-ನಿಗಿ ಎನ್ನುತ್ತಲೇ ಇದೆ.

ಭಾರತ ಮತ್ತು ಪಾಕಿಸ್ತಾನದ ಸಂಬಂಧ ಬಹಳ ಸಂಕೀರ್ಣವಾದುದು. ಎರಡು ದೇಶಗಳ ಸಂಬಂಧಗಳು, ಯುದ್ಧಗಳ ಬಗ್ಗೆ ತಿಳಿಯಲು ಇಚ್ಛಿಸುವವರಿಗೆ ಕೆಲವು ಒಳ್ಳೆಯ ಡಾಕ್ಯುಮೆಂಟರಿಗಳು ಲಭ್ಯ ಇವೆ. ಕೆಲವು ಉಚಿತವಾಗಿ ವೀಕ್ಷಣೆಗೆ ಲಭ್ಯವಿದ್ದರೆ ಇನ್ನು ಕೆಲವು ಒಟಿಟಿಗಳು ಖಾಸಗಿ ವೆಬ್ ಸೈಟ್​ಗಳಲ್ಲಿ ಲಭ್ಯವಿವೆ. ಇಲ್ಲಿದೆ ಅಂಥಹಾ ಕೆಲವು ಡಾಕ್ಯುಮೆಂಟರಿಗಳ ಪಟ್ಟಿ…

ಸೆಪರೇಷನ್ ಆಫ್ ಈಸ್ಟ್ ಪಾಕಿಸ್ತಾನ್

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಆಡಳಿತದ ಸಮಯದಲ್ಲಿ ಮಾಡಲಾದ ಭಾರತ ಪಾಕಿಸ್ತಾನ ಯುದ್ಧ ಮತ್ತು ಬಾಂಗ್ಲಾದೇಶದ ನಿರ್ಮಾಣದ ಘಟನೆಯನ್ನು ಹೇಳುವ ಡಾಕ್ಯುಮೆಂಟರಿ ‘ಸೆಪರೇಷನ್ ಆಫ್ ಈಸ್ಟ್ ಪಾಕಿಸ್ತಾನ್’. ಹಲವಾರು ಮಂದಿ ರಾಜಕಾರಣಿಗಳು, ಸೈನಿಕರು ಸಹ ಈ ಡಾಕ್ಯುಮೆಂಟರಿಯಲ್ಲಿ ಮಾತನಾಡಿದ್ದಾರೆ.

ವಾರ್ ಆಂಡ್ ಪೀಸ್

‘ವಾರ್ ಆಂಡ್ ಪೀಸ್’ ಹೆಸರಿನಲ್ಲಿ ಹಲವಾರು ಡಾಕ್ಯುಮೆಂಟರಿಗಳು ಈ ವರೆಗೆ ಬಂದಿವೆ. 2002 ರಲ್ಲಿ ಬಿಡುಗಡೆ ಆದ ಆನಂದ್ ಪಟವರ್ಧನ್ ನಿರ್ದೇಶನ ಮಾಡಿರುವ ‘ವಾರ್ ಆಂಡ್ ಪೀಸ್’ ಡಾಕ್ಯುಮೆಂಟರಿ ಭಾರತ ಮತ್ತು ಪಾಕಿಸ್ತಾನದ ಸಂಕೀರ್ಣ ಸಂಬಂಧ, ಪರಸ್ಪರ ಸ್ಪರ್ಧೆ, ಯುದ್ಧಗಳ ಬಗ್ಗೆ ಮಾಹಿತಿ ಒಳಗೊಂಡಿದೆ.

ಇದನ್ನೂ ಓದಿ:ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ

ಮೈ ಫ್ಯಾಮಿಲಿ ಪಾರ್ಟಿಷನ್ ಆಂಡ್ ಮೀ

‘ಮೈ ಫ್ಯಾಮಿಲಿ ಪಾರ್ಟಿಷನ್ ಆಂಡ್ ಮೀ’ ಡಾಕ್ಯುಮೆಂಟರಿ, ಭಾರತದಿಂದ ಪಾಕಿಸ್ತಾನ ಬೇರೆಯಾದ ಐತಿಹಾಸಿಕ ಘಟನೆಯನ್ನು ಭಿನ್ನ ನೆಲೆಯಲ್ಲಿ ವಿವರಿಸುತ್ತದೆ. ಪಾರ್ಟಿಷನ್ ವೇಳೆ ಬ್ರಿಟನ್​ಗೆ ಹೋಗಿ ನೆಲೆಸಿದ ಸಿಖ್ ಕುಟುಂಬವೊಂದರ ಮೂರನೇ ತಲೆಮಾರಿನ ಯುವತಿಯೊಬ್ಬಾಕೆ ಭಾರತ ಮತ್ತು ಪಾಕಿಸ್ತಾನಕ್ಕೆ ಬಂದು ತನ್ನ ಕುಟುಂಬ ಮೂಲವನ್ನು ಹುಡುಕುವ ಘಟನೆಯನ್ನು ಈ ಡಾಕ್ಯುಮೆಂಟರಿ ಒಳಗೊಂಡಿದೆ.

ದಿ ಸ್ಟೋರಿ ಆಫ್ ಇಂಡಿಯಾ

ಜೆರ್ಮಿ ಜೆಫ್ಸ್ ನಿರ್ದೇಶನ ಮಾಡಿರುವ ‘ದಿ ಸ್ಟೋರಿ ಆಫ್ ಇಂಡಿಯಾ’ ಒಂದು ಅದ್ಭುತವಾದ ಡಾಕ್ಯುಮೆಂಟರಿ. ಈ ಡಾಕ್ಯುಮೆಂಟರಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಪ್ರತ್ಯೇಕತೆ, ಈಗಿನ ಸಂಬಂಧ, ಯುದ್ಧದ ಕುರಿತು ಸಾಕಷ್ಟು ಮಾಹಿತಿ ಇದೆ. ಜೊತೆಗೆ ಭಾರತದ ವಿವಿಧತೆ, ಇಲ್ಲಿನ ಸಂಸ್ಕೃತಿ, ಆಚರಣೆ ಹೀಗೆ ಹಲವಾರು ವಿಷಯಗಳ ಮಾಹಿತಿಯೂ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ