
ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಹೆಸರಲ್ಲಿ ಮೋಸ ನಡೆಯುತ್ತಿದೆ. ಆನ್ಲೈನ್ನಲ್ಲಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸೋನು ನಿಗಮ್ ಅವರು ಹಲವು ವರ್ಷಗಳಿಂದ ಟ್ವಿಟರ್‌ನಲ್ಲಿ ಆ್ಯಕ್ಟೀವ್ ಆಗಿಲ್ಲ. ಆದಾಗ್ಯೂ ಅವರ ಹೆಸರಲ್ಲಿ ಖಾತೆ ತೆರೆಯಲಾಗಿದೆ. ಸೋನು ನಿಗಮ್ ಅವರ ನಿಜವಾದ ಖಾತೆ ಎಂದು ಬಿಂಬಿಸಿಕೊಳ್ಳುತ್ತಾ, ವಿವಾದಾತ್ಮಕ ವಿಚಾರಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಇದು ನಟನ ಗಮನಕ್ಕೆ ಬಂದಿದೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.
‘ಆನ್ಲೈನ್ನಲ್ಲಿ ನನ್ನ ಐಡೆಂಟಿಟಿಯನ್ನು ಯಾರೋ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ತಂಡದವರು ಯಾವುದೇ ಕಾರಣಕ್ಕೂ ಯಾರನ್ನೂ ಸಂಪರ್ಕಿಸಿಲ್ಲ. ನನ್ನ ಹೆಸರಲ್ಲಿ ಯಾವುದಾದರೂ ಫೇಕ್ ಖಾತೆ ಕಂಡರೆ ಅದನ್ನು ರಿಪೋರ್ಟ್ ಮಾಡಿ ಮತ್ತು ಬ್ಲಾಕ್ ಮಾಡಿ’ ಎಂದು ಸೋನು ನಿಗಮ್ ಅವರು ಕೋರಿದ್ದಾರೆ.
‘ನಾನು ಟ್ವಿಟರ್ನ ಕಳೆದ 8 ವರ್ಷಗಳಿಂದ ಬಳಸುತ್ತಿಲ್ಲ. ಆದಾಗ್ಯೂ ನನ್ನ ಹೆಸರಲ್ಲಿ ಕೆಲವರು ಖಾತೆ ಮಾಡಿಕೊಂಡಿದ್ದಾರೆ. ವಿವಾದಾತ್ಮಕ ವಿಚಾರಗಳನ್ನು ಅದರಲ್ಲಿ ಪೋಸ್ಟ್ ಮಾಡುವ ಕೆಲಸ ಮಾಡುತ್ತಾ ಇದ್ದಾರೆ’ ಎಂದು ಅವರು ಆತಂಕ ಹೊರಹಾಕಿದ್ದಾರೆ.
‘ಈ ವಿಚಾರವನ್ನು ನನ್ನ ಗಮನಕ್ಕೆ ತಂದ ಎಲ್ಲರಿಗೂ ಧನ್ಯವಾದ. ನನ್ನನ್ನು ಅರ್ಥೈಸಿಕೊಂಡ ನಿಮಗೆ ಧನ್ಯವಾದ’ ಎಂದು ಹೇಳಿದ್ದಾರೆ ಅವರು. ಇದನ್ನು ಸೋನು ನಿಗಮ್ ಅವರ ಅಭಿಮಾನಿಗಳು ಮತ್ತಷ್ಟು ಶೇರ್ ಮಾಡಿಕೊಳ್ಳುತ್ತಾ ಇದ್ದಾರೆ.
ಮಾರ್ಚ್ ತಿಂಗಳಲ್ಲಿ ಶ್ರೇಯಾ ಘೋಷಾಲ್ ಅವರ ಖಾತೆಯೂ ಹ್ಯಾಕ್ ಆಗಿತ್ತು. ಆದರೆ, ಹೆಚ್ಚು ಹಾನಿ ಸಂಭವಿಸುವ ಮೊದಲೇ ಈ ಖಾತೆಯನ್ನು ಮರಳಿ ಪಡೆಯಲಾಯಿತು. ಸೆಲಿಬ್ರಿಟಿಗಳ ಹೆಸರಲ್ಲಿ ನಕಲಿ ಖಾತೆ ಸೃಷ್ಟಿ ಮಾಡುವುದು ಹಾಗೂ ಖಾತೆ ಹ್ಯಾಕ್ ಮಾಡೋದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ: ‘ನೀವು ಗೆದ್ದ ಮನಸ್ಸುಗಳಿಗಿಂತ ದೊಡ್ಡದು ಯಾವುದೂ ಇಲ್ಲ’; ಬೇಸರದಲ್ಲಿರೋ ಸೋನು ನಿಗಮ್ ಬೆಂಬಲಕ್ಕೆ ನಿಂತ ಸಂಗೀತಾ ಶೃಂಗೇರಿ
ಅನೇಕ ಸೆಲೆಬ್ರಿಟಿಗಳು ಸಿನಿಮಾ ಪ್ರಚಾರಕ್ಕಾಗಿ ಸೋಶಿಯಲ್ ಮೀಡಿಯಾ ಖಾತೆ ಬಳಕೆ ಮಾಡುತ್ತಾರೆ. ಆದರೆ, ಇನ್ನೂ ಕೆಲವರು ಇದನ್ನು ಬಳಕೆ ಮಾಡಲು ಹೆಚ್ಚು ಇಷ್ಟಪಡೋದಿಲ್ಲ. ಟಾಕ್ಸಿಕ್ ಎಂಬ ಕಾರಣಕ್ಕೆ ಇದರಿಂದ ದೂರವೇ ಇರಲು ಹೆಚ್ಚು ಇಷ್ಟಪಡುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.