ನನ್ನ ಜೊತೆ ಮಲಗಿದ್ರೆ ಏನು ಬೇಕಾದರೂ ಕೊಡುತ್ತೇನೆ; ಪ್ರಾಧ್ಯಾಪಕನಿಂದ ಬಂದ ಆಹ್ವಾನ ಕೇಳಿ ನಟಿ ಶಾಕ್​

Soundarya Bala Nandakumar: ಸಾಮಾಜಿಕ ಜಾಲತಾಣದಲ್ಲಿ ನಟಿಯರ ಖಾಸಗಿ ವಿಚಾರದ ಬಗ್ಗೆ ಅನೇಕರು ಪ್ರಶ್ನೆ ಮಾಡುತ್ತಾರೆ. ಕೆಲವರು ಹಗುರವಾಗಿ ಮಾತನಾಡುತ್ತಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಇದನ್ನು ನಿರ್ಲಕ್ಷಿಸುತ್ತಾರೆ.

ನನ್ನ ಜೊತೆ ಮಲಗಿದ್ರೆ ಏನು ಬೇಕಾದರೂ ಕೊಡುತ್ತೇನೆ; ಪ್ರಾಧ್ಯಾಪಕನಿಂದ ಬಂದ ಆಹ್ವಾನ ಕೇಳಿ ನಟಿ ಶಾಕ್​
ಸೌಂದರ್ಯಾ ಬಾಲ

Updated on: May 21, 2021 | 10:57 PM

Soundarya Bala Nandakumar: ಇತ್ತೀಚಿನ ದಿನಗಳಲ್ಲಿ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರತಿಯೊಂದು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಕೆಲವೊಮ್ಮೆ ಅಭಿಮಾನಿಗಳಿಂದ ಅವರು ಅಶ್ಲೀಲ ಮೆಸೇಜ್ ಸ್ವೀಕರಿಸಿದ್ದಿದೆ. ಮಾಸ್ಟರ್ ಚಿತ್ರದಲ್ಲಿ ವಿಜಯ್ ಅವರೊಂದಿಗೆ ನಟಿಸಿದ ಸೌಂದರ್ಯಾ ಬಾಲ ನಂದಕುಮಾರ್ ಅವರಿಗೂ ಹೀಗೆಯೇ ಆಗಿದೆ. ಪ್ರಾಧ್ಯಾಪಕನೋರ್ವ ತಮ್ಮ ಜತೆ ಮಲಗುವಂತೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ಕೋಪಗೊಂಡಿರುವ ಅವರು, ಈ ವಿಚಾರವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಟಿಯರ ಖಾಸಗಿ ವಿಚಾರದ ಬಗ್ಗೆ ಅನೇಕರು ಪ್ರಶ್ನೆ ಮಾಡುತ್ತಾರೆ. ಕೆಲವರು ಹಗುರವಾಗಿ ಮಾತನಾಡುತ್ತಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಇದನ್ನು ನಿರ್ಲಕ್ಷಿಸುತ್ತಾರೆ. ತೀವ್ರ ಕೆಟ್ಟದಾಗಿ ಕಮೆಂಟ್​ ಮಾಡಿದ್ದರೆ ಅಂಥವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರ ಎದುರೇ ನಟಿಯರು ತಿರುಗೇಟು ನೀಡುತ್ತಾರೆ. ಸೌಂದರ್ಯ ಕೂಡ ಹೀಗೆಯೇ ಮಾಡಿದ್ದಾರೆ.

ಒಬ್ಬ ವ್ಯಕ್ತಿ ತನ್ನನ್ನು ಇನ್ಸ್ಟಾಗ್ರಾಮ್ನಲ್ಲಿ ಉಪನ್ಯಾಸಕ ಎಂದು ಸೌಂದರ್ಯಗೆ ಪರಿಚಯಿಸಿಕೊಂಡಿದ್ದ. ಆತ ಮೆಸೇಜ್​ ಮಾಡುವಾಗ ನಟಿಯ ಜತೆ ಅಸಭ್ಯವಾಗಿ ಮಾತನಾಡಿದ್ದಾನೆ. ಆತ ನಟಿಯೊಂದಿಗೆ ಲೈಂಗಿಕ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ನೀವು ನನ್ನೊಂದಿಗೆ ಮಲಗುತ್ತೀರಾ? ಹಾಗೆ ಮಾಡಿದರೆ ನಿಮಗೆ ಏನು ಬೇಕಾದರೂ ನಾನು ಕೊಡುತ್ತೇನೆ ಎಂದು ಆತ ಮೆಸೇಜ್​ ಮಾಡಿದ್ದಾನೆ.

ಮೆಸೇಜ್ ಮಾಡಿದ ವ್ಯಕ್ತಿ ಸೌಂದರ್ಯ ಅವರನ್ನು ಬ್ಲಾಕ್​ ಮಾಡಿದ್ದಾನಂತೆ. ಈ ಸ್ಕ್ರೀನ್​ ಶಾಟ್​ ಹಂಚಿಕೊಂಡಿರುವ ಸೌಂದರ್ಯ, ಸಮಾಜಕ್ಕೆ ಕೀಟವಾಗಿರುವ ಆ ವ್ಯಕ್ತಿಯನ್ನು ಖಂಡಿತವಾಗಿಯೂ ಹಿಡಿಯುತ್ತೇನೆ ಎಂದು ಶಪಥ ಮಾಡಿದ್ದಾರೆ.

ಸೌಂದರ್ಯ ನಂದಕುಮಾರ್ ಅವರು ಗಾಯಕಿಯಾಗಿ ಬಂದು ಸೂಪರ್ ಸಿಂಗರ್ 3, 4, 5 ಸೀಸನ್​ನಲ್ಲಿ ಭಾಗವಹಿಸಿದರು. ಬಿಗ್ ಬಾಸ್ ತಮಿಳು 3ನೇ ಸೀಸನ್​ನಲ್ಲಿ ಅತಿಥಿಯಾಗಿ ಮನೆ ಒಳಗೆ ತೆರಳಿದ್ದರು. ಅವರು ರಜನಿಕಾಂತ್ ನಟನೆಯ ಕಬಾಲಿ, ವಿಜಯ್ ಮಾಸ್ಟರ್ ನಟನೆಯ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಒದಿ: ರಾಧೆ ನೋಡಿದ ಅಭಿಮಾನಿಗಳಿಗೆ ನಿರಾಸೆ; ತೆಲುಗು ಸಿನಿಮಾ ರಿಮೇಕ್​ ಮಾಡೋಕೆ ಮುಂದಾದ ಸಲ್ಲು

Radhika Apte: ನಗ್ನ ವಿಡಿಯೋ ಲೀಕ್​; 4 ದಿನ ಮನೆಯಿಂದ ಹೊರಬಂದಿರಲಿಲ್ಲ ನಟಿ ರಾಧಿಕಾ ಆಪ್ಟೆ

Published On - 9:34 pm, Fri, 21 May 21