ಸತತ ಸೋಲಿನಿಂದ ಕಂಗೆಟ್ಟಿರೋ ಶ್ರೀಲೀಲಾಗೆ ಆಫರ್ ಕೊಟ್ಟ ಪ್ರಭಾಸ್ ನಿರ್ದೇಶಕ

ಹನು ರಾಘವಪುಡಿ ಹಾಗೂ ಪ್ರಭಾಸ್ ಒಟ್ಟಾಗಿ ಸೇರಿ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ನಿರ್ದೇಶಕರು ಹೀರೋಯಿನ್ ಹುಡುಕಾಟದಲ್ಲಿ ಇದ್ದಾರೆ ಎನ್ನಲಾಗಿತ್ತು. ಹೀಗಿರುವಾಗಲೇ ಶ್ರೀಲೀಲಾ ಜೊತೆ ಶೂಟ್​ನಲ್ಲಿ ಇರೋ ಫೋಟೋ ವೈರಲ್ ಆಗಿತ್ತು. ಇದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆದರು. ಆದರೆ, ಇದು ಜಾಹೀರಾತು ಶೂಟ್​ನ ಫೋಟೋ ಎಂಬುದು ತಿಳಿದು ಬಂದಿದೆ.  

ಸತತ ಸೋಲಿನಿಂದ ಕಂಗೆಟ್ಟಿರೋ ಶ್ರೀಲೀಲಾಗೆ ಆಫರ್ ಕೊಟ್ಟ ಪ್ರಭಾಸ್ ನಿರ್ದೇಶಕ
ಶ್ರೀಲೀಲಾ
Follow us
|

Updated on: Jun 10, 2024 | 7:33 AM

ಶ್ರೀಲೀಲಾ (Sreeleela) ಅವರು ಸದ್ಯ ಟಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಅಲ್ಲಿ ಭರ್ಜರಿ ಆಫರ್ ಸಿಗುತ್ತಿದೆ. ಆದರೆ, ಇತ್ತೀಚೆಗೆ ಹೇಳಿಕೊಳ್ಳುವಂಥ ಒಳ್ಳೆಯ ಗೆಲುವು ಸಿಕ್ಕಿಲ್ಲ. ಈ ವಿಚಾರ ಶ್ರೀಲೀಲಾಗೆ ಸಖತ್ ಬೇಸರ ಮೂಡಿಸಿದೆ. ಶ್ರೀಲೀಲಾ ಅವರು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಿರುವಾಗಲೇ ಅವರಿಗೆ ಪ್ರಭಾಸ್ ಸಿನಿಮಾ ನಿರ್ದೇಶಕ ಹನು ರಾಘವಪುಡಿ ಅವರು ಆಫರ್ ಒಂದನ್ನು ನೀಡಿದ್ದಾರೆ. ಇದನ್ನು ನೋಡಿ ಪ್ರಭಾಸ್ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಆದರು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ.

ಹನು ರಾಘವಪುಡಿ ಹಾಗೂ ಪ್ರಭಾಸ್ ಒಟ್ಟಾಗಿ ಸೇರಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಈ ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಸದ್ಯ ನಿರ್ದೇಶಕರು ಹೀರೋಯಿನ್ ಹುಡುಕಾಟದಲ್ಲಿ ಇದ್ದಾರೆ ಎನ್ನಲಾಗಿತ್ತು. ಹೀಗಿರುವಾಗಲೇ ಶ್ರೀಲೀಲಾ ಜೊತೆ ಶೂಟ್​ನಲ್ಲಿ ಇರೋ ಫೋಟೋ ವೈರಲ್ ಆಗಿತ್ತು. ಇದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆದರು. ಆದರೆ, ಇದು ಜಾಹೀರಾತು ಶೂಟ್​ನ ಫೋಟೋ ಎಂಬುದು ತಿಳಿದು ಬಂದಿದೆ.

ಶ್ರೀಲೀಲಾ ಅಮೆರಿಕ ತೆರಳಿದ್ದರು. ಆ ಬಳಿಕ ಅವರು ಭಾರತಕ್ಕೆ ಮರಳಿದರು. ಈ ವೇಳೆ ಅವರು ಜಾಹೀರಾತು ಶೂಟ್​ನಲ್ಲಿ ಭಾಗಿ ಆದರು. ಇದನ್ನು ಹನು ರಾಘವಪುಡಿ ಅವರೇ ನಿರ್ದೇಶನ ಮಾಡಿದ್ದಾರೆ. ಈ ಕಾರಣಕ್ಕೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಕೆಲವರು ಇದನ್ನು ತಪ್ಪಾಗಿ ಭಾವಿಸಿದ್ದಾರೆ. ಪ್ರಭಾಸ್ ಸಿನಿಮಾಗೆ ಶ್ರೀಲೀಲಾ ನಾಯಕಿ ಅಲ್ಲ ಅನ್ನೋದು ಇದರಿಂದ ಸ್ಪಷ್ಟವಾಗಿದೆ.

ಪ್ರಭಾಸ್ ಹಾಗೂ ಹನು ರಾಘವಪುಡಿ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಬಹುತೇಕ ಕೊನೆಯ ಹಂತಕ್ಕೆ ಬಂದಿವೆ. ರೆಟ್ರೋ ಕಥೆಯನ್ನು ಸಿನಿಮಾ ಹೊಂದಿದೆ. ಈ ಚಿತ್ರಕ್ಕೆ ನಾಯಕಿಯಾಗಿ ಯಾರು ಆಯ್ಕೆ ಆಗುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಸಿನಿಮಾ ಘೋಷಣೆ ಸಂದರ್ಭದಲ್ಲಿ ಈ ಬಗ್ಗೆ ಉತ್ತರ ಸಿಗಲಿದೆ.

ಇದನ್ನೂ ಓದಿ: ಪ್ರಭಾಸ್ ಕೆರಿಯರ್​ನ ಫ್ಲಾಪ್ ಸಿನಿಮಾ ಮರು ಬಿಡುಗಡೆ, ಇದು ಹಣ ಮಾಡುವ ತಂತ್ರ

ವಿಜಯ್ ದೇವರಕೊಂಡ ಅವರ 12ನೇ ಚಿತ್ರಕ್ಕೆ ‘ಸಿತಾರಾ ಎಂಟರ್​ಟೇನ್​ಮೆಂಟ್’ ಬಂಡವಾಳ ಹೂಡುತ್ತಿದೆ. ಈ ಮೊದಲು ಶ್ರೀಲೀಲಾ ಅವರನ್ನು ಈ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ, ಅವರು ಚಿತ್ರದಿಂದ ಹೊರ ನಡೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..