ಕ್ರಿಕೆಟರ್ ಜೊತೆಗೆ ಶ್ರೀಲೀಲಾ ಹೆಸರು ಥಳುಕು: ಯಾರದು ಯುವಕ?

Sreeleela rumors: ಇತ್ತೀಚೆಗೆ ಬಾಲಿವುಡ್​​ಗೆ ಕಾಲಿಟ್ಟಿರುವ ಶ್ರೀಲೀಲಾಗೆ ಅಲ್ಲಿಯೂ ಸಹ ಭರ್ಜರಿ ಬೇಡಿಕೆ ಶುರುವಾಗಿದೆ. ಅದ್ಭುತ ಸೌಂದರ್ಯ, ನೃತ್ಯ ಮತ್ತು ನಟನಾ ಪ್ರತಿಭೆ ಇರುವ ಶ್ರೀಲೀಲಾ ಜೊತೆಗೆ ಕೆಲಸ ಮಾಡಲು ನಿರ್ದೇಶಕರು, ನಟರು ಕಾಯುತ್ತಿದ್ದಾರೆ. ಅಂದಹಾಗೆ ಇದೀಗ ಶ್ರೀಲೀಲಾ ಹೆಸರು ಗಾಸಿಪ್​​ ಕಾಲಂನಲ್ಲಿ ಕೇಳಿ ಬಂದಿದೆ. ಕ್ರಿಕೆಟರ್ ಒಬ್ಬರ ಜೊತೆಗೆ ಶ್ರೀಲೀಲಾ ಹೆಸರು ಥಳುಕು ಹಾಕಿಕೊಂಡಿದೆ.

ಕ್ರಿಕೆಟರ್ ಜೊತೆಗೆ ಶ್ರೀಲೀಲಾ ಹೆಸರು ಥಳುಕು: ಯಾರದು ಯುವಕ?
Sreeleela Varma

Updated on: May 17, 2026 | 3:31 PM

ಕನ್ನಡದ ನಟಿ ಶ್ರೀಲೀಲಾ (Sreeleela) ಇದೀಗ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಮಲಯಾಳಂ ಹೊರತುಪಡಿಸಿ ಭಾರತದ ಇನ್ನುಳಿದ ಪ್ರಮುಖ ಸಿನಿಮಾ ರಂಗಗಳಲ್ಲಿ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್​​ಗೆ ಕಾಲಿಟ್ಟಿರುವ ಶ್ರೀಲೀಲಾಗೆ ಅಲ್ಲಿಯೂ ಸಹ ಭರ್ಜರಿ ಬೇಡಿಕೆ ಶುರುವಾಗಿದೆ. ಅದ್ಭುತ ಸೌಂದರ್ಯ, ನೃತ್ಯ ಮತ್ತು ನಟನಾ ಪ್ರತಿಭೆ ಇರುವ ಶ್ರೀಲೀಲಾ ಜೊತೆಗೆ ಕೆಲಸ ಮಾಡಲು ನಿರ್ದೇಶಕರು, ನಟರು ಕಾಯುತ್ತಿದ್ದಾರೆ. ಅಂದಹಾಗೆ ಇದೀಗ ಶ್ರೀಲೀಲಾ ಹೆಸರು ಗಾಸಿಪ್​​ ಕಾಲಂನಲ್ಲಿ ಕೇಳಿ ಬಂದಿದೆ. ಕ್ರಿಕೆಟರ್ ಒಬ್ಬರ ಜೊತೆಗೆ ಶ್ರೀಲೀಲಾ ಹೆಸರು ಥಳುಕು ಹಾಕಿಕೊಂಡಿದೆ.

ತೆಲುಗು ಚಿತ್ರರಂಗದ ಜನಪ್ರಿಯ ನಟಿ ಆಗಿರುವ ಶ್ರೀಲೀಲಾ ಹೆಸರು ಇದೀಗ ತೆಲುಗಿನ ಕ್ರಿಕೆಟರ್ ಒಬ್ಬರೊಟ್ಟಿಗೆ ಕೇಳಿ ಬರುತ್ತಿದೆ. ಪ್ರಸ್ತುತ ಮುಂಬೈ ಇಂಡಿಯನ್ಸ್ ಪರ ಅದ್ಧೂರಿ ಪ್ರದರ್ಶನ ತೋರುತ್ತಿರುವ ಕ್ರಿಕೆಟಿಗ ತಿಲಕ್ ವರ್ಮಾ ಜೊತೆಗೆ ಶ್ರೀಲೀಲಾ ಹೆಸರು ಕೇಳಿ ಬರುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಏನೇನೋ ಥಿಯರಿಗಳು ಹರಿದಾಡುತ್ತಿವೆ. ಅಂದಹಾಗೆ ಈ ಸುದ್ದಿ ಶುರುವಾಗಲು ಕಾರಣವಾಗಿರುವುದು ಮುಂಬೈ ಇಂಡಿಯನ್ಸ್​​ನ ಮ್ಯಾಚೊಂದು.

ಮುಂಬೈ ಇಂಡಿಯನ್ಸ್​​ನ ಮ್ಯಾಚ್ ಒಂದರಲ್ಲಿ ಶ್ರೀಲೀಲಾ ಅವರ ತಾಯಿ, ಪ್ಲೇಯರ್​​ಗಳ ಕುಟುಂಬದವರು ಕೂರುವ ಫ್ಯಾಮಿಲಿ ಬಾಕ್ಸ್​​ನಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಈ ಸುದ್ದಿಗಳ ವರಾತ ಶುರುವಾಯ್ತು. ಅಸಲಿಗೆ ಶ್ರೀಲೀಲಾ ಮತ್ತು ತಿಲಕ್ ವರ್ಮಾ ಒಟ್ಟಿಗೆ ಎಲ್ಲಿಯೂ ಕಾಣಿಸಿಕೊಂಡಿದ್ದೇ ಇಲ್ಲ. ಇಬ್ಬರಿಗೂ ಗೆಳೆತನ ಇದೆಯೆಂಬ ಬಗ್ಗೆ ಯಾವ ಸುಳಿವು ಸಹ ಇರಲಿಲ್ಲ. ಆದರೆ ಶ್ರೀಲೀಲಾರ ತಾಯಿ ಮುಂಬೈ ಫ್ಯಾಮಿಲಿ ಬಾಕ್ಸ್​​ನಲ್ಲಿ ಕಾಣಿಸಿಕೊಂಡ ಬಳಿಕ ಈ ಸುದ್ದಿ ಶುರುವಾಗಿದೆ.

ಇದನ್ನೂ ಓದಿ:ಪ್ರಕೃತಿ ಸೌಂದರ್ಯದ ನಡುವೆ ಕಳೆದು ಹೋದ ನಟಿ ಶ್ರೀಲೀಲಾ

ಅಂದಹಾಗೆ ಶ್ರೀಲೀಲಾ ತಮ್ಮ ವೃತ್ತಿಯ ಬಗ್ಗೆ ಬಹಳ ಗಂಭೀರವಾಗಿದ್ದು, ಯಾವುದೇ ಅನವಶ್ಯಕ ವಿವಾದಗಳಿಗೆ ಬೀಳದೆ ತಮ್ಮ ಪಾಡಿಗೆ ತಾವು ಸಿನಿಮಾಗಳಲ್ಲಿ ನಟಿಸುತ್ತಾ, ವಿದೇಶ ಪ್ರವಾಸಗಳನ್ನು ಮಾಡುತ್ತಾ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ. ಆದರೆ ಕೆಲವರು ಶ್ರೀಲೀಲಾ ಬಗ್ಗೆ ಇದೀಗ ಇಲ್ಲ-ಸಲ್ಲದ ಸುದ್ದಿಗಳನ್ನು ಹರಿಯ ಬಿಡುತ್ತಿದ್ದಾರೆ.

ಕೆಲ ತಿಂಗಳ ಹಿಂದೆ ಶ್ರೀಲೀಲಾ ಹೆಸರು ಬಾಲಿವುಡ್ ಯುವ ನಟ ಕಾರ್ತಿಕ್ ಆರ್ಯನ್ ಜೊತೆಗೆ ಕೆಲವರು ಥಳುಕು ಹಾಕಿದ್ದರು. ಕಾರ್ತಿಕ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಲೀಲಾ ಭಾಗಿ ಆಗಿದ್ದರು. ಅದಾದ ಬಳಿಕ ಖಾಸಗಿ ಟಿವಿ ಚಾನೆಲ್ ಕಾರ್ಯಕ್ರಮದಲ್ಲಿ ಕಾರ್ತಿಕ್ ಆರ್ಯನ್ ತಾಯಿ, ‘ನಮಗೆ ಡಾಕ್ಟರ್ ಸೊಸೆ ಬೇಕು’ ಎಂದು ಹೇಳಿದ್ದರು. ಹಾಗಾಗಿ ಈ ಇಬ್ಬರ ನಡುವೆ ಪ್ರೀತಿ ಇದೆ ಎಂಬ ಗಾಸಿಪ್ ಹರಿದಾಡಿತ್ತು. ಬಳಿಕ ಅದು ಸುಳ್ಳಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us