‘ಪುಷ್ಪ 2’ ಸಿನಿಮಾದ ಅವಕಾಶ ನಿರಾಕರಿಸಿದ ಕನ್ನಡದ ಬೆಡಗಿ: ಕಾರಣವೇನು?

Pushpa 2: ಪ್ಯಾನ್ ವರ್ಲ್ಡ್ ಸಿನಿಮಾ ಆಗಲು ಯೋಜಿಸಿರುವ ‘ಪುಷ್ಪ 2’ ಸಿನಿಮಾದ ಭಾಗವಾಗಲು ನಟ-ನಟಿಯರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಕರ್ನಾಟಕದ ನಟಿ, ‘ಪುಷ್ಪ 2’ ಸಿನಿಮಾದ ಅವಕಾಶವನ್ನು ನಿರಾಕರಿಸಿದ್ದಾರೆ.

‘ಪುಷ್ಪ 2’ ಸಿನಿಮಾದ ಅವಕಾಶ ನಿರಾಕರಿಸಿದ ಕನ್ನಡದ ಬೆಡಗಿ: ಕಾರಣವೇನು?
ಪುಷ್ಪ2
Follow us
ಮಂಜುನಾಥ ಸಿ.
|

Updated on: Mar 09, 2024 | 4:54 PM

ಪುಷ್ಪ 2’ (Pushpa 2) ಸಿನಿಮಾ ಚಿತ್ರೀಕರಣ ಹಂತದಲ್ಲಿರುವಾಗಲೇ ಭಾರಿ ದೊಡ್ಡ ಕ್ರೇಜ್ ಸೃಷ್ಟಿಸಿದೆ. ಸಿನಿಮಾದ ಚಿತ್ರೀಕರಣ ಮುಗಿಯುವ ಮುನ್ನವೇ ವಿಶ್ವದ ಯಾವ-ಯಾವ ದೇಶಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಬೇಕೆಂಬ ಲೆಕ್ಕಾಚಾರ ಮಾಡಲಾಗುತ್ತಿದೆ. ‘ಪುಷ್ಪ 2’ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಆಗಲಿದೆ. ಇದೇ ಕಾರಣಕ್ಕೆ ‘ಪುಷ್ಪ 2’ ಜೊತೆ ಗುರುತಿಸಿಕೊಳ್ಳಲು ನಟ-ನಟಿಯರು, ತಂತ್ರಜ್ಞರು ಕಾತರರಾಗಿದ್ದಾರೆ. ಆದರೆ ‘ಪುಷ್ಪ 2’ ಸಿನಿಮಾದ ಭಾಗವಾಗುವ ಅವಕಾಶ ಅರಸಿ ಬಂದರೂ ಸಹ ಕರ್ನಾಟಕದ ನಟಿಯೊಬ್ಬರು ಅವಕಾಶವನ್ನು ಸಾರಸಗಟಾಗಿ ನಿರಾಕರಿಸಿದ್ದಾರೆ. ಟಾಲಿವುಡ್ ಸಿನಿಮಾಗಳಲ್ಲಿ ಸಖತ್ ಆಗಿ ಮಿಂಚುತ್ತಿರುವ ಕರ್ನಾಟಕದ ನಟಿ ಶ್ರೀಲೀಲಾ ಅವರು ‘ಪುಷ್ಪ 2’ ಸಿನಿಮಾದ ಅವಕಾಶ ನಿರಾಕರಿಸಿದ್ದಾರೆ. ಕಾರಣವೇನು?

ಕನ್ನಡದ ನಟಿ ಶ್ರೀಲೀಲಾ, ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಒಂದರ ಮೇಲೊಂದು ದೊಡ್ಡ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ತಮ್ಮ ಪ್ರತಿಭೆ ಸಾಬೀತುಪಡಿಸಿಕೊಂಡಿದ್ದಾರೆ. ಈಗಾಗಲೇ ಮಹೇಶ್ ಬಾಬು, ನಂದಮೂರಿ ಬಾಲಕೃಷ್ಣ, ರವಿತೇಜ ಅಂಥಹಾ ದೊಡ್ಡ ನಟರ ಜೊತೆ ತೆರೆ ಹಂಚಿಕೊಂಡಿರುವ ಶ್ರೀಲೀಲಾಗೆ, ‘ಪುಷ್ಪ 2’ ಸಿನಿಮಾದ ಭಾಗವಾಗುವ ಅವಕಾಶ ಅರಸಿ ಬಂದಿತ್ತು. ಆದರೆ ಶ್ರೀಲೀಲಾ ಅವಕಾವನ್ನು ನಿರಾಕರಿಸಿದ್ದಾರೆ. ಇದಕ್ಕೆ ಕಾರಣವೂ ಇದೆ.

ಇದನ್ನೂ ಓದಿ:ಆಗಸ್ಟ್​ 15ರ ಅಖಾಡದಲ್ಲಿ ‘ಪುಷ್ಪ 2’ ಎದುರು ಘಟಾನುಘಟಿ ನಟರ ಪೈಪೋಟಿ?

‘ಪುಷ್ಪ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಈ ಹಿಂದೆ ಬಿಡುಗಡೆ ಆಗಿದ್ದ ‘ಪುಷ್ಪ’ ಸಿನಿಮಾನಲ್ಲಿ ಸಮಂತಾ ‘ಊ ಅಂಟಾವ, ಊ ಹು ಅಂಟಾವ’ ಎಂಬ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಆ ಹಾಡು ಭಾರಿ ಹಿಟ್ ಆಗಿತ್ತು. ಐಟಂ ಹಾಡಾದರೂ ಸಹ ಸಮಂತಾಗೆ ಸಖತ್ ಪ್ರಶಂಸೆಗಳು ಧಕ್ಕುವಂತೆ ಮಾಡುವ ಜೊತೆಗೆ ಹೊಸ ಅವಕಾಶಗಳನ್ನು ಸಹ ತಂದುಕೊಟ್ಟಿತು. ಆದರೆ ‘ಪುಷ್ಪ 2’ ಸಿನಿಮಾಕ್ಕೆ ಬೇರೆ ನಟಿಯಿಂದ ಐಟಂ ಹಾಡಿಗೆ ಡ್ಯಾನ್ಸ್ ಮಾಡಿಸುವ ಇರಾದೆಯಲ್ಲಿ, ‘ಪುಷ್ಪ’ ನಿರ್ದೇಶಕ ಸುಕುಮಾರ್ ಅವರು ಶ್ರೀಲೀಲಾರನ್ನು ಕೇಳಿದ್ದರಂತೆ. ಆದರೆ ಶ್ರೀಲೀಲಾ ಒಲ್ಲೆ ಎಂದಿದ್ದಾರೆ.

ಶ್ರೀಲೀಲಾ ಬಹಳ ಒಳ್ಳೆಯ ಡ್ಯಾನ್ಸರ್, ಗ್ಲಾಮರಸ್ ಲುಕ್​ಗಳನ್ನು ಸಹ ಹೊಂದಿದ್ದಾರೆ. ‘ಪುಷ್ಪ 2’ ಸಿನಿಮಾದ ಐಟಂ ಹಾಡಿಗೆ ಚೆನ್ನಾಗಿ ಸೂಟ್ ಆಗುತ್ತಾರೆಂಬ ಕಾರಣಕ್ಕೆ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ನಾಯಕಿಯಾಗಿ ಬೇಡಿಯಲ್ಲಿರುವ ಶ್ರೀಲೀಲಾ, ವೃತ್ತಿಯ ಈ ಹಂತದಲ್ಲಿ ಐಟಂ ಹಾಡಿನಲ್ಲಿ ಕಾಣಿಸಿಕೊಂಡರೆ ತಮ್ಮ ಕೆರಿಯರ್​ಗೆ ಹೊಡೆತ ಬೀಳಬಹುದೆಂಬ ಕಾರಣಕ್ಕೆ ಅವಕಾಶವನ್ನು ನಯವಾಗಿ ತಿರಸ್ಕರಿಸಿದ್ದಾರೆ. ಶ್ರೀಲೀಲಾ ಇತ್ತೀಚೆಗೆ ಮಹೇಶ್ ಬಾಬು ಜೊತೆಗೆ ನಟಿಸಿದ್ದ ‘ಗುಂಟೂರು ಖಾರಂ’ ಸಿನಿಮಾ ದೊಡ್ಡ ಹಿಟ್ ಆಗಿದೆ. ಇದೀಗ ಇನ್ನೂ ಕೆಲವು ಹೊಸ ಸಿನಿಮಾಗಳನ್ನು ಶ್ರೀಲೀಲಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ