ಮುಟ್ಟಿನ ಬಗ್ಗೆ ಪ್ರಶ್ನೆಗೆ ಶ್ರೀಲೀಲಾ ಕೊಟ್ಟ ದಿಟ್ಟ ಉತ್ತರ

Sreeleela: ಪೀರಿಯಡ್ಸ್ ಅಥವಾ ಮುಟ್ಟಿನ ವಿಷಯವನ್ನು ಗುಟ್ಟು ಮಾಡುತ್ತಾರೆ ಸಾಕಷ್ಟು ಮಹಿಳೆಯರು. ಆದರೆ ಇತ್ತೀಚೆಗೆ ಕಾಲ, ಸಮಯ ಎಲ್ಲ ಬದಲಾಗುತ್ತಿದೆ. ಪೀರಿಯಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡಲಾಗುತ್ತಿದೆ. ಆದರೆ ಇತ್ತೀಚೆಗೆ ತುಸು ಭಿನ್ನ ಸಮಸ್ಯೆ ಎದುರಾಗಿದೆ. ಕೆಲ ಮಹಿಳೆಯರು, ಪೀರಿಯಡ್ಸ್ ತಮ್ಮ ಯಶಸ್ಸಿಗೆ ಅಡ್ಡಿ ಎಂಬಂತೆ ಬಿಂಬಿಸುವುದೂ ಸಹ ಇದೆ. ಆದರೆ ನಟಿ ಶ್ರೀಲೀಲಾ, ಇಂಥಹವರಿಗೆ ತಕ್ಕ ಉತ್ತರ ನೀಡಿದ್ದಾರೆ.

ಮುಟ್ಟಿನ ಬಗ್ಗೆ ಪ್ರಶ್ನೆಗೆ ಶ್ರೀಲೀಲಾ ಕೊಟ್ಟ ದಿಟ್ಟ ಉತ್ತರ
Sreeleela

Updated on: Apr 05, 2026 | 9:31 PM

ಬಹುತೇಕ ಮಹಿಳೆಯರು ತಮ್ಮದೇ ವೈಯಕ್ತಿಕ ಆರೋಗ್ಯ, ನೈರ್ಮಲ್ಯ ಕುರಿತಾಗಿ ಬಹಿರಂಗವಾಗಿ ಮಾತನಾಡುವುದಿಲ್ಲ. ವಿಶೇಷವಾಗಿ ಪೀರಿಯಡ್ಸ್ ಅಥವಾ ಮುಟ್ಟಿನ ವಿಷಯವನ್ನು ಗುಟ್ಟು ಮಾಡುವುದು ಸಹ ಇದೆ. ಆದರೆ ಇತ್ತೀಚೆಗೆ ಕಾಲ, ಸಮಯ ಎಲ್ಲ ಬದಲಾಗುತ್ತಿದೆ. ಪೀರಿಯಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡಲಾಗುತ್ತಿದೆ. ಆದರೆ ಇತ್ತೀಚೆಗೆ ತುಸು ಭಿನ್ನ ಸಮಸ್ಯೆ ಎದುರಾಗಿದೆ. ಕೆಲ ಮಹಿಳೆಯರು, ಪೀರಿಯಡ್ಸ್ ತಮ್ಮ ಯಶಸ್ಸಿಗೆ ಅಡ್ಡಿ ಎಂಬಂತೆ ಬಿಂಬಿಸುವುದೂ ಸಹ ಇದೆ. ಆದರೆ ನಟಿ ಶ್ರೀಲೀಲಾ, ಇಂಥಹವರಿಗೆ ತಕ್ಕ ಉತ್ತರ ನೀಡಿದ್ದಾರೆ.

ಇನ್ನೂ ಯುವ ನಟಿಯಾದರೂ ಸಹ ಸ್ಪಷ್ಟ ಯೋಚನೆ, ಆಲೋಚನೆಗಳನ್ನು ಹೊಂದಿರುವ ಶ್ರೀಲೀಲಾ, ಇತ್ತೀಚೆಗೆ ಮಹಿಳಾ ನೈರ್ಮಲ್ಯ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದರು. ಬಹುತೇಕ ಮಹಿಳೆಯರೇ ಇದ್ದ ಕಾರ್ಯಕ್ರಮದಲ್ಲಿ ಶ್ರೀಲೀಲಾಗೆ ಪೀರಿಯಡ್ಸ್ ಕುರಿತಾದ, ವಿಶೇಷವಾಗಿ ಸಿನಿಮಾ ಚಿತ್ರೀಕರಣದ ಸಂದರ್ಭಗಳಲ್ಲಿ ಪೀರಿಯಡ್ಸ್ ಅಡ್ಡಿ ಆಗುವುದಿಲ್ಲವೇ? ಎಂಬ ಪ್ರಶ್ನೆ ಎದುರಾಯ್ತು. ಅದಕ್ಕೆ ಶ್ರೀಲೀಲಾ ಕೊಟ್ಟ ಉತ್ತರ ಇದೀಗ ವೈರಲ್ ಆಗುತ್ತಿದೆ.

‘ನಾನು ಹಲವಾರು ಒಳ್ಳೆಯ ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದೇನೆ. ನನ್ನ ಹಿಟ್ ಆಗಿರುವ ಡ್ಯಾನ್ಸುಗಳೆಲ್ಲ ಬಹುತೇಕ ನನ್ನ ಪೀರಿಯಡ್ಸ್ ಸಮಯದಲ್ಲಿಯೇ ಚಿತ್ರೀಕರಣಗೊಂಡವು. ಆ ಸನ್ನಿವೇಶದಲ್ಲಿ ಚಿತ್ರೀಕರಿಸಿದ ಹಾಡುಗಳಿಗೆ ನನಗೆ ಹೆಚ್ಚು ಪ್ರಶಂಸೆ ಧಕ್ಕಿದೆ. ಪೀರಿಯಡ್ಸ್ ಎಂಬುದು ಒಬ್ಬ ಮಹಿಳೆಗೆ ನೆಪ ಆಗಬಾರದು. ಅದು ಸವಾಲಾಗಬೇಕು’ ಎಂದಿದ್ದಾರೆ ನಟಿ ಶ್ರೀಲೀಲಾ.

ಇದನ್ನೂ ಓದಿ:ನಟಿ ರಮ್ಯಾ ಬಗ್ಗೆ ಪ್ರೀತಿಯಿಂದ ಮಾತನಾಡಿದ ಶ್ರೀಲೀಲಾ: ಹೇಳಿದ್ದೇನು?

ಮುಂದುವರೆದು ಮಾತನಾಡಿ, ‘ನಾವು (ಮಹಿಳೆಯರು) ಸಮಾನವಾದ ಅವಕಾಶ, ಸಮಾನವಾದ ಶಕ್ತಿ, ಸಮಾನವಾದ ಹಕ್ಕುಗಳನ್ನು ಕೇಳುತ್ತಿರುವಾಗ ನಾವು ಪೀರಿಯಡ್ಸ್ ಅನ್ನು ನೆಪವಾಗಿ ಇರಿಸಿಕೊಂಡು ಹಿಂದುಳಿಯಲು ಹೇಗೆ ಸಾಧ್ಯ? ಮಹಿಳೆಯರಾದ ನಾವು ನಮ್ಮನ್ನು ನಾವು ದೈಹಿಕವಾಗಿ, ಮಾನಸಿಕ ಮಿತಿಗಳನ್ನು ಮೀರಬೇಕು. ನಮ್ಮನ್ನು ನಾವು ಪುಶ್ ಮಾಡಿಕೊಳ್ಳಬೇಕು. ನಮಗೆ ಪೀರಿಯಡ್ಸ್ ಎಂಬುದು ನೆಪ ಆಗಬಾರದು’ ಎಂದಿದ್ದಾರೆ ನಟಿ ಶ್ರೀಲೀಲಾ.

ನಟಿ ಶ್ರೀಲೀಲಾ, ಖುದ್ದು ವೈದ್ಯೆ ಸಹ ಆಗಿದ್ದಾರೆ. ಹಾಗಾಗಿಯೇ ಈ ವಿಷಯಗಳ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ. ಮಾಹಿತಿ ಇದೆ, ಹಾಗೂ ಇಂಥಹಾ ವಿಷಯಗಳ ಬಗ್ಗೆ ಗಟ್ಟಿಯಾಗಿ ಮಾತನಾಡುವಷ್ಟು ಧೈರ್ಯವನ್ನು ಅವರ ಜ್ಞಾನ ಅವರಿಗೆ ನೀಡಿದೆ. ಶ್ರೀಲೀಲಾರ ಮಾತುಗಳಿಗೆ ಮೆಚ್ಚುಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us