ಒಟಿಟಿಯಲ್ಲಿ ನೋಡಿ ಮಹೇಶ್ ಬಾಬು-ರಾಜಮೌಳಿ ಸಿನಿಮಾ ಇವೆಂಟ್​: ಯಾವಾಗ?

SS Rajamouli-Mahesh Babu: ‘ಆರ್​​ಆರ್​​ಆರ್’ ಸಿನಿಮಾ ಮೂಲಕ ಪ್ಯಾನ್ ವರ್ಲ್ಡ್ ನಿರ್ದೇಶಕ ಆಗಿರುವ ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನು ನಿಜಕ್ಕೂ ಹಾಲಿವುಡ್ ಲೆವೆಲ್​​​ನಲ್ಲಿ ಪ್ರಸೆಂಟ್ ಮಾಡಲು ಸಜ್ಜಾಗಿದ್ದಾರೆ. ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾದ ಹೆಸರು ಮತ್ತು ಟೀಸರ್ ಬಿಡುಗಡೆ ಇವೆಂಟ್ ನಡೆಯಲಿದ್ದು, ಇವೆಂಟ್ ಅನ್ನು ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಒಟಿಟಿಯಲ್ಲಿ ನೋಡಿ ಮಹೇಶ್ ಬಾಬು-ರಾಜಮೌಳಿ ಸಿನಿಮಾ ಇವೆಂಟ್​: ಯಾವಾಗ?
Mahesh Babu Rajamouli

Updated on: Nov 06, 2025 | 10:27 AM

ಮಹೇಶ್ ಬಾಬು (Mahesh Babu) ಈಗ ಪ್ಯಾನ್ ವರ್ಲ್ಡ್ ನಿರ್ದೇಶಕ. ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ರಾಜಮೌಳಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಜೇಮ್ಸ್ ಕ್ಯಾಮರನ್, ಸ್ಟಿವಲ್ ಸ್ಪೀಲ್​​ಬರ್ಗ್ ಅಂಥಹಾ ನಿರ್ದೇಶಕರೇ ರಾಜಮೌಳಿಯನ್ನು ಕೊಂಡಾಡಿದ್ದಾರೆ. ಇದೀಗ ರಾಜಮೌಳಿ ಹೊಸ ಸಿನಿಮಾವನ್ನು ಮಹೇಶ್ ಬಾಬು ಜೊತೆಗೆ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾವನ್ನು ವಿಶ್ವಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೇ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾದ ಪ್ರತಿ ಹೆಜ್ಜೆಯೂ ಗ್ರ್ಯಾಂಡ್ ಆಗಿರುವಂತೆ ಯೋಜನೆಯನ್ನು ರಾಜಮೌಳಿ ಹಾಕಿಕೊಂಡಿದ್ದಾರೆ.

ಸಿನಿಮಾದ ಒಂದು ಸಣ್ಣ ಪೋಸ್ಟರ್ ಹೊರತಾಗಿ ಇನ್ನೇನೂ ಬಹಿರಂಗವಾಗಿಲ್ಲ. ಇದೀಗ ಸಿನಿಮಾದ ಹೆಸರು ಘೋಷಣೆ ಮತ್ತು ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಮಾಡಲು ರಾಜಮೌಳಿ ಮುಂದಾಗಿದ್ದು, ಅದನ್ನೂ ಸಹ ಭಾರಿ ಅದ್ಧೂರಿಯಾಗಿಯೇ ಯೋಜನೆ ರೂಪಿಸಿದ್ದಾರೆ. ಟೀಸರ್ ಬಿಡುಗಡೆ ಕಾರ್ಯಕ್ರಮಗಳ ಇವೆಂಟ್​​ಗಳನ್ನು ಯೂಟ್ಯೂಬ್ ಲೈವ್​​​ ಮಾಡುವುದು ಸಾಮಾನ್ಯ. ಆದರೆ ರಾಜಮೌಳಿ ಅವರ ಸಿನಿಮಾದ ಇವೆಂಟ್ ನ ಹಕ್ಕುಗಳನ್ನು ಒಟಿಟಿಯೊಂದು ಖರೀದಿ ಮಾಡಿದ್ದು, ಇವೆಂಟ್ ಅನ್ನು ಒಟಿಟಿಯಲ್ಲಿ ಲೈವ್ ನೋಡಬೇಕಿದೆ ಅಭಿಮಾನಿಗಳು.

ಇದನ್ನೂ ಓದಿ:ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಮಹೇಶ್ ಬಾಬು ಅಕ್ಕನ ಮಗಳು, ಇಲ್ಲಿವೆ ಚಿತ್ರಗಳು

ಜಿಯೋ ಹಾಟ್​​ಸ್ಟಾರ್​​ನವರು ಇವೆಂಟ್​​ನ ಹಕ್ಕುಗಳನ್ನು ಖರೀದಿ ಮಾಡಿದ್ದು, ಇವೆಂಟ್ ನೋಡಲಿಚ್ಛಿಸುವವರು ಜಿಯೋಹಾಟ್​​ಸ್ಟಾರ್​​ನಲ್ಲಿಯೇ ನೋಡಬೇಕಾಗಿದೆ. ಅಂದಹಾಗೆ ಇವೆಂಟ್ ನವೆಂಬರ್ 15 ರಂದು ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಬಲು ಅದ್ಧೂರಿಯಾಗಿ ನಡೆಯಲಿದೆ. ಈ ಬಗ್ಗೆ ಈಗಾಗಲೇ ಪ್ರೊಮೋಷನ್ ವಿಡಿಯೋ ಒಂದನ್ನು ರಾಜಮೌಳಿಯ ಪುತ್ರ ಕಾರ್ತಿಕೇಯ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಮಹೇಶ್ ಬಾಬುಗಾಗಿ ಸಿನಿಮಾ ಮಾಡುತ್ತೇನೆಂದು ದಶಕದ ಹಿಂದೆ ರಾಜಮೌಳಿ ಹೇಳಿದ್ದ ದೃಶ್ಯವಿದೆ. ಮಾತ್ರವಲ್ಲದೆ ಮಹೇಶ್ ಬಾಬು ಅವರ ಸಿನಿಮಾಗಳ ದೃಶ್ಯಗಳು ಸಹ ಇವೆ. ಜೊತೆಗೆ ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರ್ ಅವರ ದೃಶ್ಯಗಳು ಸಹ ಇವೆ.

ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಸಿನಿಮಾ ಅಡ್ವೇಂಚರ್ ಥ್ರಿಲ್ಲರ್ ಜಾನರ್​​ನ ಸಿನಿಮಾ ಆಗಿರಲಿದೆ. ಸಿನಿಮಾದ ಚಿತ್ರೀಕರಣ ಹೈದರಾಬಾದ್, ರಾಜಸ್ಥಾನ, ಗುಜರಾತ್, ಕೀನ್ಯಾ, ನೈರೋಬಿ, ಇಟಲಿ ಇನ್ನೂ ಹಲವು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ, ಪೃಥ್ವಿರಾಜ್ ಸುಕುಮಾರನ್ ವಿಲನ್. ಕೆಲ ಹಾಲಿವುಡ್ ನಟರೂ ಸಹ ಈ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಈ ಸಿನಿಮಾ ಮೂಲಕ ಆಸ್ಕರ್ ಮೇಲೂ ಕಣ್ಣಿಟ್ಟಿದ್ದಾರಂತೆ ರಾಜಮೌಳಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ