‘ನಾಟು ನಾಟು ಕ್ರೆಡಿಟ್ ನೀವೇ ತೆಗೆದುಕೊಂಡ್ರಿ’ ಎಂದವರಿಗೆ ರಾಜಮೌಳಿ ಕೊಟ್ರು ಉತ್ತರ

|

Updated on: Feb 20, 2023 | 10:11 AM

‘ನಾಟು ನಾಟು..’ ಹಾಡಿನ ಕ್ರೆಡಿಟ್ ವಿಚಾರವಾಗಿ ಮಾತನಾಡಿದ್ದಾರೆ. ರಾಜಮೌಳಿ ಅವರು ಈ ಹಾಡಿನ ಕೊರಿಯೋಗ್ರಾಫರ್ ಪ್ರೇಮ್ ರಕ್ಷಿತ್​ಗೂ ಕ್ರೆಡಿಟ್ ನೀಡಿದ್ದಾರೆ. ಈ ಮೂಲಕ ವದಂತಿಗೆ ಅವರು ತೆರೆ ಎಳೆದಿದ್ದಾರೆ.  

‘ನಾಟು ನಾಟು ಕ್ರೆಡಿಟ್ ನೀವೇ ತೆಗೆದುಕೊಂಡ್ರಿ’ ಎಂದವರಿಗೆ ರಾಜಮೌಳಿ ಕೊಟ್ರು ಉತ್ತರ
‘ಆರ್​ಆರ್​ಆರ್​’ ಚಿತ್ರದಲ್ಲಿ ಜೂ.ಎನ್​ಟಿಆರ್​​, ರಾಮ್​ ಚರಣ್​
Follow us on

ನಿರ್ದೇಶಕ ಎಸ್.ಎಸ್​. ರಾಜಮೌಳಿ (SS Rajamouli) ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. ಇದಕ್ಕೆ ಕಾರಣ ಆಗಿದ್ದು ‘ಆರ್​ಆರ್​ಆರ್​’ ಸಿನಿಮಾ ಹಾಗೂ ಅದರಲ್ಲಿ ಬರುವ ‘ನಾಟು ನಾಟು..’ ಹಾಡು. ಈ ಹಾಡು ಆಸ್ಕರ್​ ರೇಸ್​ನಲ್ಲಿದೆ. ಇದಲ್ಲದೆ ವಿದೇಶದ ಕೆಲವು ಪ್ರತಿಷ್ಠಿತ ಅವಾರ್ಡ್​ ಫಂಕ್ಷನ್​ನಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಇದು ರಾಜಮೌಳಿ ಖ್ಯಾತಿ ಹೆಚ್ಚಿಸಿದೆ. ಹೀಗಾಗಿ, ಹೋದಲ್ಲಿ ಬಂದಲ್ಲಿ ರಾಜಮೌಳಿ ಅವರನ್ನು ಮಾಧ್ಯಮದವರು ಎದುರುಗೊಳ್ಳುತ್ತಿದ್ದಾರೆ. ಅವರಿಗೆ ವಿವಿಧ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕೆಲವು ವದಂತಿಗಳು ಕೂಡ ಹುಟ್ಟಿಕೊಂಡಿವೆ. ಇದಕ್ಕೆ ರಾಜಮೌಳಿ ಕಡೆಯಿಂದ ಸ್ಪಷ್ಟನೆ ನೀಡುವ ಕೆಲಸ ಆಗುತ್ತಿದೆ.

ನ್ಯೂಯಾರ್ಕರ್​​ಗೆ ನೀಡಿದ ಸಂದರ್ಶನದಲ್ಲಿ ರಾಜಮೌಳಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ಬಿಜೆಪಿ ಅಜೆಂಡಾ ರೀತಿಯಲ್ಲೇ ಸಿನಿಮಾ ಮಾಡುತ್ತೀರಿ’ ಎನ್ನುವ ಆರೋಪಕ್ಕೆ ರಾಜಮೌಳಿ ಸ್ಪಷ್ಟನೆ ನೀಡಿದ್ದರು. ಈಗ ‘ನಾಟು ನಾಟು..’ ಹಾಡಿನ ಕ್ರೆಡಿಟ್ ವಿಚಾರವಾಗಿ ಮಾತನಾಡಿದ್ದಾರೆ. ರಾಜಮೌಳಿ ಅವರು ಈ ಹಾಡಿನ ಕೊರಿಯೋಗ್ರಾಫರ್ ಪ್ರೇಮ್ ರಕ್ಷಿತ್​ಗೂ ಕ್ರೆಡಿಟ್ ನೀಡಿದ್ದಾರೆ. ಈ ಮೂಲಕ ವದಂತಿಗೆ ಅವರು ತೆರೆ ಎಳೆದಿದ್ದಾರೆ.

‘ನಾಟು ನಾಟು..’ ಹಾಡಿನ ಕೊರಿಯೋಗ್ರಾಫಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಪ್ರೇಮ್ ರಕ್ಷಿತ್ ಅವರು ‘ಆರ್​ಆರ್​ಆರ್​’ ಇವೆಂಟ್​ನಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಇದಕ್ಕೆ ರಾಜಮೌಳಿ ಅವರನ್ನು ದೂರುವ ಕೆಲಸ ಆಗಿತ್ತು. ಈ ಬಗ್ಗೆ ಮಾತನಾಡಿರುವ ಅವರು, ‘ಯಾವುದೇ ಪ್ರಶಸ್ತಿ ಸಮಾರಂಭದಲ್ಲಿ ನಾಟು ನಾಟು ಹಾಡಿನ ವಿಚಾರ ಬಂದಾಗ ಎಂ.ಎಂ. ಕೀರವಾಣಿ (ಸಂಗೀತ ಸಂಯೋಜಕ) ಹಾಗೂ ಚಂದ್ರಬೋಸ್​ಗೆ (ಗೀತ ಸಾಹಿತಿ) ಕ್ರೆಡಿಟ್ ಸಿಗಬಹುದು. ಆದರೆ, ಪ್ರೇಮ್​ ರಕ್ಷಿತ್ ನಿಜವಾದ ವಿನ್ನರ್. ಈ ಹಾಡು ಹೆಚ್ಚಿನ ಜನರಿಗೆ ತಲುಪೋಕೆ ಅವರ ಕೊರಿಯೋಗ್ರಫಿ ಕಾರಣ. ನಾಲ್ಕೈದು ಸ್ಟೆಪ್​ನ ಐಡಿಯಾಗಳನ್ನು ರೆಡಿ ಮಾಡೋಕೆ ಅವರಿಗೆ 7 ವಾರಗಳು ಬೇಕಾಗುತ್ತಿದ್ದವು’ ಎಂದಿದ್ದಾರೆ ರಾಜಮೌಳಿ.

ಇದನ್ನೂ ಓದಿ
SS Rajamouli: ಎಸ್​ಎಸ್​​ ರಾಜಮೌಳಿ ಬಿಜೆಪಿ ಪರವೇ? ಮೌನ ಮುರಿದ ನಿರ್ದೇಶಕ  
‘ಆರ್​ಆರ್​ಆರ್​’ ಸಿನಿಮಾ ಹೇಗೆ ಮಾಡಿದಿರಿ?’; ರಾಜಮೌಳಿಗೆ ಹಾಲಿವುಡ್​ ದಿಗ್ಗಜ ​ಸ್ಪೀಲ್​ಬರ್ಗ್ ಪ್ರಶ್ನೆ
SS Rajamouli: ‘ಕಬ್ಜ’ ಸಾಂಗ್​ ರಿಲೀಸ್​​​ಗೆ ಬರ್ತಿಲ್ಲ ರಾಜಮೌಳಿ; ಕಾರಣ ತಿಳಿಸಿದ ನಿರ್ದೇಶಕ

ಇದನ್ನೂ ಓದಿ: ‘ಆರ್​ಆರ್​ಆರ್​’ ಸಿನಿಮಾ ಹೇಗೆ ಮಾಡಿದಿರಿ?’; ರಾಜಮೌಳಿಗೆ ಹಾಲಿವುಡ್​ ದಿಗ್ಗಜ ​ಸ್ಪೀಲ್​ಬರ್ಗ್ ಪ್ರಶ್ನೆ

‘ನಾಟು ನಾಟು..’ ಹಾಡು ಮಾತ್ರವಲ್ಲದೆ ಪ್ರೀ-ಕ್ಲೈಮ್ಯಾಕ್ಸ್​ನಲ್ಲಿ ಬರುವ ಫೈಟ್​ನಲ್ಲಿ ರಾಮ್ ಚರಣ್ ಅವರನ್ನು ಜೂ. ಎನ್​ಟಿಆರ್​ ಎತ್ತಿಕೊಂಡು ಹೋಗುತ್ತಾರೆ. ಈ ಐಡಿಯಾ ನೀಡಿದ್ದು ಕೂಡ ಪ್ರೇಮ್ ರಕ್ಷಿತ್ ಅವರೇ. ಈ ವಿಚಾರವನ್ನು ರಾಜಮೌಳಿ ರಿವೀಲ್ ಮಾಡಿದ್ದಾರೆ. ಜೊತೆಗೆ ಪ್ರೇಮ್ ರಕ್ಷಿತ್​​ಗೆ ವಿಶೇಷ ಕ್ರೆಡಿಟ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:17 am, Mon, 20 February 23