SS Rajamouli: ಎಸ್​ಎಸ್​​ ರಾಜಮೌಳಿ ಬಿಜೆಪಿ ಪರವೇ? ಮೌನ ಮುರಿದ ನಿರ್ದೇಶಕ  

|

Updated on: Feb 18, 2023 | 10:31 AM

ರಾಜಮೌಳಿ ಸಿನಿಮಾಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವ ವಿಚಾರಗಳು ಇರುತ್ತವೆ ಎನ್ನುವ ಆರೋಪ ಇದೆ. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಬಾಹುಬಲಿ’ ಹಾಗೂ ‘ಆರ್​ಆರ್​ಆರ್​’ ಕಥೆ ಹುಟ್ಟಿರುವ ಬಗ್ಗೆ ಅವರು ಮಾತನಾಡಿದ್ದಾರೆ.

SS Rajamouli: ಎಸ್​ಎಸ್​​ ರಾಜಮೌಳಿ ಬಿಜೆಪಿ ಪರವೇ? ಮೌನ ಮುರಿದ ನಿರ್ದೇಶಕ  
ರಾಜಮೌಳಿ
Follow us on

ನಿರ್ದೇಶಕ ಎಸ್​.ಎಸ್​. ರಾಜಮೌಳಿ (SS Rajamouli) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ರಾಜಮೌಳಿ ಅವರ ಖ್ಯಾತಿ ವಿಶ್ವಮಟ್ಟಕ್ಕೆ ಹಬ್ಬಿದೆ. ಹಾಲಿವುಡ್ ನಿರ್ದೇಶಕರು ರಾಜಮೌಳಿ ಬಗ್ಗೆ ಮಾತನಾಡುತ್ತಿದ್ದಾರೆ. ‘ಆರ್​ಆರ್​ಆರ್’ ಸಿನಿಮಾ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಈಗ ರಾಜಮೌಳಿ ಅವರು ತಾವು ಯಾವ ಪಕ್ಷ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಇದನ್ನು ನಿರ್ಧರಿಸುವ ಹಕ್ಕು ಜನರಿಗೆ ಇದೆ ಎಂದಿದ್ದಾರೆ ಅವರು.

ರಾಜಮೌಳಿ ಸಿನಿಮಾಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವ ವಿಚಾರಗಳು ಇರುತ್ತವೆ ಎನ್ನುವ ಆರೋಪ ಇದೆ. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಬಾಹುಬಲಿ’ ಹಾಗೂ ‘ಆರ್​ಆರ್​ಆರ್​’ ಕಥೆ ಹುಟ್ಟಿರುವ ಬಗ್ಗೆ ಅವರು ಮಾತನಾಡಿದ್ದಾರೆ. ‘ಬಾಹುಬಲಿ ಸಿನಿಮಾ ಕಾಲ್ಪನಿಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಿರುವಾಗ ಬಿಜೆಪಿಯ ಅಜೆಂಡಾಕ್ಕೆ ತಕ್ಕಂತೆ ಐತಿಹಾಸಿಕ ಪಾತ್ರಗಳನ್ನು ಬಿಂಬಿಸುವುದು, ಇತಿಹಾಸ ತಿರುಚಿದ್ದೇನೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ‘ಆರ್​ಆರ್​ಆರ್​’ ಸಿನಿಮಾ ಡಾಕ್ಯುಮೆಂಟರಿ ಅಲ್ಲ. ಇದು ಇತಿಹಾಸದ ಪಾಠವಲ್ಲ. ಇದು ನೈಜ ಪಾತ್ರಗಳ ಮೇಲೆ ಸಿದ್ಧವಾದ ಕಾಲ್ಪನಿಕ ಕಥೆ. ನಾವು ಮಾಯಾಬಜಾರ್ (ತೆಲುಗು) ಬಗ್ಗೆ ಮಾತನಾಡಿದ್ದೇವೆ. ‘ಆರ್​​ಆರ್​ಆರ್​’ ಇತಿಹಾಸದ ವಿರೂಪವಾದರೆ, ಮಾಯಾಬಜಾರ್ ಮಹಾಕಾವ್ಯದ ವಿರೂಪವಾಗಿದೆ’ ಎಂದು ಅವರು ಹೇಳಿದ್ದಾರೆ.

‘ನಾನು ಬಿಜೆಪಿ ಅಥವಾ ಬಿಜೆಪಿಯ ಅಜೆಂಡಾ ಬೆಂಬಲಿಸುತ್ತಿದ್ದೇನೆ ಎಂದು ಆರೋಪಿಸುತ್ತಿರುವ ಜನರಿಗೆ ನಾನು ಇನ್ನೊಂದು ವಿಷಯವನ್ನು ಹೇಳಲು ಬಯಸುತ್ತೇನೆ. ನಾನು ಮೊದಲು ಭೀಮ್ ಪಾತ್ರದ ಪೋಸ್ಟರ್ ಬಿಡುಗಡೆ ಮಾಡಿದೆ. ಭೀಮ್ ಮುಸ್ಲಿಂ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ. ಬಿಜೆಪಿ ನಾಯಕರೊಬ್ಬರು ‘ಆರ್‌ಆರ್‌ಆರ್’ ರಿಲೀಸ್ ಆದ ಥಿಯೇಟರ್‌ಗಳನ್ನು ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದರು. ಕ್ಯಾಪ್ ತೆಗೆಯದಿದ್ದರೆ ನನ್ನನ್ನು ರಸ್ತೆಯಲ್ಲಿ ಥಳಿಸುವುದಾಗಿ ಹೇಳಿದರು. ಹಾಗಾಗಿ ನಾನು ಬಿಜೆಪಿಯವನೋ ಅಲ್ಲವೋ ಎಂಬುದನ್ನು ಜನರೇ ನಿರ್ಧರಿಸಬಹುದು. ನಾನು ಉಗ್ರವಾದವನ್ನು ದ್ವೇಷಿಸುತ್ತೇನೆ, ಅದು ಬಿಜೆಪಿ, ಮುಸ್ಲಿಂ ಲೀಗ್ ಅಥವಾ ಯಾವುದೇ ಆಗಿರಲಿ. ಸಮಾಜದಲ್ಲಿ ಎಲ್ಲಾ ವಿಭಾಗದಲ್ಲಿರುವ ತೀವ್ರವಾದಿಗಳನ್ನು ದ್ವೇಷಿಸುತ್ತೇನೆ. ಇದು ನಾನು ನೀಡಬಹುದಾದ ಸರಳ ವಿವರಣೆ’ ಎಂದಿದ್ದಾರೆ ಅವರು.

ಇದನ್ನೂ ಓದಿ
ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ಬಾಚಿದ ‘ಬ್ರಹ್ಮಾಸ್ತ್ರ’ ಚಿತ್ರದಿಂದ ರಾಜಮೌಳಿಗೆ ಸಿಕ್ಕ ಹಣ ಎಷ್ಟು?
ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣಬೀರ್ ಕಪೂರ್; ಪಬ್ಲಿಸಿಟಿ ಸ್ಟಂಟ್ಸ್ ಎಂದ ನೆಟ್ಟಿಗರು
ಕೊನೇ ಕ್ಷಣದಲ್ಲಿ ಅಮಿತ್ ಶಾ ಭೇಟಿಯಿಂದ ಹಿಂದೆ ಸರಿದ ರಾಜಮೌಳಿ? ಇದಕ್ಕಿದೆ ದೊಡ್ಡ ಕಾರಣ
‘ನನ್ನ ಸಿನಿಮಾದಲ್ಲಿ ಅಂಥ ನಟರು ಇರೋದೇ ಬೇಡ’: ರಾಜಮೌಳಿಗೆ ಕಂಡೀಷನ್​ ಹಾಕಿದ ಮಹೇಶ್​ ಬಾಬು?

ಇದನ್ನೂ ಓದಿ: ‘ಆರ್​ಆರ್​ಆರ್​’ ಸಿನಿಮಾ ಹೇಗೆ ಮಾಡಿದಿರಿ?’; ರಾಜಮೌಳಿಗೆ ಹಾಲಿವುಡ್​ ದಿಗ್ಗಜ ​ಸ್ಪೀಲ್​ಬರ್ಗ್ ಪ್ರಶ್ನೆ

‘ಆರ್​ಆರ್​ಆರ್​’ ಸಿನಿಮಾದ ‘ನಾಟು.. ನಾಟು..’ ಹಾಡು ಆಸ್ಕರ್ ರೇಸ್​ನಲ್ಲಿದೆ. ಮಾರ್ಚ್​ ತಿಂಗಳಲ್ಲಿ ಅಮೆರಿಕದಲ್ಲಿ ಆಸ್ಕರ್ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ‘ಆರ್​ಆರ್​ಆರ್​’ ಚಿತ್ರದ ಭವಿಷ್ಯ ನಿರ್ಧಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:31 am, Sat, 18 February 23