Rajamouli: ರಾಜಮೌಳಿಗೆ ತಲೆ ನೋವಾಯ್ತು ತಂದೆಯ ಮಾತುಗಳು; ವಿಜಯೇಂದ್ರ ಪ್ರಸಾದ್​ ಮಾಡಿದ ಎಡವಟ್ಟು ಏನು?

Vijayendra Prasad: ವಿಜಯೇಂದ್ರ ಪ್ರಸಾದ್​ ಅವರು ಏನೋ ಒಂದು ಹೇಳುತ್ತಾರೆ. ಅದನ್ನೇ ಇಟ್ಟುಕೊಂಡು ಸೋಶಿಯಲ್​ ಮೀಡಿಯಾದಲ್ಲಿ ನೂರಾರು ಬಗೆಯ ಅಂತೆ-ಕಂತೆಗಳು ಹುಟ್ಟಿಕೊಳ್ಳುತ್ತವೆ.

Rajamouli: ರಾಜಮೌಳಿಗೆ ತಲೆ ನೋವಾಯ್ತು ತಂದೆಯ ಮಾತುಗಳು; ವಿಜಯೇಂದ್ರ ಪ್ರಸಾದ್​ ಮಾಡಿದ ಎಡವಟ್ಟು ಏನು?
ರಾಜಮೌಳಿ, ವಿಜಯೇಂದ್ರ ಪ್ರಸಾದ್​

Updated on: Jul 11, 2023 | 11:42 AM

ಎಸ್​ಎಸ್​ ರಾಜಮೌಳಿ (SS Rajamouli) ಅವರು ಸ್ಟಾರ್​ ಡೈರೆಕ್ಟರ್​ ಆಗಿ ಖ್ಯಾತಿ ಪಡೆದಿದ್ದಾರೆ. ಅವರು ಮಾಡಿದ ಎಲ್ಲ ಸಿನಿಮಾಗಳು ಸೂಪರ್​ ಹಿಟ್ ಆಗಿವೆ. ಆಸ್ಕರ್​ ವೇದಿಕೆ ಏರುವ ಮಟ್ಟಕ್ಕೆ ಅವರ ಸಿನಿಮಗಳು ಸಾಧನೆ ಮಾಡಿವೆ. ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್​ (Vijayendra Prasad) ಅವರು ಕಥೆಗಾರನಾಗಿ ಸಾಕಷ್ಟು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ರಾಜಮೌಳಿಯ ಪ್ರತಿ ಸಿನಿಮಾದಲ್ಲೂ ವಿಜಯೇಂದ್ರ ಪ್ರಸಾದ್​ ಕೆಲಸ ಮಾಡುತ್ತಾರೆ. ಆದರೆ ಈಗ ತಂದೆಯ ಮಾತುಗಳೇ ರಾಜಮೌಳಿ ಅವರಿಗೆ ತಲೆ ನೋವಾಗಿ ಪರಿಣಮಿಸುತ್ತಿದೆ. ಇದರಿಂದ ಅಭಿಮಾನಿಗಳಿಗೂ ಚಿಂತೆ ಶುರುವಾಗಿದೆ. ಈ ಬಗ್ಗೆ ಫ್ಯಾನ್ಸ್​ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ವಿಜಯೇಂದ್ರ ಪ್ರಸಾದ್​ ಅವರು ಮಾಡಿದ ತಪ್ಪು ಏನು? ಇಲ್ಲಿದೆ ವಿವರ..

‘ಆರ್​ಆರ್​ಆರ್​’ ಸಿನಿಮಾದ ಭಾರಿ ಗೆಲುವಿನ ಬಳಿಕ ರಾಜಮೌಳಿ ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಅವರು ಮಾಡಲಿರುವ ಹೊಸ ಸಿನಿಮಾ ಮೇಲೆ ಸಖತ್​ ನಿರೀಕ್ಷೆ ಇದೆ. ಆ ಬಗ್ಗೆ ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ವಿಶೇಷ ದಿನದಂದು, ವಿಶೇಷ ರೀತಿಯಲ್ಲಿ ಅಪ್​ಡೇಟ್​ ನೀಡಿದರೆ ಅದು ಹೆಚ್ಚು ಜನರನ್ನು ತಲುಪುತ್ತದೆ. ಆದರೆ ವಿಜಯೇಂದ್ರ ಪ್ರಸಾದ್​ ಅವರು ಮಾಧ್ಯಮಗಳ ಎದುರು ಕೆಲವು ಮಾಹಿತಿಗಳನ್ನು ಲೀಕ್​ ಮಾಡುತ್ತಿದ್ದಾರೆ. ಸಂದರ್ಶನಗಳನ್ನು ನೀಡುವಾಗ ಸಾಕಷ್ಟು ಮಾಹಿತಿಯನ್ನು ಅವರು ಬಿಟ್ಟುಕೊಡುತ್ತಿದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ಇರುವ ಎಗ್ಸೈಟ್​ಮೆಂಟ್​ ಕಮ್ಮಿ ಆಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: SS Rajamouli: ರಾಮ್​ ಚರಣ್​, ಜೂ. ಎನ್​ಟಿಆರ್​ಗೆ ಮಣೆಹಾಕಿ ರಾಜಮೌಳಿಯನ್ನು ಕಡೆಗಣಿಸಿದ ಆಸ್ಕರ್​; ಅಭಿಮಾನಿಗಳಿಗೆ ಅಸಮಾಧಾನ

ವಿಜಯೇಂದ್ರ ಪ್ರಸಾದ್​ ಅವರು ಏನೋ ಒಂದು ಹೇಳುತ್ತಾರೆ. ಅದನ್ನೇ ಇಟ್ಟುಕೊಂಡು ಸೋಶಿಯಲ್​ ಮೀಡಿಯಾದಲ್ಲಿ ನೂರಾರು ಬಗೆಯ ಅಂತೆ-ಕಂತೆಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೆಲ್ಲ ರಾಜಮೌಳಿ ಅವರು ಉತ್ತರ ಕೊಡಬೇಕಾಗುತ್ತದೆ. ಹಾಗಾಗಿ ತಂದೆಯ ಮಾತುಗಳೇ ಈಗ ರಾಜಮೌಳಿಗೆ ತಲೆ ಬಿಸಿ ತಂದೊಡ್ಡುತ್ತಿವೆ ಎಂದು ಟಾಲಿವುಡ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: SS Rajamouli: ಆಸ್ಕರ್​ ಸದಸ್ಯತ್ವ ಪಡೆದವರಿಗೆ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಕಡೆಯಿಂದ ಅಭಿನಂದನೆ

ರಾಜಮೌಳಿ ಅವರು ‘ಆರ್​ಆರ್​ಆರ್​ 2’ ಸಿನಿಮಾಗೆ ನಿರ್ದೇಶನ ಮಾಡುತ್ತಾರೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ. ಯಾಕೆಂದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಜಯೇಂದ್ರ ಪ್ರಸಾದ್​ ಅವರು, ‘ಆ ಸಿನಿಮಾಗೆ ರಾಜಮೌಳಿ ನಿರ್ದೇಶನ ಮಾಡಬಹುದು ಅಥವಾ ಅವರ ಮಾರ್ಗದರ್ಶನದಲ್ಲಿ ಬೇರೆ ಯಾರಾದರೂ ಆ್ಯಕ್ಷನ್​-ಕಟ್​ ಹೇಳಬಹುದು’ ಎಂದಿದ್ದರು. ಅದರ ಬೆನ್ನಲ್ಲೇ ಬಗೆಬಗೆಯ ಗಾಸಿಪ್​ಗಳು ಹುಟ್ಟಿಕೊಂಡಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us