ರಾಜಮೌಳಿ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ; ಹೊಸ ಪೋಸ್ಟರ್ ಮೂಲಕ ಹಿಗ್ಗಾಮುಗ್ಗಾ ಟ್ರೋಲ್
Kumbha Poster Troll: ಎಸ್ಎಸ್ ರಾಜಮೌಳಿ ನಿರ್ದೇಶನದ SSMB 29 ಚಿತ್ರದ ವಿಲನ್ ಪೃಥ್ವಿರಾಜ್ ಸುಕುಮಾರನ್ 'ಕುಂಭ' ಪಾತ್ರದ ಪೋಸ್ಟರ್ ಬಿಡುಗಡೆಯಾಗಿದೆ. ನಿರೀಕ್ಷೆಗೂ ಮೀರಿ ಈ ಪೋಸ್ಟರ್ ಟ್ರೋಲ್ ಹಾಗೂ ಹಾಲಿವುಡ್ ಕಾಪಿ ಆರೋಪಗಳಿಗೆ ಗುರಿಯಾಗಿದೆ. ವಿಚಿತ್ರವಾದ ಚೇರ್ನಲ್ಲಿ ಪೃಥ್ವಿರಾಜ್ ಕಾಣಿಸಿಕೊಂಡಿದೆ.

ಎಸ್ಎಸ್ ರಾಜಮೌಳಿ ಸಿನಿಮಾ ಅನೌನ್ಸ್ ಮಾಡಿದರು ಎಂದರೆ ಅದರ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗುತ್ತವೆ. ಪಾತ್ರಧಾರಿಗಳ ಪರಿಚಯಿಸಿದಾಗ ಎಲ್ಲರಿಗೂ ಖುಷಿ ಆಗುತ್ತದೆ. ಆದರೆ, ಈ ಬಾರಿ ಯಾಕೋ ರಾಜಮೌಳಿ (Rajamouli) ಅದೃಷ್ಟ ಕೈ ಕೊಟ್ಟಂತೆ ಕಾಣುತ್ತಿದೆ. ಅವರು ತಮ್ಮ ಹೊಸ ಸಿನಿಮಾದ ವಿಲನ್ ಪಾತ್ರವನ್ನು ಪರಿಚಯಿಸಿದ್ದಾರೆ. ಈ ಪಾತ್ರದ ಪೋಸ್ಟರ್ ಸಿನಿಮಾಗೆ ಹೈಪ್ ನೀಡುವ ಬದಲು ಟ್ರೋಲಿಗರಿಗೆ ಆಹಾರ ಆಗಿದ್ದಾರೆ.
‘ಎಸ್ಎಸ್ಎಂಬಿ 29’ ಹೆಸರಿನ ಸಿನಿಮಾನ ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮಹೇಶ್ ಬಾಬು ಹೀರೋ ಆದರೆ, ಪ್ರಿಯಾಂಕಾ ಚೋಪ್ರಾ ನಾಯಕಿ. ಈ ಸಿನಿಮಾದ ಟೈಟಲ್ ಇನ್ನು ಕೆಲವೇ ದಿನಗಳಲ್ಲಿ ರಿವೀಲ್ ಆಗಲಿದೆ. ಅದಕ್ಕೂ ಮೊದಲು ಚಿತ್ರದ ವಿಲನ್ ಪೃಥ್ವಿರಾಜ್ ಸುಕುಮಾರನ್ ಪಾತ್ರವನ್ನು ರಾಜಮೌಳಿ ಅವರು ಪರಿಚಯಿಸಿದರು.
View this post on Instagram
View this post on Instagram
View this post on Instagram
View this post on Instagram
‘ಕುಂಭ’ ಹೆಸರಿನ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಅವರು ಚೇರ್ ಮೇಲೆ ಕುಳಿತಿದ್ದಾರೆ. ಆ ಚೇರ್ ವಿಚಿತ್ರವಾಗಿದೆ. ಅದಕ್ಕೆ ಎರಡು ಚಕ್ರ ಇದೆ. ಪೃಥ್ವಿರಾಜ್ ಕಾಲು ಸರಿ ಇಲ್ಲ ಎಂಬುದು ಪೋಸ್ಟರ್ನಲ್ಲಿ ಕಾಣಿಸುತ್ತದೆ. ಈ ಚೇರ್ಗೆ ಚಿತ್ರ ವಿಚಿತ್ರವಾದ ಕೈಗಳಿವೆ. ಇದು ಯಾವುದೋ ಹಾಲಿವುಡ್ ಸಿನಿಮಾದಿಂದ ಕದಿಯಲ್ಪಟ್ಟ ಪೋಸ್ಟರ್ ಎಂಬ ಆರೋಪ ಒಂದು ಕಡೆಯಾದರೆ, ಟ್ರೋಲ್ಗಳ ಕಾಟ ಮತ್ತೊಂದು ಕಡೆ.
ಇದನ್ನೂ ಓದಿ: ಪವರ್ಫುಲ್ ‘ವಿಲನ್’ ಪರಿಚಯಿಸಿದ ರಾಜಮೌಳಿ, ಹಾಲಿವುಡ್ ಸ್ಪೂರ್ತಿ?
ಸದ್ಯ ಈ ಪೋಸ್ಟರ್ ಸಾಕಷ್ಟು ಟ್ರೋಲ್ಗಳನ್ನು ಎದುರಿಸುತ್ತಿದೆ. ಈ ಪೋಸ್ಟರ್ಗೆ ವಿವಿಧ ರೀತಿಯ ಟ್ರೋಲ್ಗಳು ಎದುರಾಗುತ್ತಿವೆ. ಹಳೆಯ ಸಿನಿಮಾಗಳ ದೃಶ್ಯಗಳನ್ನು ಬಳಕೆ ಮಾಡಿಕೊಂಡು ಈ ಪೋಸ್ಟರ್ ಅನ್ನು ಟೀಕಿಸುವ ಕೆಲಸ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




