ಭಾರತದಲ್ಲಿ ಕೊರನಾ ವೈರಸ್ ಹಾವಳಿ ಮಿತಿ ಮೀರಿದೆ. ಈ ಸಂದರ್ಭದಲ್ಲಿ ಕೆಲವು ಸೆಲೆಬ್ರಿಟಿಗಳು ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಬಹುತೇಕ ನಟ-ನಟಿಯರು ತಮ್ಮ ಐಷಾರಾಮಿ ಮನೆಗಳಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಆದರೆ ಕೆಲವರು ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಮೊದಲಿನಿಂದಲೂ ಬಾಲಿವುಡ್ ನಟ ಸೋನು ಸೂದ್ ಅವರು ಜನರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಈಗ ನಟ ಸುನೀಲ್ ಶೆಟ್ಟಿ ಕೂಡ ಸಾಥ್ ನೀಡುತ್ತಿದ್ದಾರೆ. ಅದರಲ್ಲೂ ಅವರು ಬೆಂಗಳೂರಿನ ಜನರ ಕಷ್ಟಕ್ಕೆ ಮಿಡಿಯುತ್ತಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಆಸ್ಪತ್ರೆಯಲ್ಲಿ ದಾಖಲಾಗುವ ಕೊವಿಡ್ ಸೋಂಕಿತರಿಗೆ ಉಸಿರಾಟದ ತೊಂದರೆ ಆಗುತ್ತಿದೆ. ಸೂಕ್ತ ಕಾಲಕ್ಕೆ ಆಕ್ಸಿಜನ್ ಸಿಲಿಂಡರ್ಗಳು ಸಿಗದೇ ಅನೇಕರು ಮೃತಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ಮತ್ತು ಮುಂಬೈ ನಗರದ ಜನರಿಗೆ ಆಕ್ಸಿಜನ್ ಸಿಗುವಂತೆ ಮಾಡಲು ಸುನೀಲ್ ಶೆಟ್ಟಿ ಪಣತೊಟ್ಟಿದ್ದಾರೆ.
‘ಇದು ನಮ್ಮೆಲ್ಲರಿಗೂ ಪರೀಕ್ಷೆಯ ಕಾಲ. ಆದರೆ ಜನರು ಒಬ್ಬರಿಗೊಬ್ಬರು ಸಹಾಯ ಮಾಡಲು ಕೈ ಜೋಡಿಸುತ್ತಿರುವುದು ಭರವಸೆಯ ಕಿರಣದಂತೆ ಕಾಣಿಸಿದೆ. ಉಚಿತವಾಗಿ ಆಕ್ಸಿಜನ್ ನೀಡುವ ಈ ಅಭಿಯಾನದಲ್ಲಿ ಭಾಗಿ ಆಗುತ್ತಿರುವದಕ್ಕೆ ನಾನು ಧನ್ಯ ಎನಿಸುತ್ತಿದೆ’ ಎಂದು ಸುನೀಲ್ ಶೆಟ್ಟಿ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಕೆವಿನ್ ಫೌಂಡೇಶನ್ ಜೊತೆ ಸೇರಿ ಅವರು ಈ ಕಾರ್ಯವನ್ನು ಮಾಡುತ್ತಿದ್ದಾರೆ. ಫೀಡ್ ಮೈ ಸಿಟಿ ಹೆಸರಿನ ಈ ಅಭಿಮಾನಕ್ಕೆ ಅನೇಕರು ಕೈ ಜೋಡಿಸುತ್ತಿದ್ದಾರೆ.
‘ಈ ಮೂಲಕ ತನ್ನ ಸ್ನೇಹಿತರು ಮತ್ತು ಅಭಿಮಾನಿಗಳಲ್ಲಿ ಮನವಿ ಮಾಡುತ್ತಿದ್ದೇನೆ. ನಿಮಗೆ ಸಹಾಯ ಬೇಕಾಗಿದ್ದರೆ ಅಥವಾ ಸಹಾಯದ ಅವಶ್ಯಕತೆ ಇರುವ ಯಾರಾದರೂ ನಿಮಗೆ ಗೊತ್ತಿದ್ದರೆ ನನಗೆ ಮೆಸೇಜ್ ಮಾಡಿ. ಈ ಅಭಿಯಾನದಲ್ಲಿ ನೀವು ಭಾಗಿಯಾಗುವುದಾದರೆ, ಆ ಮೂಲಕ ಕೊಡುಗೆ ನೀಡುವುದಿದ್ದರೆ ನನಗೆ ಮೆಸೇಜ್ ಕಳುಹಿಸಿ. ಈ ಮಾಹಿತಿಯನ್ನು ಎಷ್ಟು ಸಾಧ್ಯವೋ ಅಷ್ಟು ಜನರಿಗೆ ತಲುಪಿಸಿ. ಸದ್ಯಕ್ಕೆ ಮುಂಬೈ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಸುನೀಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
This is an appeal to all my friends and fans. DM me if you need help, if you know someone who needs help, or if you want to contribute and be a part of this mission. Please amplify this as much as you can and help us help them.
Currently operating in #Mumbai & #Bangalore— Suniel Shetty (@SunielVShetty) April 28, 2021
ಮೂಲತಃ ಕರ್ನಾಟಕದವರಾದ ಸುನೀಲ್ ಶೆಟ್ಟಿ ಹೆಚ್ಚು ಮಿಂಚಿದ್ದು ಬಾಲಿವುಡ್ನಲ್ಲಿ. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟರು. ಈಗ ಅವರು ಬೆಂಗಳೂರಿನ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವುದರಿಂದ ಎಲ್ಲರಿಂದ ಮೆಚ್ಚುಗೆ ಗಳಿಸುತ್ತಿದ್ದಾರೆ.
ಇದನ್ನೂ ಓದಿ: Oxygen Cylinder: ಆಸ್ಪತ್ರೆಗೆ ಆಕ್ಸಿಜನ್ ನೀಡಲು ಮುಂದಾದ ನಟಿ ಸುಶ್ಮಿತಾ ಸೇನ್ಗೆ ತಪ್ಪಲಿಲ್ಲ ಟ್ರೋಲ್ ಕಾಟ
ಬಾಯ್ಫ್ರೆಂಡ್ ರಾಹುಲ್ ಜತೆ ಫೋಟೋ ಹಂಚಿಕೊಂಡ ಆಥಿಯಾ; ಇದು ನಿಜ ಎಂದ ಸುನೀಲ್ ಶೆಟ್ಟಿ