ನಟಿ ಸನ್ನಿ ಲಿಯೋನ್ (Sunny Leone) ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ಒಂದು ದಶಕದಿಂದ ಅವರು ಬಾಲಿವುಡ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕನ್ನಡದಲ್ಲೂ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇಂದು (ಮೇ 13) ಸನ್ನಿ ಲಿಯೋನ್ ಬರ್ತ್ಡೇ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ. ಅವರ ಅಭಿಮಾನಿಗಳು ಸನ್ನಿಗೆ ವಿಶ್ ತಿಳಿಸುತ್ತಿದ್ದಾರೆ. ಸನ್ನಿ ಅಭಿಮಾನಿಗಳು ವಿಶ್ವಾದ್ಯಂತ ಇದ್ದಾರೆ. ಅವರು ಈ ಮೊದಲು ನೀಲಿ ಸಿನಿಮಾ ಲೋಕದಲ್ಲಿ ಬ್ಯುಸಿ ಇದ್ದರು. ನಂತರ ಅದನ್ನು ತೊರೆದು ಬಾಲಿವುಡ್ಗೆ ಬಂದರು.
ಸನ್ನಿ ಲಿಯೋನ್ ಜನಿಸಿದ್ದು 1981ರಲ್ಲಿ. ಕೆನಡಾದ ಸಿಖ್ ಕುಟುಂಬದಲ್ಲಿ ಅವರು ಜನಿಸಿದರು. ಅವರ ನಿಜವಾದ ಹೆಸರ ಕರಂಜೀತ್ ಸಿಂಗ್ ಕೌರ್. ಅವರಿಗೆ 15 ವರ್ಷ ಇದ್ದಾಗ ಕ್ಯಾಲಿಫೋರ್ನಿಯಾಗೆ ಶಿಫ್ಟ್ ಆದರು. ಅವರಿಗೆ ಹಣದ ಕೊರತೆ ಇತ್ತು. ಈ ವೇಳೆ ಅವರಿಗೆ ಮ್ಯಾಗಜಿನ್ ಒಂದರಲ್ಲಿ ಮಾಡೆಲ್ ಆಗಲು ಅವಕಾಶ ಸಿಕ್ಕಿತು. ಅದು ಅಡಲ್ಟ್ ಮ್ಯಾಗಜಿನ್ ಆಗಿತ್ತು. ಈ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ.
ಸನ್ನಿ ಇದನ್ನು ಒಪ್ಪಿ ನಟಿಸಿದರು. ಆ ಬಳಿಕ ಪೋರ್ನ್ ಇಂಡಸ್ಟ್ರಿಗೆ ತೆರೆದುಕೊಂಡರು. ಈ ವಿಚಾರ ಸಹೋದರನಿಗೆ ಗೊತ್ತಿತ್ತು. ಆತ ಸನ್ನಿಯನ್ನು ಬೆಂಬಲಿಸಿದ. ಕುಟುಂಬದವರಿಗೆ ಈ ವಿಚಾರ ಗೊತ್ತಾದಾಗ ಇದನ್ನು ಸಹಿಸಿಕೊಳ್ಳಲು ಆಗಲೇ ಇಲ್ಲ. ಸನ್ನಿ ಅಮ್ಮ ಖಿನ್ನತೆಗೆ ಒಳಗಾದರು. ಕರಂಜೀತ್ ಎಂದಿದ್ದ ಅವರ ಹೆಸರನ್ನು ಸನ್ನಿ ಎಂದು ಬದಯಾಲಿಸಿದ್ದು ಪೋರ್ನ್ ಇಂಡಸ್ಟ್ರಿಯವರೇ.
ಅಡಲ್ಟ್ ಸ್ಟಾರ್ ಆಗಿದ್ದ ಡ್ಯಾನಿಯಲ್ ವೇಬರ್ ಜೊತೆ ಸನ್ನಿ ಲಿಯೋನ್ ತೆರೆ ಹಂಚಿಕೊಡಿದ್ದರು. ಇಬ್ಬರ ಮಧ್ಯೆ ಪ್ರೀತಿ ಹುಟ್ಟಿತು. ಇಬ್ಬರೂ ಮದುವೆ ಆಗುವ ನಿರ್ಧಾರಕ್ಕೂ ಬಂದರು. ಬಳಿಕ ಸನ್ನಿ ನೀಲಿ ಚಿತ್ರದಿಂದ ಹೊರ ಬಂದರು.
ಇದನ್ನೂ ಓದಿ: Sunny Leone: ಹೊಸ ಪೋಟೋಶೂಟ್ನಲ್ಲಿ ನಟಿ ಸನ್ನಿಲಿಯೋನ್
ಸನ್ನಿ ಲಿಯೋನ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿ ಆದರು. ಅವರು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದಾದ ಬಳಿಕ ಅವರಿಗೆ ಚಿತ್ರರಂಗದಿಂದ ಆಫರ್ ಬಂತು. ಅಲ್ಲಿಯೂ ನಟಿಸಿದರು. ಆ ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:12 am, Sat, 13 May 23