ಸಿನಿಮಾ ಬಿಡುಗಡೆಗೆ ಆರು ದಿನ ಇರುವಂತೆಯೇ 18 ಸಾವಿರ ಟಿಕೆಟ್ ಸೋಲ್ಡ್ ಔಟ್
Fast and Furious X: ಫಾಸ್ಟ್ ಆಂಡ್ ಫ್ಯೂರಿಯಸ್ 10 ಸಿನಿಮಾ ಬಿಡುಗಡೆಗೆ ಇನ್ನೂ ಏಳು ದಿನಗಳಿದ್ದು ಈಗಲೇ 18,000 ಟಿಕೆಟ್ಗಳು ಭಾರತದಲ್ಲಿ ಮುಂಗಡವಾಗಿ ಮಾರಾಟವಾಗಿವೆ.
ಹಾಲಿವುಡ್ (Hollywood) ಸಿನಿಮಾಗಳಿಗೆ ಭಾರತದ ಮಾರುಕಟ್ಟೆಯ ಶಕ್ತಿ ಅರ್ಥವಾಗಿ ಬಹಳ ಕಾಲವಾಗಿದೆ. ಹಾಲಿವುಡ್ನ ಹಲವು ದೊಡ್ಡ ಬಜೆಟ್ ಸಿನಿಮಾಗಳು ಸಿನಿಮಾ ನಿರ್ಮಿಸುವಾಗಲೇ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾ ಮಾಡುತ್ತವೆ. ಭಾರತದಲ್ಲಿ ಸಿನಿಮಾದ ಪ್ರಚಾರವನ್ನು ಜೋರಾಗಿಯೇ ಮಾಡುತ್ತವೆ. ಅದಕ್ಕೆ ತಕ್ಕಂತೆ ದೊಡ್ಡ ಮೊತ್ತದ ಕಲೆಕ್ಷನ್ ಅನ್ನೂ ಮಾಡಿಕೊಂಡು ಹೋಗುತ್ತವೆ. ಇದೀಗ ದೊಡ್ಡ ಬಜೆಟ್ನ ಹಾಲಿವುಡ್ ಸಿನಿಮಾ ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಆರು ದಿನ ಇರುವಂತೆಯೇ 18,000 ಟಿಕೆಟ್ಗಳನ್ನು ಮಾರಾಟ ಮಾಡಿದೆ.
ವಿಶ್ವದಾದ್ಯಂತ ತನ್ನದೇ ಅಭಿಮಾನಿ ಬಳಗ ಹೊಂದಿರುವ ಫಾಸ್ಟ್ ಆಂಡ್ ಫ್ಯೂರಿಯಸ್ (Fast and Furious) ಸಿನಿಮಾ ಸರಣಿಯ ಹತ್ತನೇ ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದ್ದು, ಭಾರತದಲ್ಲಿಯೂ ಈ ಸಿನಿಮಾಕ್ಕೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹಾಗಾಗಿ ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವಾರ ಇರುವಾಗಲೇ ಸಿನಿಮಾದ 18,000 ಟಿಕೆಟ್ಗಳು ವಿವಿಧ ಮಲ್ಟಿಪ್ಲೆಕ್ಸ್ಗಳಲ್ಲಿ ಮಾರಾಟವಾಗಿಬಿಟ್ಟಿದೆ.
ಈ 18 ಸಾವಿರ ಟಿಕೆಟ್ಗಳಲ್ಲಿ ಹತ್ತು ಸಾವಿರ ಟಿಕೆಟ್ಗಳು ಪಿವಿಆರ್ನಲ್ಲಿ, 4000 ಟಿಕೆಟ್ಗಳು ಐನಾಕ್ಸ್, 3000 ಟಿಕೆಟ್ಗಳು ಸಿನೆಪೊಲೀಸ್ ಹಾಗೂ ಒಂದು ಸಾವಿರ ಟಿಕೆಟ್ ಇತರೆ ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಮುಂಗಡವಾಗಿ ಮಾರಾಟವಾಗಿವೆ. ಭಾರತದಲ್ಲಿ ಟಿಕೆಟ್ ಬುಕಿಂಗ್ ಓಪನ್ ಆಗಿ ಎರಡೇ ದಿನವಾಗಿದ್ದು ಎರಡೇ ದಿನದಲ್ಲಿ 18,000 ಟಿಕೆಟ್ ಮಾರಾಟವಾಗಿವೆ. ಸಿನಿಮಾ ಬಿಡುಗಡೆ ವೇಳೆಗೆ ಮುಂಗಡ ಟಿಕೆಟ್ಗಳ ಸಂಖ್ಯೆ 70,000 ದಾಟಬಹುದೆಂದು ಅಂದಾಜಿಸಲಾಗಿದೆ.
ಕಳೆದ ಕೆಲ ವರ್ಷಗಳಲ್ಲಿ ಬಿಡುಗಡೆ ಆಗಿರುವ ಹಲವು ಹಾಲಿವುಡ್ ಸಿನಿಮಾಗಳು ಭಾರತದಲ್ಲಿ ಬಹಳ ಒಳ್ಳೆಯ ಕಲೆಕ್ಷನ್ ಮಾಡಿವೆ. ಸ್ಪೈಡರ್ಮ್ಯಾನ್: ನೋ ವೇ ಹೋಮ್, ಡಾಕ್ಟರ್ ಸ್ಟ್ರೇಂಜ್, ಟೆನೆಟ್, ಇದೀಗ ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ 3 ಸಿನಿಮಾಗಳು ಭಾರತದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿವೆ. ಕೆಲವು ಮಾರ್ವೆಲ್ ಸಿನಿಮಾಗಳು 100 ಕೋಟಿ ಗಳಿಸಿದ ಉದಾಹರಣೆಯೂ ಇದೆ. ಫಾಸ್ಟ್ ಆಂಡ್ ಫ್ಯೂರಿಯಸ್ ಸಿನಿಮಾಕ್ಕೆ ಈ ಹಿಂದಿನಿಂದಲೂ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗವಿದ್ದು ಈ ಸಿನಿಮಾ ಸಹ ಭಾರತದಲ್ಲಿ 100 ಕೋಟಿ ಗಳಿಕೆ ಮಾಡುವ ನಿರೀಕ್ಷೆ ಇದೆ.
ಇದೀಗ ಬಿಡುಗಡೆ ಆಗುತ್ತಿರುವುದು ಫಾಸ್ಟ್ ಆಂಡ್ ಫ್ಯೂರಿಯಸ್ ಸರಣಿಯ ಹತ್ತನೇ ಸಿನಿಮಾ ಆಗಿದ್ದು, ಸಿನಿಮಾವನ್ನು ಲೂಯಿಸ್ ಲ್ಯಾಟೇರಿಯರ್ ನಿರ್ದೇಶನ ಮಾಡಿದ್ದಾರೆ. ಈ ಹಿಂದಿನ ಫಾಸ್ಟ್ ಆಂಡ್ ಫ್ಯೂರಿಯಸ್ ಸರಣಿಯಲ್ಲಿ ನಟಿಸಿದ್ದ ತಂಡವೇ ಈ ಸಿನಿಮಾದಲ್ಲಿಯೂ ಮುಂದುವರೆದಿದೆ. ಆದರೆ ಹೋಬ್ಸ್ ಪಾತ್ರದಲ್ಲಿ ನಟಿಸಿದ್ದ ಖ್ಯಾತ ನಟ ರಾಕ್ ಅಭಿಪ್ರಾಯ ಭೇದದ ಕಾರಣದಿಂದ ಫಾಸ್ಟ್ ಆಂಡ್ ಫ್ಯೂರಿಯಸ್ ಸರಣಿಯಿಂದ ಹೊರಗೆ ಉಳಿದಿದ್ದಾರೆ. ಸಿನಿಮಾವು ಮೇ 19 ರಂದು ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ರೋಮ್ನಲ್ಲಿ ಮೇ 13 ರಂದು ತೆರೆ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ