SRH ದಾಖಲೆಯ ಗೆಲುವಿಗೆ ಕಾವ್ಯಾ ಮಾರನ್ ಖುಷ್; ಈಡೇರಿತು ರಜನಿಕಾಂತ್ ಕೋರಿಕೆ

ಸನ್ ರೈಸರ್ಸ್ ಹೈದರಾಬಾದ್ ತಂಡ ಕಳೆದ ಸೀಸನ್​ನಲ್ಲಿ 14ರಲ್ಲಿ ಕೇವಲ ನಾಲ್ಕು ಪಂದ್ಯ ಗೆದ್ದಿತ್ತು. ಪಂದ್ಯ ಸೋತಾಗಲೆಲ್ಲ ಕಾವ್ಯಾ ಬೇಸರ ಮಾಡಿಕೊಳ್ಳುತ್ತಿದ್ದರು. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದನ್ನು ಸ್ವತಃ ರಜನಿಕಾಂತ್ ಕೂಡ ಗಮನಿಸಿದ್ದರು.

SRH ದಾಖಲೆಯ ಗೆಲುವಿಗೆ ಕಾವ್ಯಾ ಮಾರನ್ ಖುಷ್; ಈಡೇರಿತು ರಜನಿಕಾಂತ್ ಕೋರಿಕೆ
ಕಾವ್ಯಾ-ರಜನಿ
Updated By: ರಾಜೇಶ್ ದುಗ್ಗುಮನೆ

Updated on: Mar 28, 2024 | 10:59 AM

ಸನ್ ರೈಸರ್ಸ್ ಹೈದರಾಬಾದ್ (SRH) ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ದಾಖಲೆಯ ರನ್ ಕಲೆ ಹಾಕಿದೆ. 20 ಓವರ್​ಗಳಲ್ಲಿ 277 ರನ್ ಕಲೆ ಹಾಕಿ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ತಂಡ ಎನ್ನುವ ದಾಖಲೆ ಬರೆದಿದೆ. ಈ ವೇಳೆ ಸನ್ ರೈಸರ್ಸ್ ಹೈದರಾಬಾದ್​ನ ಸಿಇಒ ಕಾವ್ಯಾ ಮಾರನ್ ಕುಣಿದು ಕುಪ್ಪಳಿಸಿದ್ದಾರೆ. ಅವರ ಖುಷಿಗೆ ಪಾರವೇ ಇರಲಿಲ್ಲ. ಈ ವೇಳೆ ರಜನಿಕಾಂತ್ ಅವರು ಕಾವ್ಯಾ ಬಗ್ಗೆ ಈ ಮೊದಲು ನೀಡಿದ್ದ ಹೇಳಿಕೆ ವೈರಲ್ ಆಗಿದೆ. ರಜನಿಕಾಂತ್ ಕೋರಿಕೆ ಈಡೇರಿದಂತಾಗಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡ ಕಳೆದ ಸೀಸನ್​ನಲ್ಲಿ ಅಷ್ಟು ಉತ್ತಮವಾಗಿ ಆಟ ಆಡಿರಲಿಲ್ಲ. 14ರಲ್ಲಿ ಕೇವಲ ನಾಲ್ಕು ಪಂದ್ಯ ಗೆದ್ದಿತ್ತು. ಪಂದ್ಯ ಸೋತಾಗಲೆಲ್ಲ ಕಾವ್ಯಾ ಬೇಸರ ಮಾಡಿಕೊಳ್ಳುತ್ತಿದ್ದರು. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದನ್ನು ಸ್ವತಃ ರಜನಿಕಾಂತ್ ಕೂಡ ಗಮನಿಸಿದ್ದರು. ಹೀಗಾಗಿ, ಅವರು ಕಾವ್ಯಾ ಮಾರನ್ ತಂದೆಗೆ ಒಂದು ಕಿವಿಮಾತು ಹೇಳಿದ್ದರು.

ಕಲಾನಿಧಿ ಮಾರನ್ ಅವರು ‘ಸನ್ ರೈಸರ್ಸ್​ ಹೈದರಾಬಾದ್’ ತಂಡದ ಮಾಲೀಕತ್ವ ಹೊಂದಿದ್ದಾರೆ. ಕಲಾನಿಧಿಯ ಮಗಳೇ ಕಾವ್ಯಾ ಮಾರನ್. ಸನ್ ಟಿವಿ, ಸನ್ ಪಿಕ್ಚರ್ಸ್​ನ ಒಡೆತನ ಕೂಡ ಕಲಾನಿಧಿ ಅವರೇ ಹೊಂದಿದ್ದಾರೆ. ‘ಜೈಲರ್’ ಸಿನಿಮಾನ ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿತ್ತು. ಈ ಚಿತ್ರದ ಕಾರ್ಯಕ್ರಮದಲ್ಲಿ ರಜನಿಕಾಂತ್ ಅವರು ಕಾವ್ಯಾ ಬಗ್ಗೆ ಮಾತನಾಡಿದ್ದರು. ಈ ಹೇಳಿಕೆ ಈಗ ಮತ್ತೆ ವೈರಲ್ ಆಗಿದೆ.

‘ಕಲಾನಿಧಿ ಮಾರನ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಒಳ್ಳೆಯ ಆಟಗಾರರನ್ನು ಸೇರಿಸಿಕೊಳ್ಳಬೇಕು. ಐಪಿಎಲ್ ಸಂದರ್ಭದಲ್ಲಿ ಕಾವ್ಯಾ ಬೇಸರ ಮಾಡಿಕೊಂಡು ಇರುವುದು ನೋಡಿ ನಮಗೂ ಬೇಸರ ಆಗುತ್ತದೆ’ ಎಂದು ರಜನಿಕಾಂತ್ ಹೇಳಿದ್ದರು. ಅದೇ ರೀತಿ ಸನ್ ರೈಸರ್ಸ್ ತಂಡ ಒಳ್ಳೆಯ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಇದರಿಂದ ತಂಡ ಗೆದ್ದು ಬೀಗುವಂತೆ ಆಗಿದೆ. ಇದರಿಂದ ಕಾವ್ಯಾ ಮಾರನ್ ಕೂಡ ಖುಷಿಯಾಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ‘ಕೊನೆಗೂ ಕಾವ್ಯಾ ಮಾರನ್​ ಮುಖದಲ್ಲಿ ನಗು ಬಂತು’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಇವರ ನಗು ನೋಡಲಾದರೂ ಎಸ್​ಆರ್​ಎಚ್​ ಗೆಲ್ಲಬೇಕು’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಆ ಒಂದು ವಿಚಾರದಲ್ಲಿ ಮಾಜಿ ಪತಿ ಧನುಷ್​ಗೆ ಸಂಪೂರ್ಣ ಕ್ರೆಡಿಟ್ ಕೊಟ್ಟ ಐಶ್ವರ್ಯಾ ರಜನಿಕಾಂತ್

ರಜನಿಕಾಂತ್ ಸಿನಿಮಾ ವಿಚಾರಕ್ಕೆ ಬರೋದಾದರೆ ಈ ವರ್ಷ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ‘ಲಾಲ್ ಸಲಾಂ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಅಂಥ ಗೆಲುವು ಕಾಣಲಿಲ್ಲ. ಸದ್ಯ ಅವರು ‘ವೆಟ್ಟೈಯನ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕೆ ಟಿಜಿ ಜ್ಞಾನವೇಲ್ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ