Kanguva: ರೋಲೆಕ್ಸ್​ಗಿಂತಲೂ ಹೆಚ್ಚು ಭಯಾನಕ ‘ಕಂಗುವ’; ಹೊಸ ಅವತಾರದಲ್ಲಿ ಬಂದ ಸೂರ್ಯ

Kanguva Glimpse: ‘ಕಂಗುವ’ ಗ್ಲಿಂಪ್ಸ್​ ಮೂಲಕ ನಟ ಸೂರ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ಅದರಲ್ಲಿ ಕಥೆಯ ಎಳೆ ಮತ್ತು ಅದ್ದೂರಿತನದ ಝಲಕ್​ ಕಾಣಿಸಿದೆ.

Kanguva: ರೋಲೆಕ್ಸ್​ಗಿಂತಲೂ ಹೆಚ್ಚು ಭಯಾನಕ ‘ಕಂಗುವ’; ಹೊಸ ಅವತಾರದಲ್ಲಿ ಬಂದ ಸೂರ್ಯ
ಸೂರ್ಯ

Updated on: Jul 23, 2023 | 2:21 PM

ನಟ ಸೂರ್ಯ (Suriya) ಅವರಿಗೆ ಇಂದು (ಜುಲೈ 23) ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಈ ದಿನವನ್ನು ಭರ್ಜರಿಯಾಗಿ ಸೆಲೆಬ್ರೇಟ್​ ಮಾಡುತ್ತಿದ್ದಾರೆ. ಅವರ ಸಂಭ್ರಮವನ್ನು ಹೆಚ್ಚಿಸುವ ರೀತಿಯಲ್ಲಿ ‘ಕಂಗುವ’ ಸಿನಿಮಾದ ಗ್ಲಿಂಪ್ಸ್​ (Kanguva Glimpse) ಬಿಡುಗಡೆ ಆಗಿದೆ. ಇದರಲ್ಲಿ ಸೂರ್ಯ ಅವರ ಪಾತ್ರ ಗಮನ ಸೆಳೆಯುತ್ತಿದೆ. ಕಳೆದ ವರ್ಷ ರಿಲೀಸ್ ಆದ ‘ವಿಕ್ರಂ’ ಸಿನಿಮಾದಲ್ಲಿ ಸೂರ್ಯ ಅವರು ರೋಲೆಕ್ಸ್​ ಎಂಬ ಪಾತ್ರ ಮಾಡಿದ್ದರು. ನೆಗೆಟಿವ್​ ಪಾತ್ರದಲ್ಲಿ ಅವರನ್ನು ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದರು. ಆ ಪಾತ್ರಕ್ಕಿಂತಲೂ ಹೆಚ್ಚು ಭಯಾನಕವಾಗಿದೆ ‘ಕಂಗುವ’ (Kanguva) ಗೆಟಪ್​. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಈ ಸಿನಿಮಾದ ಗ್ಲಿಂಪ್ಸ್​ಗೆ ಮಿಲಿಯನ್​ಗಟ್ಟಲೆ ವೀವ್ಸ್​ ಬಂದಿದೆ. ಅಭಿಮಾನಿಗಳಿಗೆ ಇದು ಸಖತ್​ ಇಷ್ಟ ಆಗಿದೆ.

‘ಕಂಗುವ’ ಗ್ಲಿಂಪ್ಸ್​ ಮೂಲಕ ನಟ ಸೂರ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ಕಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಗಮನಾರ್ಹ ಸಿನಿಮಾಗಳನ್ನು ನೀಡಿದ ಕೆ.ಇ. ಜ್ಞಾನವೇಲ್ ರಾಜ ಅವರು ಈಗ ‘ಕಂಗುವ’ ಚಿತ್ರವನ್ನು ನಿರ್ಮಿಸಿದ್ದಾರೆ. ಅವರ ‘ಸ್ಟುಡಿಯೋ ಗ್ರೀನ್’ ಸಂಸ್ಥೆ ಮೂಲಕ ಈ ಸಿನಿಮಾ ತಯಾರಾಗುತ್ತಿದೆ. ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ‘ಕಂಗುವ’ ಸಿನಿಮಾ ಸಿದ್ಧವಾಗುತ್ತಿದೆ ಎಂಬುದು ವಿಶೇಷ. ದೇವಿ ಶ್ರೀ ಪ್ರಸಾದ್ ಸಂಗೀತ ನಿರ್ದೇಶನ, ವೆಟ್ರಿ ಪಳನಿಸ್ವಾಮಿ ಅವರ ಛಾಯಾಗ್ರಹಣದಲ್ಲಿ ಈ ಚಿತ್ರ ಮೂಡಿಬರುತ್ತಿದೆ.

ಪ್ಯಾನ್​ ಇಂಡಿಯಾ ಸಿನಿಮಾಗಳು ಸದ್ದು ಮಾಡುತ್ತಿರುವ ಜಮಾನಾ ಇದು. ಈ ಟ್ರೆಂಡ್​ನಲ್ಲಿ ‘ಕಂಗುವ’ ಚಿತ್ರ ಕೂಡ ಸೇರಿಕೊಳ್ಳುತ್ತಿದೆ. ಏಕಕಾಲಕ್ಕೆ ಬರೋಬ್ಬರಿ 10 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. 3ಡಿ ವರ್ಷನ್​ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈ ವಿಷಯ ಕೇಳಿ ಅಭಿಮಾನಿಗಳ ಥ್ರಿಲ್​ ಹೆಚ್ಚಿದೆ. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ‘ಕಂಗುವ’ ಗ್ಲಿಂಪ್ಸ್​ ವೈರಲ್​ ಆಗಿದೆ. ಈ ಸಿನಿಮಾದಲ್ಲಿ ದಿಶಾ ಪಟಾಣಿ ಅವರು ನಾಯಕಿಯಾಗಿ ನಟಿಸುವ ಮೂಲಕ ಕಾಲಿವುಡ್​ಗೆ ಎಂಟ್ರಿ ನೀಡುತ್ತಿದ್ದಾರೆ.

Kanguva: 80 ಕೋಟಿ ರೂಪಾಯಿಗೆ ಮಾರಾಟ ಆಯ್ತು ‘ಕಂಗುವ’ ಒಟಿಟಿ ಹಕ್ಕು; ಹೇಗಿದೆ ನೋಡಿ ಸೂರ್ಯ ಹವಾ

ಮಾನವೀಯ ಸಂಬಂಧಗಳ ಕಥೆ ‘ಕಂಗುವ’ ಚಿತ್ರದಲ್ಲಿ ಇರಲಿದೆ. ಜೊತೆಗೆ ಭರ್ಜರಿ ಸಾಹಸ ದೃಶ್ಯಗಳನ್ನೂ ಈ ಚಿತ್ರ ಹೊಂದಿರಲಿದೆ. ಸದ್ಯಕ್ಕೆ ಬಿಡುಗಡೆ ಆಗಿರುವ 2 ನಿಮಿಷ ಅವಧಿಯ ಫಸ್ಟ್​ ಗ್ಲಿಂಪ್ಸ್​ ವಿಡಿಯೋದಲ್ಲಿ ಸಿನಿಮಾದ ಅದ್ದೂರಿತನದ ಝಲಕ್​ ಕಾಣಿಸಿದೆ. ವಿಡಿಯೋ ಕೊನೆಯಲ್ಲಿ ಸೂರ್ಯ ಕಾಣಿಸಿಕೊಂಡ ರೀತಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಎಲ್ಲರೂ ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಸದ್ಯಕ್ಕೆ ‘ಕಂಗುವ’ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ. 2024ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us