Kanguva: ಸೂರ್ಯ ನಟನೆಯ ಹೊಸ ಚಿತ್ರದ ಶೀರ್ಷಿಕೆ ಬಹಿರಂಗ; 10 ಭಾಷೆಯಲ್ಲಿ ಮೂಡಿಬರಲಿದೆ ‘ಕಂಗುವ’

|

Updated on: Apr 16, 2023 | 12:55 PM

Suriya | Kanguva Movie; ಈ ಚಿತ್ರ 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಗಾಗಿ ಚಿತ್ರತಂಡ ಹುಡುಕಾಟ ನಡೆಸಿತ್ತು. ಆ ಶೀರ್ಷಿಕೆ ಕೊನೆಗೂ ಸಿಕ್ಕಿದೆ.

Kanguva: ಸೂರ್ಯ ನಟನೆಯ ಹೊಸ ಚಿತ್ರದ ಶೀರ್ಷಿಕೆ ಬಹಿರಂಗ; 10 ಭಾಷೆಯಲ್ಲಿ ಮೂಡಿಬರಲಿದೆ ‘ಕಂಗುವ’
‘ಕಂಗುವ’ ಪೋಸ್ಟರ್, ಸೂರ್ಯ
Follow us on

ಕಾಲಿವುಡ್​ ನಟ ಸೂರ್ಯ(Suriya)  ಅವರ ಪ್ರತಿ ಸಿನಿಮಾದಲ್ಲೂ ಒಂದಿಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ ಎಂಬ ನಂಬಿಕೆ ಅಭಿಮಾನಿಗಳದ್ದು. ಆ ನಂಬಿಕೆಯನ್ನು ಸೂರ್ಯ ಎಂದಿಗೂ ಹುಸಿ ಮಾಡಿಲ್ಲ. ಈ ಅವರು 42ನೇ (Suriya 42) ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಈ ಸಿನಿಮಾ ಕೂಡ ಸ್ಥಾನ ಪಡೆದುಕೊಂಡಿದೆ. 2022ರ ಸೆಪ್ಟೆಂಬರ್​ನಲ್ಲಿ ಈ ಚಿತ್ರ ಘೋಷಣೆ ಆಯಿತು. ಆದರೆ ಇದರ ಶೀರ್ಷಿಕೆ ಏನು ಎಂಬುದು ತಿಳಿದಿರಲಿಲ್ಲ. ಈಗ ಚಿತ್ರತಂಡದಿಂದ ಟೈಟಲ್​ ಅನೌನ್ಸ್​ ಆಗಿದೆ. ಈ ಚಿತ್ರವು 3ಡಿಯಲ್ಲಿ ಮೂಡಿಬರುತ್ತಿದೆ. ಅಲ್ಲದೇ, 10 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಇಷ್ಟೆಲ್ಲ ವಿಶೇಷಗಳನ್ನು ಹೊಂದಿರುವ ಈ ಸಿನಿಮಾಗೆ ‘ಕಂಗುವ’ (Kanguva Movie) ಎಂದು ಶೀರ್ಷಿಕೆ ಇಡಲಾಗಿದೆ. ಅದನ್ನು ತಿಳಿಸಲು ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ. ‘ಕಂಗುವ’ ಟೈಟಲ್​ ಮೂಲಕ ಅಭಿಮಾನಿಗಳ ವಲಯದಲ್ಲಿ ಹೈಪ್​ ಹೆಚ್ಚಾಗಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಸದ್ದು ಮಾಡಲಿದೆ.

‘ಸ್ಟುಡಿಯೋ ಗ್ರೀನ್​’ ಮೂಲಕ ಕೆ.ಇ. ಜ್ನಾನವೇಲ್ ರಾಜ ನಿರ್ಮಿಸುತ್ತಿರುವ ‘ಕಂಗುವ’ ಚಿತ್ರಕ್ಕೆ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕೆಲಸಗಳು ಆರಂಭ ಆದಾಗಿನಿಂದ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ಬಾಲಿವುಡ್​ ನಟಿ ದಿಶಾ ಪಟಾಣಿ ಅಭಿನಯಿಸುತ್ತಿದ್ದಾರೆ. ಯೋಗಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೋಷನ್​ ಪೋಸ್ಟರ್​ ಕಂಡು ಫ್ಯಾನ್ಸ್​ ಖುಷಿ ಆಗಿದ್ದಾರೆ.

ಇದನ್ನೂ ಓದಿ
ಈ ಫೋಟೋದಲ್ಲಿರುವ ಸ್ಟಾರ್ ನಟರು ಯಾರು ಎಂದು ಗುರುತಿಸುತ್ತೀರಾ?
‘ವಿಕ್ರಮ್​’ ವಿಲನ್ ಸೂರ್ಯಗೆ ರೋಲೆಕ್ಸ್ ವಾಚ್ ಗಿಫ್ಟ್ ಕೊಟ್ಟ ಕಮಲ್ ಹಾಸನ್​; ಇದರ ಬೆಲೆ ಎಷ್ಟು ಲಕ್ಷ? ಗೆಸ್ ಮಾಡಿ
ಅಪಘಾತದಲ್ಲಿ ಮೃತಪಟ್ಟ ಅಭಿಮಾನಿ ಮನೆಗೆ ಭೇಟಿ ನೀಡಿ ಭಾವುಕರಾದ ನಟ ಸೂರ್ಯ
Suriya: ನಟ ಸೂರ್ಯ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ; ಕಾರಣವೇನು? ಇಲ್ಲಿದೆ ಮಾಹಿತಿ

ಬಹುನಿರೀಕ್ಷಿತ ‘ಕಂಗುವ’ ಸಿನಿಮಾ 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಗಾಗಿ ಚಿತ್ರತಂಡ ಹುಡುಕಾಟ ನಡೆಸಿತ್ತು. ಆ ಶೀರ್ಷಿಕೆ ಕೊನೆಗೂ ಸಿಕ್ಕಿದೆ. ‘ಕಂಗುವ’ ಎಂದರೆ, ಬೆಂಕಿಯ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿರುತ್ತಾನೆ. ಹಲವು ಅವತಾರಗಳಲ್ಲಿ ಆತ ಕಾಣಿಸಿಕೊಳ್ಳುತ್ತಾನೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: Suriya: ಫ್ಯಾಮಿಲಿ ಸಮೇತ ಮುಂಬೈನಲ್ಲಿ ಸೆಟ್ಲ್​ ಆದ ನಟ ಸೂರ್ಯ; ಚೆನ್ನೈ ತೊರೆಯುವಂಥದ್ದು ಏನಾಯ್ತು?

‘ಕಂಗುವ’ ಚಿತ್ರಕ್ಕೆ ಈಗಾಗಲೇ ಗೋವಾ, ಚೆನ್ನೈ ಮುಂತಾದ ಕಡೆಗಳಲ್ಲಿ ಶೇಕಡ 50ರಷ್ಟು ಚಿತ್ರೀಕರಣ ಮುಗಿದಿದೆ. ಬಾಕಿ ಇರುವ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸಿ, ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ.

ಈ ಸಿನಿಮಾದ ತೆರೆಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ವೆಟ್ರಿ ಪಳನಿಸಾಮಿ ಅವರು ಛಾಯಾಗ್ರಹಣ ಮತ್ತು ದೇವಿ ಶ್ರೀಪ್ರಸಾದ್ ಅವರು ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಈ ಚಿತ್ರವು ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದ್ದು, ವಿಎಫ್​ಎಕ್ಸ್ ಕೆಲಸಗಳಿಗೆ ಸಾಕಷ್ಟು ಹಣ ಮೀಸಲಿಡಲಾಗಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚು ಸಮಯ ಬೇಕಾಗಿರುವುದರಿಂದ ಚಿತ್ರವು 2024ರ ಆರಂಭದಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:55 pm, Sun, 16 April 23