Suvo Chakraborty: ಫೇಸ್ಬುಕ್ ಲೈವ್ನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ ಕಿರುತೆರೆ ನಟ
Suvo Chakraborty Video: ಫೇಸ್ಬುಕ್ನಲ್ಲಿ ಇದನ್ನು ನೋಡುತ್ತಿದ್ದ ಅಭಿಮಾನಿಗಳಿಗೆ ಟೆನ್ಶನ್ ಆಗಿದೆ. ಈ ವಿಚಾರವನ್ನು ಅಭಿಮಾನಿಗಳು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಅವರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಕೊರೊನಾ ವೈರಸ್ ಎರಡನೇ ಅಲೆ ಜೋರಾದ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಚಿತ್ರರಂಗದ ಕೆಲಸಗಳು ಅರ್ಧಕ್ಕೆ ನಿಂತಿದ್ದು, ಸಾಕಷ್ಟು ಕಲಾವಿದರು ಕೆಲಸ ಇಲ್ಲದೆ ಮನೆಯಲ್ಲಿ ಕೂರುವಂತಾಗಿದೆ. ಕೆಲ ಕಲಾವಿದರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಅದೇ ರೀತಿ ಕೆಲಸ ಇಲ್ಲದೆ, ಕಿರುತೆರೆ ನಟನೋರ್ವ ಫೇಸ್ಬುಕ್ ಲೈವ್ನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ಸುವೋ ಚಕ್ರವರ್ತಿ ಬೆಂಗಾಲಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಸರ್ಕಾರ ಹೇರಿರುವ ಲಾಕ್ಡೌನ್ನಿಂದ ಅವರಿಗೆ ಕೆಲಸ ಇಲ್ಲದಾಗಿದೆ. ಹೀಗಾಗಿ, ಆರ್ಥಿಕ ಮುಗ್ಗಟ್ಟು ಎದುರಿಸಲು ಸಾಧ್ಯವಾಗದೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಫೇಸ್ಬುಕ್ ಲೈವ್ ಬಂದಿರುವ ಅವರು ನಿದ್ರೆ ಮಾತ್ರೆ ಸೇವನೆ ಮಾಡಿದ್ದಾರೆ.
‘ನನಗೆ ಕಟ್ಟಡದ ಮೇಲಿನಿಂದ ಜಿಗಿಯೋಕೆ ಬರುವುದಿಲ್ಲ. ಕೈ ಕತ್ತರಿಸಿಕೊಳ್ಳುವುದು, ನೇಣು ಹಾಕಿಕೊಳ್ಳುವುದೆಲ್ಲ ಇಷ್ಟವಾಗುವುದಿಲ್ಲ. ಕೊನೆಯದಾಗಿ ನನಗೆ ಸಿಕ್ಕಿದ್ದು ಈ ನಿದ್ರೆ ಮಾತ್ರೆಗಳು’ ಎಂದು ಅವರು ಲೈವ್ನಲ್ಲಿ ಹೇಳಿದ್ದಾರೆ.
ಫೇಸ್ಬುಕ್ನಲ್ಲಿ ಇದನ್ನು ನೋಡುತ್ತಿದ್ದ ಅಭಿಮಾನಿಗಳಿಗೆ ಟೆನ್ಶನ್ ಆಗಿದೆ. ಈ ವಿಚಾರವನ್ನು ಅಭಿಮಾನಿಗಳು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಸುವೋ ಅವರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಅವಕಾಶಗಳು ಇಲ್ಲದೆ, ಸುವೋ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎನ್ನಲಾಗಿದೆ.
ಕೊವಿಡ್ನಿಂದ ಚಿತ್ರರಂಗದ ಸಾಕಷ್ಟು ಕಲಾವಿದರಿಗೆ ಕೆಲಸ ಇಲ್ಲದಂತಾಗಿದೆ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್ನಲ್ಲಿ ಕೌನ್ಸಿಲರ್ ಆಗಿ ಕಾಣಿಸಿಕೊಂಡಿದ್ದು ಆಸಿಫ್ ಬಸ್ರಾ ಕಳೆದ ನವೆಂಬರ್ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಟ ಆಸಿಫ್ ಬಸ್ರಾರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಹಿಮಾಚಲ ಪ್ರದೇಶದ ಧರಮ್ಶಾಲಾದ ಖಾಸಗಿ ಕಟ್ಟದವೊಂದರಲ್ಲಿ ನವೆಂಬರ್ನಲ್ಲಿ ಪತ್ತೆಯಾಗಿತ್ತು. ಆಸಿಫ್ ಬಸ್ರಾ ಹಲವು ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ತಮ್ಮದೇ ವಿಭಿನ್ನ ಛಾಪು ಮೂಡಿಸಿದ್ದರು. ಲಾಕ್ಡೌನ್ ತಂದೊಡ್ಡಿದ ಸಂಕಷ್ಟದಿಂದ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟ ಆ ಒಂದು ವಿಷಯ.. ನಿರ್ಜನ ಪ್ರದೇಶದಲ್ಲಿ ಗಂಡನ ಆತ್ಮಹತ್ಯೆ, ಪತ್ನಿ ಆಸ್ಪತ್ರೆಗೆ ದಾಖಲು
Published On - 6:46 pm, Thu, 10 June 21