ದುನಿಯಾ ವಿಜಯ್ ಸಿನಿಮಾದಲ್ಲಿ ಖಡಕ್ ಪಾತ್ರದ ಮೂಲಕ ಎಂಟ್ರಿ ಕೊಟ್ಟ ಟಬು

ವಿಜಯ್ ಸೇತುಪತಿ ಅಭಿನಯದ 'ಸ್ಲಮ್‌ಡಾಗ್: 33 ಟೆಂಪಲ್ ರೋಡ್' ಸಿನಿಮಾದಲ್ಲಿ ನಟಿ ಟಬು ಗೌರಿ ಹೆಗ್ಡೆ ಎಂಬ ಖಡಕ್ ಆದಾಯ ತೆರಿಗೆ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದ ಅವರ ಆಕ್ಷನ್ ಝಲಕ್ ಹೊರಬಿದ್ದಿದ್ದು, ಸ್ವತಃ ತೆಲುಗಿನಲ್ಲಿ ಡಬ್ಬಿಂಗ್ ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ದುನಿಯಾ ವಿಜಯ್ ಸಿನಿಮಾದಲ್ಲಿ ಖಡಕ್ ಪಾತ್ರದ ಮೂಲಕ ಎಂಟ್ರಿ ಕೊಟ್ಟ ಟಬು
ಟಬು

Updated on: Aug 10, 2026 | 12:41 PM

ವಿಜಯ್ ಸೇತುಪತಿ, ದುನಿಯಾ ವಿಜಯ್ ಅಭಿನಯದ, ಪೂರಿ ಜಗನ್ನಾಥ್ ನಿರ್ದೇಶನದ ‘ಸ್ಲಮ್‌ಡಾಗ್: 33 ಟೆಂಪಲ್ ರೋಡ್’ ಸಿನಿಮಾದಲ್ಲಿ ಖ್ಯಾತ ನಟಿ ಟಬು ನಟಿಸುತ್ತಿದ್ದಾರೆ. ಚಿತ್ರತಂಡ ಈಗ ಅವರ ಪಾತ್ರದ ವಿಶೇಷ ಝಲಕ್ ಹಂಚಿಕೊಂಡಿದೆ. ಈ ಸಿನಿಮಾದಲ್ಲಿ ಅವರು ಗೌರಿ ಹೆಗ್ಡೆ ಎಂಬ ಶಕ್ತಿಶಾಲಿ ಹಾಗೂ ಭ್ರಷ್ಟರಿಗೆ ಸಿಂಹಸ್ವಪ್ನವಾದ ಆದಾಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಟಬು ಅವರ ಪವರ್‌ಫುಲ್ ಲುಕ್

ಈ ಸಿನಿಮಾದಲ್ಲಿ ಟಬು ಅವರದ್ದು ಅತ್ಯಂತ ರಗಡ್ ಪಾತ್ರ. ಅವರು ತಮ್ಮ ಆ್ಯಕ್ಷನ್ ಅವತಾರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ಕನ್ನಡದಲ್ಲೂ ಬರುತ್ತಿದೆ. ಹೀಗಾಗಿ, ಕನ್ನಡದಲ್ಲೂ ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಸದ್ಯ ಟಬು ಪಾತ್ರ ಪರಿಚಯ ಕನ್ನಡ ಭಾಷೆಯಲ್ಲೂ ಸಿಕ್ಕಿರೋದು ಅಭಿಮಾನಿಗಳಿಗೆ ಖುಷಿ ತಂದಿದೆ.

ಪೂರಿ ಜಗನ್ನಾಥ್ ತಮ್ಮ ನಾಯಕಿಯರ ಪಾತ್ರಗಳನ್ನು ವಿಭಿನ್ನವಾಗಿ ತೋರಿಸುತ್ತಾರೆ. ಅವರ ಪಾತ್ರಗಳಿಗೆ ಒಂದು ವಿಶೇಷ ತೂಕ ಇರುತ್ತದೆ. ಈ ಚಿತ್ರದಲ್ಲೂ ಟಬು ಪಾತ್ರದ ಗತ್ತು ಎದ್ದು ಕಾಣುತ್ತಿದೆ. ಈ ಚಿತ್ರವನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ.

YouTube video player

ದೊಡ್ಡ ತಾರಾಗಣದ ಚಿತ್ರ

ಈ ಸಿನಿಮಾದಲ್ಲಿ ಕೇವಲ ಆ್ಯಕ್ಷನ್ ಮಾತ್ರವಲ್ಲದೆ ಬಲವಾದ ಕಥೆಯೂ ಇದೆ ಎಂದು ನಿರ್ದೇಶಕ ಪೂರಿ ಜಗನ್ನಾಥ್ ಹೇಳಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಪ್ರತಿಯೊಂದು ದೃಶ್ಯವೂ ಕುತೂಹಲ ಮೂಡಿಸಲಿದೆ. ನಟಿ ಸಂಯುಕ್ತ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿದ್ದಾರೆ. ಬ್ರಹ್ಮಾಜಿ ಮತ್ತು ವಿಟಿವಿ ಗಣೇಶ್ ಕೂಡ ಅಭಿನಯಿಸಿದ್ದಾರೆ. ಪ್ರತಿಯೊಬ್ಬರ ಪಾತ್ರಕ್ಕೂ ಇಲ್ಲಿ ವಿಶೇಷ ಮಹತ್ವ ನೀಡಲಾಗಿದೆ ಎಂಬುದು ನಿರ್ದೇಶಕರ ಮಾತು.

ಇದನ್ನೂ ಓದಿ: ‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ; ಏನದು?

ಈ ಬಹುಭಾಷಾ ಚಿತ್ರವನ್ನು ಪೂರಿ ಜಗನ್ನಾಥ್, ಚಾರ್ಮಿ ಕೌರ್ ಹಾಗೂ ಜೆಬಿ ನಾರಾಯಣ ರಾವ್ ಕೊಂಡ್ರೊಲ್ಲ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಹರ್ಷವರ್ಧನ್ ರಾಮೇಶ್ವರ್ ಸಂಗೀತ ನೀಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗಲಿದೆ. ಬೆಳ್ಳಿತೆರೆಯ ಮೇಲೆ ಟಬು ಅವರ ಈ ಹೊಸ ಅವತಾರವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಿಡುಗಡೆಯ ನಂತರ ಈ ಪಾತ್ರ ಪ್ರೇಕ್ಷಕರನ್ನು ಎಷ್ಟು ರಂಜಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us