ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ‘ಒದೆಲಾ 2’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ಸಿದ್ಧರಾಗಿದ್ದಾರೆ. ಮುಂಬೈನಲ್ಲಿ ಈ ಚಿತ್ರದ ಟ್ರೇಲರ್ ಲಾಂಚ್ ನಡೆದಿದೆ. ಟ್ರೇಲರ್ನಲ್ಲಿ ತಮನ್ನಾ ಅವರ ನಟನೆ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ತಮನ್ನಾ ಭಾಟಿಯಾ ಮತ್ತು ವಸಿಷ್ಠ ಸಿಂಹ (Vasishta Simha) ಅವರು ಈ ಸಿನಿಮಾದಲ್ಲಿ ಮುಖಾಮಖಿ ಆಗುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 17ರಂದು ರಿಲೀಸ್ ಆಗುತ್ತಿದೆ. ಚಿತ್ರದ ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ಅವರು ಹೇಳಿದ ಮಾತು ಗಮನ ಸೆಳೆದಿದೆ.
ತಮನ್ನಾ ಸಖತ್ ಗ್ಲಾಮರಸ್. ಅವರು ಯಾವುದೇ ವೇದಿಕೆ ಮೇಲೆ ಕಾಣಿಸಿಕೊಂಡರೂ ಗಮನ ಸೆಳೆಯುತ್ತಾರೆ. ಇದೊಂದು ಹಾರರ್ ಸಿನಿಮಾ. ಹೀಗಾಗಿ, ಅವರಿಗೆ ಅದೇ ರೀತಿಯ ಪ್ರಶ್ನೆಗಳು ಎದುರಾಗುತ್ತವೆ. ‘ನಿಮಗೆ ವಿಶೇಷ ಶಕ್ತಿ ಸಿಕ್ಕರೆ ಜೀವನದಲ್ಲಿ ಯಾರ್ಯಾರನ್ನು ವಶ ಮಾಡಿಕೊಳ್ಳಲು ಬಯಸುತ್ತೀರಿ’ ಎಂದು ಕೇಳಲಾಯಿತು. ಇದಕ್ಕೆ ತಮನ್ನಾ ಎಲ್ಲರ ಹೃದಯ ಕದಿಯುವ ಉತ್ತರ ನೀಡಿದ್ದಾರೆ. ‘ನಾನು ಎಲ್ಲರ ಹೃದಯದಲ್ಲಿ ನೆಲೆಸಲು ಬಯಸುತ್ತೇನೆ’ ಎಂದು ಹೇಳಿದ್ದಾರೆ. ಅವರ ಉತ್ತರಕ್ಕೆ ಮೆಚ್ಚುಗೆ ಸಿಕ್ಕಿದೆ.
ತಮನ್ನಾ ಭಾಟಿಯಾ ಅವರು ಶಿವ ಶಕ್ತಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಅಶೋಕ್ ತೇಜ ಅವರು ‘ಓದೆಲ 2’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಂಪತ್ ನಂದಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಪಾತ್ರವರ್ಗದಲ್ಲಿ ತಮನ್ನಾ ಭಾಟಿಯಾ, ವಸಿಷ್ಠ ಸಿಂಹ ಇದ್ದಾರೆ. ವಸಿಷ್ಠ ಅವರದ್ದು ನೆಗೆಟಿವ್ ಪಾತ್ರ. ಕನ್ನಡದ ನಟ ಶರತ್ ಲೋಹಿತಾಶ್ವ ಪ್ರಮುಖ ಪಾತ್ರ ಮಾಡಿದ್ದಾರೆ. ಹೆಭಾ ಪಟೇಲ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ಇದನ್ನೂ ಓದಿ: ‘ಓದೆಲ 2’ ಟ್ರೇಲರ್: ತಮನ್ನಾ, ವಸಿಷ್ಠ ಸಿಂಹ ಮುಖಾಮುಖಿ; ಹಾರರ್ ಪ್ರಿಯರಿಗೆ ಹಬ್ಬ
ಸದ್ಯ ಮಕ್ಕಳಿಗೆ ಪರೀಕ್ಷೆಗಳ ಅಬ್ಬರ ಮುಗಿದಿದ್ದು, ಈಗ ಬೇಸಿಗೆ ರಜೆ ಆರಂಭ ಆಗಿದೆ. ಈ ಸಂದರ್ಭದಲ್ಲಿ ಸಿನಿಮಾಗಳನ್ನು ರಿಲೀಸ್ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುತ್ತಾರೆ ಎಂಬುದು ಚಿತ್ರತಂಡದವರ ನಂಬಿಕೆ. 2022ರಲ್ಲಿ ರಿಲೀಸ್ ಆದ ‘ಒಡೆಲಾ ರೈಲ್ವೇ ಸ್ಟೇಷನ್’ ಚಿತ್ರದ ಮುಂದಿನ ಭಾಗ ಇದಾಗಿದೆ. ತಮನ್ನಾ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಹಿಟ್ ಆದ ಕಾರಣ ಸೀಕ್ವೆಲ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.