
ದಕ್ಷಿಣ ಭಾರತದಲ್ಲಿ ವಿಜಯ್ ಸೇತುಪತಿ (Vijay Sethupathi) ಅವರು ತುಂಬ ಜನಪ್ರಿಯತೆ ಹೊಂದಿದ್ದಾರೆ. ಕಾಲಿವುಡ್ನಲ್ಲಿ ಅವರ ಹವಾ ಜೋರಾಗಿದೆ. ವಿಲನ್ ಪಾತ್ರಗಳ ಮೂಲಕ ಅವರು ತಮ್ಮದೇ ಚಾಪು ಮೂಡಿಸಿದ್ದಾರೆ. ಹಾಗಂತ ಅವರು ಒಂದೇ ರೀತಿಯ ಪಾತ್ರಗಳಿಗೆ ಬ್ರ್ಯಾಂಡ್ ಆಗಿಲ್ಲ. ಎಲ್ಲ ಬಗೆಯ ಪ್ರಯೋಗಳನ್ನೂ ಮಾಡುತ್ತ, ಜನಮೆಚ್ಚುಗೆ ಪಡೆಯುತ್ತಿದ್ದಾರೆ. ಆದರೆ ಅವರು ಹೆಚ್ಚು ದಪ್ಪ ಇದ್ದಾರೆ ಎಂಬ ಕಾರಣಕ್ಕೆ ಟ್ರೋಲ್ ಆಗಿದ್ದೂ ಉಂಟು. ಅದನ್ನೇ ಈಗ ವಿಜಯ್ ಸೇತುಪತಿ ಸವಾಲಾಗಿ ಸ್ವೀಕರಿಸಿದಂತಿದೆ. ಕೇವಲ ಒಂದೇ ತಿಂಗಳಲ್ಲಿ ಅವರು ತುಂಬ ಸ್ಲಿಮ್ ಆಗಿದ್ದಾರೆ. ಅವರ ಹೊಸ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ದೇಹದ ತೂಕ ಇಳಿಸಿಕೊಂಡಿದ್ದು (weight Loss) ಹೇಗೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ವಿಜಯ್ ಸೇತುಪತಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ತಮಿಳಿನ ‘ಡಿಎಸ್ಪಿ’ ಸಿನಿಮಾ ತೆರೆಕಂಡಿತು. ಆ ಚಿತ್ರದ ಪ್ರಚಾರದ ವೇಳೆ ಸಾರ್ವಜನಿಕವಾಗಿ ಕಾಣಿಸಿಕೊಂಡ ವಿಜಯ್ ಸೇತುಪತಿ ಅವರು ಮೊದಲಿನಂತೆಯೇ ದಪ್ಪಗಿದ್ದರು. ಆದರೆ ಈಗ ಸಡನ್ ಆಗಿ ಸ್ಲಿಮ್ ಆಗಿರುವ ಫೋಟೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Katrina Kaif: ತೆರೆ ಹಿಂದಿನ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್; ವಿಜಯ್ ಸೇತುಪತಿ ಜತೆ ಕೆಲಸ ಕೆಲಸ ಕೆಲಸ
ಇಷ್ಟು ಕಡಿಮೆ ಅವಧಿಯಲ್ಲಿ ಈ ಪರಿ ಸ್ಲಿಮ್ ಆಗಲಿ ಸಾಧ್ಯವೇ ಇಲ್ಲ ಎಂಬುದು ಕೆಲವರ ವಾದ. ಈ ಫೋಟೋದಲ್ಲಿ ಸ್ಲಿಮ್ ಆಗಿ ಕಾಣಿಸಲು ಕ್ಯಾಮೆರಾ ಆ್ಯಂಗಲ್ ಕಾರಣ ಎಂದು ಕೂಡ ಹೇಳಲಾಗುತ್ತಿದೆ. ಹೊಸ ಅವತಾರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಹಿಂದೆ ಅವರನ್ನು ಟ್ರೋಲ್ ಮಾಡಿದ್ದವರೆಲ್ಲ ಈಗ ಗಪ್ ಚುಪ್ ಆಗಿದ್ದಾರೆ. ದೇಹದ ತೂಕ ಕಡಿಮೆ ಮಾಡಿಕೊಳ್ಳುವ ವಿಚಾರದಲ್ಲಿ ವಿಜಯ್ ಸೇತುಪತಿ ಅವರು ಎಲ್ಲರಿಗೂ ಸ್ಫೂರ್ತಿ ನೀಡಿದ್ದಾರೆ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ವಿಜಯ್ ಸೇತುಪತಿ-ನಿತ್ಯಾ ಮೆನನ್ ಮಹತ್ವದ ನಿರ್ಧಾರ; ಅಭಿಮಾನಿಗಳಿಗೆ ಅಚ್ಚರಿ ತಂದ ತೀರ್ಮಾನ
2022ರ ವರ್ಷ ವಿಜಯ್ ಸೇತುಪತಿ ಪಾಲಿಗೆ ಖುಷಿ ನೀಡಿದೆ. ಈ ವರ್ಷ ಅವರು ನಟಿಸಿದ ‘ವಿಕ್ರಮ್’ ಸಿನಿಮಾ ಸೂಪರ್ ಹಿಟ್ ಆಯಿತು. ಅದರ ಪರಿಣಾಮವಾಗಿ ಅವರಿಗಿದ್ದ ಡಿಮ್ಯಾಂಡ್ ಹೆಚ್ಚಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ವಿಜಯ್ ಸೇತುಪತಿ ಒಪ್ಪಿಕೊಳ್ಳುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:55 am, Wed, 14 December 22