AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳು ನಟ ಸಿಂಭು ವಿರುದ್ಧ ದೂರು, ಚಿತ್ರರಂಗದಿಂದ ನಿಷೇಧಿಸುವಂತೆ ಒತ್ತಾಯ

ತಮಿಳು ಚಿತ್ರರಂಗದ ಜನಪ್ರಿಯ ನಟ ಸಿಲಂಬರಸನ್ ಅಲಿಯಾಸ್ ಸಿಂಭು ವಿರುದ್ಧ ನಿರ್ಮಾಪಕರೊಬ್ಬರು ದೂರು ನೀಡಿದ್ದಾರೆ. ಈ ಕೂಡಲೇ ಸಿಂಭುವನ್ನು ತಮಿಳು ಚಿತ್ರರಂಗದಿಂದ ಉಚ್ಛಾಟನೆ ಮಾಡಬೇಕೆಂದಿದ್ದಾರೆ.

ತಮಿಳು ನಟ ಸಿಂಭು ವಿರುದ್ಧ ದೂರು, ಚಿತ್ರರಂಗದಿಂದ ನಿಷೇಧಿಸುವಂತೆ ಒತ್ತಾಯ
ಮಂಜುನಾಥ ಸಿ.
|

Updated on:May 12, 2024 | 9:45 AM

Share

ತಮಿಳು ಚಿತ್ರರಂಗದ (Kollywood) ಜನಪ್ರಿಯ ನಟ ಸಿಂಭು ಹೆಸರು ಆಗಾಗ್ಗೆ ಯಾವುದಾದರೂ ವಿವಾದಗಳಲ್ಲಿ ಕೇಳಿ ಬರುತ್ತಲೇ ಇರುತ್ತದೆ. ಇದೀಗ ಸಿಂಭು ವಿರುದ್ಧ ನಿರ್ಮಾಪಕರೊಬ್ಬರು ದೂರು ನೀಡಿದ್ದು, ಈ ಕೂಡಲೇ ನಟ ಸಿಂಭು ಅನ್ನು ತಮಿಳು ಚಿತ್ರರಂಗದಿಂದ ಹೊರಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ. ಸಿಂಭು, ಪ್ರಸ್ತುತ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಮಣಿರತ್ನಂ ನಿರ್ದೇಶನ ಮಾಡುತ್ತಿದ್ದಾರೆ.

ಕನ್ನಡದ ‘ಮಫ್ತಿ’ ಸಿನಿಮಾದ ರೀಮೇಕ್ ‘ಪತ್ತು ತಲ’ ಸಿನಿಮಾದಲ್ಲಿ ಸಿಂಭು ನಟಿಸಿದ್ದರು. ಅದಕ್ಕೂ ಮುನ್ನ ‘ವೆಂದು ತನಿದಿತ್ತು ಕಾಡು’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಬಳಿಕ ‘ಕೊರೊನಾ ಕಿಂಗ್’ ಹೆಸರಿನ ಸಿನಿಮಾನಲ್ಲಿ ಸಿಂಭು ನಟಿಸಬೇಕಿತ್ತು. ‘ಕೊರೊನಾ ಕಿಂಗ್’ ಸಿನಿಮಾವನ್ನು ಗೋಕುಲ್ ಎನ್ ಕೃಷ್ಣ ನಿರ್ದೇಶನ ಮಾಡಿ, ಇಶಾರಿ ಕೆ ಗಣೇಶ್ ನಿರ್ಮಾಣ ಮಾಡಬೇಕಿತ್ತು. ಆದರೆ ಆ ಸಿನಿಮಾದಿಂದ ಸಿಂಭು ಹೊರ ಬಂದರು.

ಇದನ್ನೂ ಓದಿ:ರಿಷಬ್ ಶೆಟ್ಟಿ ತಮಿಳು ಚಿತ್ರರಂಗಕ್ಕೆ ಹೊರಟು ಹೋಗಲು ನಿರ್ಧರಿಸಿದ್ದ: ರಕ್ಷಿತ್ ಶೆಟ್ಟಿ

ಕೆಲವು ಆಂತರಿಕ ಸಮಸ್ಯೆಗಳಿಂದಾಗಿ ‘ಕೊರೊನಾ ಕಿಂಗ್’ ಸಿನಿಮಾದಿಂದ ಸಿಂಭು ಹೊರಬಂದರು. ಬಳಿಕ ‘ಪತ್ತು ತಲ’ ಸಿನಿಮಾ ಪ್ರಾರಂಭಿಸಿದರು. ಆದರೆ ಈಗ ‘ಕೊರೊನಾ ಕಿಂಗ್’ ನಿರ್ಮಾಪಕ ಇಶಾರಿ ಕೆ ಗಣೇಶ್ ಸಿಂಭು ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಸಿಂಭು ಶೂಟಿಂಗ್ ಪ್ರಾರಂಭವಾಗುವ ಮುನ್ನವೇ ನಮ್ಮಿಂದ ಅಡ್ವಾನ್ಸ್ ಪಡೆದು ಬಳಿಕ ಸಿನಿಮಾದಿಂದ ಹೊರಗೆ ಹೋಗಿದ್ದಾರೆ. ಅವರನ್ನು ಈ ಕೂಡಲೇ ತಮಿಳು ಚಿತ್ರರಂಗದಿಂದ ಉಚ್ಛಾಟನೆ ಮಾಡಬೇಕು. ಈಗ ನಟಿಸುತ್ತಿರುವ ಸಿನಿಮಾ ಸೇರಿದಂತೆ ಇನ್ಯಾವ ಸಿನಿಮಾದಲ್ಲಿಯೂ ನಟಿಸಲು ಅವಕಾಶ ಮಾಡಿಕೊಡಬಾರದು ಎಂದಿದ್ದಾರೆ.

ಸಿಲಂಬರಸನ್ ಅಲಿಯಾಸ್ ಸಿಂಭುಗೆ ಇದೆಲ್ಲ ಹೊಸದಲ್ಲ. ಸಿನಿಮಾ ಶೂಟಿಂಗ್ ವಿಚಾರವಾಗಿ ಸಿಂಭು ಅಶಿಸ್ತು ತೋರಿಸಿದ ಹಲವು ಆರೋಪಗಳು ಅವರ ಮೇಲೆ ಈಗಾಗಲೇ ಇವೆ. ನಿರ್ದೇಶಕ ಕೆಲಸದಲ್ಲಿ ಮೂಗು ತೂರಿಸುವುದು, ಶೂಟಿಂಗ್ ಸೆಟ್​ನಲ್ಲಿ ಅಶಿಸ್ತಿನಿಂದ ನಡೆದುಕೊಳ್ಳುವುದು. ನಿರ್ಮಾಪಕರ ಜೊತೆಗೆ ಹಣ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೀಗೆ ಹಲವು ವಿವಾದಗಳನ್ನು ಸಿಂಭು ಈ ಹಿಂದೆಯೂ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಸಹ ಸಿಂಭು ವಿರುದ್ಧ ನಿರ್ಮಾಪಕರ ಸಂಘ, ನಿರ್ದೇಶಕರ ಸಂಘಗಳಿಗೆ ದೂರು ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:17 am, Sun, 12 May 24

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ