
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಕೇವಲ ನಾಲ್ಕೇ ದಿನಕ್ಕೆ ಈ ಸಿನಿಮಾ 1000 ಕೋಟಿ ಕಲೆಕ್ಷನ್ ದಾಟಿದೆ. ಸಿನಿಮಾದ ಹಲವು ಸನ್ನಿವೇಶಗಳು ಮಾಸ್ ಪ್ರೇಕ್ಷಕರನ್ನು ಸಖತ್ ಸೆಳೆದಿವೆ. ಅದರಲ್ಲಿ ಒಂದು ಜಾತರ ಸೀನ್. ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಈ ಜಾತರ ಸೀನ್ ಬಗ್ಗೆ ಸಖತ್ ಹೈಪ್ ಹುಟ್ಟುಹಾಕಲಾಗಿತ್ತು. ಜಾತರ ಸೀನ್ನಲ್ಲಿ ಕನ್ನಡದ ನಟ ತಾರಕ್ ಪೊನ್ನಪ್ಪ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಧ ತಲೆ ಬೋಳಿಸಿಕೊಂಡು, ಕತ್ತೆಯ ಮೇಲೆ ಕುಳಿತುಕೊಂಡು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸೀನ್ ಅದ್ಭುತವಾಗಿ ಬರಲು ಕಾರಣ ಆಗಿದ್ದಾರೆ. ಇದೀಗ ತಾರಕ್ ಪೊನ್ನಪ್ಪ ಜಾತರ ಸೀನ್ ಬಗ್ಗೆ, ‘ಪುಷ್ಪ 2’ ಸಿನಿಮಾದಲ್ಲಿ ನಟಿಸಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.
2021 ರಲ್ಲಿ ಮೈತ್ರಿ ಮೂವೀಸ್ನ ತಂಡದವರಿಗೆ ಕರೆ ಮಾಡಿ ಅವಕಾಶ ಇದ್ದರೆ ಹೇಳಿದ್ದರಂತೆ ತಾರಕ್ ಪೊನ್ನಪ್ಪ. ಅದಾದ ಕೆಲವೇ ದಿನಗಳಲ್ಲಿ ಸುಕುಮಾರ್ ತಂಡದವರು ಕರೆ ಮಾಡಿ ಭೇಟಿ ಮಾಡುವಂತೆ ಹೇಳಿದರಂತೆ. ಸುಕುಮಾರ್ ಮೊದಲ ಬಾರಿಗೆ ತಾರಕ್ ಅನ್ನು ನೋಡಿದಾಗ ನಿಮ್ಮ ಕಣ್ಣು ಚೆನ್ನಾಗಿದೆ ಎಂದರಂತೆ. ಅದಾದ ಬಳಿಕ ಲುಕ್ ಟೆಸ್ಟ್ ಮಾಡಿ ತಾರಕ್ ಅವರನ್ನು ರೋಲ್ಗೆ ಓಕೆ ಮಾಡಿದ್ದಾರೆ. ಅದಾದ ಬಳಿಕ ತಾರಕ್ ಅನ್ನು ಬುಗ್ಗಾ ರೆಡ್ಡಿ ಪಾತ್ರಕ್ಕೆ ಓಕೆ ಮಾಡಿದ್ದಾರೆ.
ತಾರಕ್ ಪೊನ್ನಪ್ಪ ಪಾತ್ರದ ಚಿತ್ರೀಕರಣ ಪ್ರಾರಂಭವಾಗಿದ್ದೆ ಜಾತ್ರೆ ಸೀನ್ ಮೂಲಕ ಅಂತೆ. ಸುಕುಮಾರ್ ತಮಗೆ ಕೆಲವು ಸಣ್ಣ-ಪುಟ್ಟ ಸಲಹೆಗಳು ನೀಡಿದರು ಅವು ನನಗೆ ಬಹಳ ಸಹಾಯವಾಯ್ತು. ಅಲ್ಲದೆ ನಾನು ಸಹ ನನ್ನ ಡೈಲಾಗ್ ಡೆಲಿವರಿ, ಬಾಡಿ ಲಾಂಗ್ವೆಜ್ಗೆ ಹೊಂದುವಂತೆ ಕೆಲವು ಬದಲಾವಣೆ ಮಾಡಿಕೊಂಡರಂತೆ. ‘ಸುಕುಮಾರ್ ಅವರೊಟ್ಟಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ‘ ಎಂದಿದ್ದಾರೆ ಪೊನ್ನಪ್ಪ.
ಇದನ್ನೂ ಓದಿ:ಅಲ್ಲು ಅರ್ಜುನ್ ಮನೆಗೆ ಬಂದಿದ್ದ ಸಿನಿಮಾ ತಾರೆಯರು: ಚಿತ್ರಗಳ ನೋಡಿ
ಅಲ್ಲು ಅರ್ಜುನ್ ಅವರೊಟ್ಟಿಗೆ ಕೆಲಸ ಮಾಡುವುದು ಬಹಳ ಸುಲಭವಾಗಿತ್ತು ಎಂದಿರುವ ತಾರಕ್ ಪೊನ್ನಪ್ಪ. ಅಲ್ಲು ಅರ್ಜುನ್ ಅವರನ್ನು ಹೊಡೆಯುವ ಸೀನ್ ತುಸು ನರ್ವಸ್ ಆಗಿದ್ದೆ ಅದನ್ನು ಹೊರತುಪಡಿಸಿದರೆ ನಾನು ಆರಾಮವಾಗಿ ಪಾತ್ರವನ್ನು ನಿರ್ವಹಿಸಿದೆ. ನಾನು ಪಾತ್ರಕ್ಕೆ ಚೆನ್ನಾಗಿ ಹೋಮ್ ವರ್ಕ್ ಮಾಡಿಕೊಂಡಿದ್ದೆ ಹಾಗಾಗಿ ನನಗೆ ಸುಲಭವಾಯ್ತು. ನನ್ನ ಧ್ವನಿಯನ್ನು ಸಹ ಈ ಪಾತ್ರಕ್ಕಾಗಿ ಬದಲಾವಣೆ ಮಾಡಿಕೊಂಡಿದ್ದೆ. ಅಲ್ಲು ಅರ್ಜುನ್ ಸಹ ಸಹನಟರನ್ನು ಬಹಳ ಕಂಫರ್ಟ್ ಆಗಿ ನೋಡಿಕೊಂಡರು’ ಎಂದಿದ್ದಾರೆ.
ಸಿನಿಮಾ ಬಿಡುಗಡೆ ಆದ ಮೇಲೆ ಜನ ಹೆಚ್ಚು ಪ್ರೀತಿ ತೋರುತ್ತಿದ್ದಾರೆ. ನನ್ನ ಪಾತ್ರದ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮೊದಲೆಲ್ಲ ಜನ ವಿಲನ್ಗಳನ್ನು ಬೈಯ್ಯುತ್ತಿದ್ದರು, ಆದರೆ ಈಗಿನ ಪ್ರೇಕ್ಷಕರು ಬುದ್ಧಿವಂತರಾಗಿದ್ದು, ಅವರು ಪಾತ್ರವನಲ್ಲ, ನಟನ ಪ್ರತಿಭೆಯನ್ನು ಮೆಚ್ಚಿಕೊಳ್ಳುತ್ತಾರೆ. ಹಲವಾರು ಮಂದಿ ಬಂದು ನನ್ನ ಪಾತ್ರದ ಡೈಲಾಗ್ ಅನ್ನು ಹೇಳಿ ತುಂಬಾ ಚೆನ್ನಾಗಿ ನಟಿಸಿದ್ದೀರಿ ಎಂದಿದ್ದಾರೆ ಎಂದಿದ್ದಾರೆ ತಾರಕ್ ಪೊನ್ನಪ್ಪ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ