ಬೇಲ್ ಜತೆಗೆ ದರ್ಶನ್‌ಗೆ ಹೈಕೋರ್ಟ್ ಖಡಕ್ ಎಚ್ಚರಿಕೆ: ಮತ್ತೊಂದು ಸಂಕಷ್ಟದಲ್ಲಿ ದಾಸ!
ಆದ್ರೆ ಬೆನ್ನುನೋವಿನ ಸರ್ಜರಿಗಾಗಿ ಮಧ್ಯಂತರ ಬೇಲ್ ಪಡೆದಿದ್ದು ಟೆನ್ಷನ್ ಹೆಚ್ಚಿಸಿದೆ.. ಯಾಕಂದ್ರೆ ಬೇಲ್ ನೀಡುವ ಜತೆಗೆ ದಾಸನಿಗೆ ಕರ್ನಾಟಕ ಹೈಕೋರ್ಟ್ ಖಡಕ್ ಎಚ್ಚರಿಕೆಯೊಂದನ್ನು ನೀಡಿದೆ. ಹೀಗಾಗಿ ದರ್ಶನ್‌ಗೆ ಟೆನ್ಷನ್ ಮೇಲೆ ಟೆನ್ಷನ್ ಶುರುವಾಗಿದೆ. ಹಾಗಾದ್ರೆ ಕೋರ್ಟ್ ಕೊಟ್ಟ ಕೊಟ್ಟ ವಾರ್ನಿಂಗ್ ಏನು? ದರ್ಶನ್‌ಗೆ ಏಕೆ ಟೆನ್ಷನ್? ಎನ್ನುವುದು ಇಲ್ಲಿದೆ.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಆರೋಪಿ ದರ್ಶನ್‌ಗೆ ಕಾನೂನು ಸಮರದಲ್ಲಿ ಈವರೆಗೆ ಎಲ್ಲಾ ಅಂದುಕೊಂಡಂತೆ ಆಗಿದೆ. ಸರ್ಜರಿ ಮಾಡಿಸಬೇಕು ಎಂದು ಮೆಡಿಕಲ್ ಜಾಮೀನು ಪಡೆದಿದ್ರು. ಬಳಿಕ ರೆಗ್ಯುಲರ್ ಜಾಮೀನು ಕೂಡಾ ಹೈಕೋರ್ಟ್ ನೀಡಿರೋದು ಬಿಗ್ ರಿಲೀಫ್ ಸಿಕ್ಕಂತಾಯ್ತು.. ಆದ್ರೆ, ರೆಗ್ಯುಲರ್ ಬೇಲ್ ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್ ದರ್ಶನ್‌ಗೆ ಕೆಲವು ಎಚ್ಚರಿಕೆಯನ್ನೂ ನೀಡಿದೆ.. ಜಾಮೀನು ಆದೇಶದಲ್ಲಿ ಸರ್ಜರಿ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದಿರುವ ಬಗ್ಗೆಯೂ ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ.
ದರ್ಶನ್‌ಗೆ ಹೈಕೋರ್ಟ್ ವಾರ್ನಿಂಗ್
ದರ್ಶನ್ ಫಿಸಿಯೋಥೆರಪಿಗೆ ಒಳಗಾಗುತ್ತಿದ್ದಾರೆಂದು ವೈದ್ಯರ ವರದಿ ಇದೆ. ಸರ್ಜರಿ ಅಗತ್ಯವೆಂಬ ಬಳ್ಳಾರಿ ವೈದ್ಯರ ವರದಿಯನ್ನ ಬಿಜಿಎಸ್ ವೈದ್ಯರು ದೃಢಪಡಿಸಿದ್ದಾರೆ. ಸರ್ಜರಿಗಾಗಿ ದರ್ಶನ್‌ರನ್ನ ಸಿದ್ಧಪಡಿಸಲಾಗುತ್ತಿದೆ ಎಂದು ವರದಿ ನೀಡಿದ್ದಾರೆ. ದರ್ಶನ್ ವೈದ್ಯಕೀಯ ಪರಿಸ್ಥಿತಿಯನ್ನ ಈ ಹಂತದಲ್ಲಿ ಸಂದೇಹಿಸಲು ಕಾರಣಗಳಿಲ್ಲ. ರೆಗ್ಯುಲರ್ ಜಾಮೀನಿಗೂ, ವೈದ್ಯಕೀಯ ಕಾರಣದ ಜಾಮೀನಿಗೂ ವ್ಯತ್ಯಾಸವಿದೆ. ಒಂದು ವೇಳೆ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದರೆ ಪರಿಣಾಮ ಎದುರಿಸಬೇಕು. ಕಾನೂನಿನ ಹಾದಿಯಲ್ಲೇ ಪರಿಣಾಮ ಎದುರಿಸಬೇಕು.
ಇದನ್ನೂ ಓದಿ: Renukaswamy case: ಜಾಮೀನು ಸಿಕ್ಕರೂ ದರ್ಶನ್ಗಿಲ್ಲ ನೆಮ್ಮದಿ.. ಮತ್ತೆ ಜೈಲು ಸೇರೋ ಭೀತಿ!
ಜಾಮೀನು ಆದೇಶದಲ್ಲಿ ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿಗಳು, ಅಂತಿಮವಾಗಿ ಅರ್ಹತೆ ಆಧರಿಸಿ ಜಾಮೀನು ಮಂಜೂರು ಮಾಡಿದ್ದಾರೆ. ಇದೇ ಕಾರಣಕ್ಕೆ ಆಸ್ಪತ್ರೆಯಲ್ಲಿ ಕನ್ಸರ್ವೇಟಿವ್ ಚಿಕಿತ್ಸೆ ಪಡೆಯುತ್ತಿರುವ ದರ್ಶನ್‌ಗೆ ಹೊಸ ಟೆನ್ಷನ್ ಶುರುವಾಗಿದೆ.. ಫಿಸಿಯೋಥೆರಪಿ ಸಾಕಾ? ಸರ್ಜರಿ ಮಾಡಿಸಿಕೊಳ್ಳಲೇಬೇಕಾ? ಅನ್ನೋ ಚಿಂತೆಗೆ ಬಿದ್ದಿದ್ದಾರೆ. ಒಂದು ವೇಳೆ ಸರ್ಜರಿ ಮಾಡಿಸಿಕೊಳ್ಳದಿದ್ರೆ ಕೋರ್ಟ್ ಎಚ್ಚರಿಸಿದಂತೆ ಕಾನೂನು ಪರಿಣಾಮ ಎದುರಾಗುತ್ತಾ ಎನ್ನುವ ಆತಂಕ ದರ್ಶನ್‌ಗೆ ಕಾಡತೊಡಗಿದೆ.. ಹೈಕೋರ್ಟ್ ಆದೇಶ ಪ್ರಶ್ನಿಸುವ ಬಗ್ಗೆ ತನಿಖಾಧಿಕಾರಿಗಳ ಚರ್ಚೆ
ದರ್ಶನ್ ಸೇರಿದಂತೆ 7 ಮಂದಿ ಆರೋಪಿಗಳಿಗೆ ರೆಗ್ಯುಲರ್ ಜಾಮೀನು ಸಿಕ್ಕಿರೋದನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಮತ್ತು ಕಾನೂನು ತಜ್ಞರ ಜೊತೆಗೆ ಚರ್ಚೆಗೆ ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವ ಬಗ್ಗೆ ಚರ್ಚಿಸುತ್ತಿದ್ದಾರೆ..
ಇನ್ನು, ಜಾಮೀನು ಪಡೆದಿರೋ ಪವಿತ್ರಾಗೌಡ, ಪ್ರದೋಶ್, ಅನುಕುಮಾರ್, ಜಗದೀಶ್, ಲಕ್ಷ್ಮಣ್ ಮತ್ತು ಮ್ಯಾನೇಜರ್ ನಾಗರಾಜ್ ಜಾಮೀನು ಷರತ್ತುಗಳನ್ನ ಪೂರೈಸಬೇಕಿದೆ. ನಾಳೆಯೇ (ಡಿಸೆಂಬರ್ 15) ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆಯಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 17 ಆರೋಪಿಗಳ ಪೈಕಿ ಇನ್ನೂ ಐವರು ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಆರೋಪಿಗಳಾದ ಧನರಾಜ್, ನಂದೀಶ್, ವಿನಯ್, ರಾಘವೇಂದ್ರ ಹಾಗೂ ಪವನ್ ಜೈಲಲ್ಲೇ ಇದ್ದಾರೆ. ದರ್ಶನ್ ಹೊರ ಬರ್ತಿದ್ದಂತೆ ಆರೋಪಿಗಳ ಸಂಬಂಧಿಕರು ಕೂಡ ನಮ್ಮ ಮಕ್ಕಳನ್ನೂ ಬಿಡಿಸಿಕೊಡಿ ಅಂತಿದ್ದಾರೆ..
ಸರ್ಜರಿ, ಬೇಲ್ ಪ್ರಶ್ನಿಸಿ ಮೇಲ್ಮನವಿ, ಆರೋಪಿಗಳ ಬಿಡುಗಡೆಗೆ ಕೇಳ್ತಿರುವ ಸಂಬಂಧಿಕರು ಹೀಗೆ ದರ್ಶನ್‌ಗೆ ಬೇಲ್ ಸಿಕ್ಕರೂ ಒಂದಾದ ಮೇಲೊಂದು ಚಿಂತೆ ಕಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:34 pm, Sun, 15 December 24