‘ಆಸೆ’ ಧಾರಾವಾಹಿಗೆ ಎಂಟ್ರಿ ಆಯ್ತು ಸೂರ್ಯ ತಂಗಿ ಪಾತ್ರ

ಆಸೆ ಧಾರಾವಾಹಿಯಲ್ಲಿ 860 ಸಂಚಿಕೆಗಳ ನಂತರ ತಾರಾ ಪಾತ್ರ ಮರುಪ್ರವೇಶ ಮಾಡಿದೆ. ಮನೋಜ್ ಕೊಂದು, ಸೂರ್ಯನ ಮೇಲೆ ಆರೋಪ ಹೊರಿಸಲಾಗಿತ್ತು. ಆದರೆ, ತಾರಾ ಜೀವಂತವಾಗಿದ್ದು, ಈಗ ಕಂಪನಿ ನಡೆಸುತ್ತಿದ್ದಾಳೆ. ರಂಗನಾಥ್ ಅವರ ದತ್ತು ಪುತ್ರಿ ತಾರಾಳನ್ನು ಮೀನಾ ಹುಡುಕುತ್ತಿರುವಾಗ ಆಕೆಯೇ ಎದುರಾಗಿದ್ದಾಳೆ. ಮುಂದಿನ ದಿನಗಳಲ್ಲಿ ಹಳೆಯ ಸತ್ಯಗಳು ಬಯಲಾಗುವ ಕುತೂಹಲ ಮೂಡಿದೆ.

‘ಆಸೆ’ ಧಾರಾವಾಹಿಗೆ ಎಂಟ್ರಿ ಆಯ್ತು ಸೂರ್ಯ ತಂಗಿ ಪಾತ್ರ
ಆಸೆ ಧಾರಾವಾಹಿ
Edited By:

Updated on: May 18, 2026 | 8:00 AM

ಆಸೆ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಾಣುತ್ತಿರುವ ಪ್ರಮುಖ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿ ಸಾಕಷ್ಟು ನಿರೀಕ್ಷೆಯನ್ನು ಸೃಷ್ಟಿಸಿದೆ. ಈಗ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರ ಎಂಟ್ರಿ ಆಗಿದೆ. ಅದು ಕೂಡ 860 ಎಪಿಸೋಡ್​​​ಗಳ ಬಳಿಕ ಎಂಬುದು ವಿಶೇಷ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಹಾಗಾದರೆ ಯಾವುದು ಆ ಪಾತ್ರ? ಆ ಬಗ್ಗೆ ಇಲ್ಲಿದೆ ವಿವರ.

ಆಸೆ ಧಾರಾವಾಹಿಯಲ್ಲಿ ರಂಗನಾಥ್ ಅವರಿಗೆ ನಾಲ್ಕು ಮಕ್ಕಳಿದ್ದರು. ಈ ಪೈಕಿ ತಾರಾ ಎಂಬ ಹುಡುಗಿ ಸಣ್ಣ ವಯಸ್ಸಿನಲ್ಲೇ ನಿಧನ ಹೊಂದಿದಳು. ಸಾಯಿಸಿದ್ದು ಮನೋಜ್ ಆದರೂ ಈ ಆರೋಪ ಬಂದಿದ್ದು ಸೂರ್ಯನ ಮೇಲೆ. ಹೀಗಾಗಿ ಸೂರ್ಯ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬಂತು. ಇದು ಸೂರ್ಯನ ಬಾಲ್ಯವನ್ನೇ ಹಾಳು ಮಾಡಿತು. ಅಮ್ಮನಿಂದ ಅವನನ್ನು ದೂರ ಮಾಡಿತು. ಈಗ ಆ ತಾರ ಮತ್ತೆ ಬಂದಿದ್ದಾಳೆ ಎಂಬುದನ್ನು ತೋರಿಸಲಾಗಿದೆ.

ತಾರಾ ಎಂಬ ಹುಡುಗಿಯನ್ನು ‘ಆಸೆ’ ಧಾರಾವಾಹಿಯಲ್ಲಿ ತರಲಾಗಿದೆ. ಆಕೆ ಒಂದು ಕಂಪನಿಯನ್ನು ನೋಡಿಕೊಳ್ಳುತ್ತಿದ್ದಾಳೆ. ಆಕೆಯನ್ನು ಹುಡುಕುವ ಪ್ರಯತ್ನದಲ್ಲಿರುವ ಮೀನಾಗೆ ತಾರಾಳ ಭೇಟಿ ಮಾಡುವ ಪರಿಸ್ಥಿತಿ ಬಂದಿದೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

ತಾರಾ ತನ್ನ ತಂದೆಗೆ ಸಾಕು ಮಗಳು. ಈ ವಿಷಯ ಆಕೆಗೆ ಗೊತ್ತಿಲ್ಲ. ಈ ವಿಷಯ ಯಾವಾಗಲೂ ಗೊತ್ತಾಗದಂತೆ ನೋಡಿಕೊಳ್ಳಬೇಕು ಎಂಬುದು ತಾರಾಳ ತಂದೆಯ ಉದ್ದೇಶ. ಆದರೆ, ಸತ್ಯ ಎಂಬುದು ಒಂದಲ್ಲಾ ಒಂದು ದಿನ ಹೊರ ಬರಲೇಬೇಕಲ್ಲ. ಈಗ ಮೀನಾಳು ತಾರಾಳ ಹುಡುಕುವ ಪ್ರಯತ್ನದಲ್ಲಿ ಇರುವಾಗಲೇ ಆಕೆಯೇ ಎದುರು ಬಂದಿದ್ದಾಳೆ. ಮುಂದೆ ಸತ್ಯ ಗೊತ್ತಾದರೆ ಏನಾಗಬಹುದು ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: ‘ಆಸೆ’ ಧಾರಾವಾಹಿ ತಂಡದ ಬಗ್ಗೆ ಗಂಭೀರ ಆರೋಪ ಮಾಡಿದ್ರಾ ಅಮೃತಾ ರಾಮಮೂರ್ತಿ?

ತಾರಾ ಸಿಕ್ಕರೆ ತನ್ನನ್ನು ಕೊಲ್ಲಲು ಪ್ರಯತ್ನಿಸಿದ್ದು ಯಾರು ಎಂಬ ವಿಷಯ ಗೊತ್ತಾಗಲಿದೆ. ಇದನ್ನು ಮಾಡಿದ್ದು ಮನೋಜ್ ಎಂಬ ವಿಷಯ ಗೊತ್ತಾದರೆ ಆತನ ತಾಯಿ ಬದಲಾಗುವು ಸಾಧ್ಯತೆ ಇರುತ್ತದೆ. ಮುಂದಿನ ದಿನಗಳಲ್ಲಿ ಈ ವಿಷಯ ರಿವೀಲ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us