ವಿದೇಶಿ ರಿಯಾಲಿಟಿ ಶೋ ‘ಬಿಗ್ ಬ್ರದರ್​’ಗೆ ಅಬ್ದು ರೋಜಿಕ್; ‘ನಮ್ಮನ್ನು ಮರಿಯಬೇಡಿ’ ಎಂದ ಸಲ್ಲು

|

Updated on: Feb 13, 2023 | 11:36 AM

ಬಿಗ್ ಬಾಸ್ ಸಾಮಾನ್ಯವಾಗಿ 100 ದಿನಕ್ಕೆ ಪೂರ್ಣಗೊಳ್ಳುತ್ತದೆ. ಫಿನಾಲೆ ಸಖತ್ ಅದ್ದೂರಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಅಬ್ದು ರೋಜಿಕ್ ಕೂಡ ಹಾಜರಿ ಹಾಕಿದ್ದರು.

ವಿದೇಶಿ ರಿಯಾಲಿಟಿ ಶೋ ‘ಬಿಗ್ ಬ್ರದರ್​’ಗೆ ಅಬ್ದು ರೋಜಿಕ್; ‘ನಮ್ಮನ್ನು ಮರಿಯಬೇಡಿ’ ಎಂದ ಸಲ್ಲು
ಅಬ್ದು ರೋಜಿಕ್-ಸಲ್ಮಾನ್ ಖಾನ್
Follow us on

ತಜಕಿಸ್ತಾನ್​​ನ ಸಿಂಗರ್ ಅಬ್ದು ರೋಜಿಕ್ (Abdu Rozik) ಅವರು ‘ಹಿಂದಿ ಬಿಗ್ ಬಾಸ್ ಸೀಸನ್ 16’ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ಹಲವು ತಿಂಗಳ ಕಾಲ ದೊಡ್ಮನೆಯಲ್ಲಿ ಇದ್ದು ಬಂದ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಭಾನುವಾರ (ಫೆಬ್ರವರಿ 12) ಬಿಗ್ ಬಾಸ್ ಫಿನಾಲೆ ನಡೆದಿದೆ. ಇದಕ್ಕೆ ಅಬ್ದು ರೋಜಿಕ್ ಕೂಡ ಹಾಜರಿ ಹಾಕಿದ್ದರು. ಅವರಿಗೆ ವಿದೇಶಿ ರಿಯಾಲಿಟಿ ಶೋ ‘ಬಿಗ್ ಬ್ರದರ್​’ನಿಂದ ಆಫರ್ ಬಂದಿದೆ. ಈ ವಿಚಾರವನ್ನು ಅಬ್ದು ಖಚಿತಪಡಿಸಿದ್ದಾರೆ.

ಬಿಗ್ ಬಾಸ್ ಸಾಮಾನ್ಯವಾಗಿ 100 ದಿನಕ್ಕೆ ಪೂರ್ಣಗೊಳ್ಳುತ್ತದೆ. ಆದರೆ, ಈ ಬಾರಿಯ ಸೀಸನ್ ಒಂದು ತಿಂಗಳು ಹೆಚ್ಚುವರಿಯಾಗಿ ನಡೆದಿದೆ. ಫಿನಾಲೆ ಸಖತ್ ಅದ್ದೂರಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಅಬ್ದು ರೋಜಿಕ್ ಕೂಡ ಹಾಜರಿ ಹಾಕಿದ್ದರು. ಅವರಿಗೆ ಸಲ್ಮಾನ್ ನೇರವಾಗಿ ಪ್ರಶ್ನೆ ಮಾಡಿದರು.

‘ಅಬ್ದು ನಿಮ್ಮ ಬಗ್ಗೆ ಒಂದು ವಂದತಿ ಕೇಳಿ ಬಂದಿದೆ. ನೀವು ಬಿಗ್ ಬ್ರದರ್​ಗೆ ಹೋಗುತ್ತಿದ್ದೀರಂತೆ. ಹೌದಾ?’ ಎಂದು ಪ್ರಶ್ನೆ ಮಾಡಿದರು ಸಲ್ಮಾನ್ ಖಾನ್. ಇದಕ್ಕೆ ‘ಹೌದು’ ಎಂದರು ಅಬ್ದು. ಇದನ್ನು ಕೇಳಿ ಇತರ ಸ್ಪರ್ಧಿಗಳು ಹಾಗೂ ಸಲ್ಮಾನ್ ಖಾನ್ ಅಚ್ಚರಿಗೊಂಡರು. ‘ನಿಮಗೆ ನನ್ನಂತ ಹೋಸ್ಟ್​​ ಎಲ್ಲಿ ಸಿಗ್ತಾರೆ? ನೀವು ಇನ್ನು ವಿದೇಶದಲ್ಲಿ ಫ್ರೆಂಡ್ಸ್ ಮಾಡ್ಕೋತೀರಾ. ನಮ್ಮನ್ನು ಮರೆತುಬಿಡ್ತೀರಾ’ ಎಂದು ಸಲ್ಮಾನ್ ಖಾನ್ ಕಾಲೆಳೆದರು. ‘ಇಲ್ಲ, ನಾನು ಭಾರತೀಯರನ್ನು ಎಂದಿಗೂ ಮರೆಯೊಲ್ಲ’ ಎಂದು ಹೆಮ್ಮೆಯಿಂದ ಹೇಳಿದರು ಅಬ್ದು. ‘ನಮ್ಮನ್ನು ಮರೆಯಬೇಡಿ’ ಎಂದು ಸಲ್ಲು ಹೇಳಿದರು.

ಇದನ್ನೂ ಓದಿ
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಇದನ್ನೂ ಓದಿ: ಮೋದಿಗಾಗಿ ಕೆಲಸ ಮಾಡುವವರು ಈಗ ಗವರ್ನರ್; ನಿವೃತ್ತ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ನೇಮಕಕ್ಕೆ ಕಾಂಗ್ರೆಸ್ ಟೀಕೆ

ಅಬ್ದು ತಜಕಿಸ್ತಾನದವರಾದರೂ ಭಾರತದಲ್ಲೂ ಅನೇಕರಿಗೆ ಪರಿಚಿತರು. ದೇಹದ ಎತ್ತರ ಚಿಕ್ಕದಿದ್ದರೂ ಅವರು ನೀಡುವ ಎಂಟರ್​ಟೇನ್​ಮೆಂಟ್ ಸಾಕಷ್ಟು ದೊಡ್ಡದು. ಸಣ್ಣ ವಯಸ್ಸಿನಲ್ಲಿ ಹಾರ್ಮೋನ್ ಸಮಸ್ಯೆಯಿಂದ ಬಳಲಿದ್ದ ಅವರು ಕುಬ್ಜರಾದರು. ಆದರೆ, ಅಬ್ದು ಎಂದಿಗೂ ಈ ಬಗ್ಗೆ ಬೇಸರ ಮಾಡಿಕೊಂಡಿಲ್ಲ. ಬದಲಿಗೆ ಅದನ್ನೇ ಅಸ್ತ್ರವಾಗಿ ಮಾಡಿಕೊಂಡರು. ಇತ್ತೀಚೆಗೆ ಶಾರುಖ್ ಖಾನ್ ಮನೆ ಎದುರು ಅಬ್ದು ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:35 am, Mon, 13 February 23