‘ಉಳಿದುಕೊಂಡಿರೋದು ಒಂದೇ ಆಸೆ’; ಶಾರುಖ್ ಭೇಟಿ ಮಾಡಲು ಮನ್ನತ್ ಎದುರು ನಿಂತ ಅಬ್ದು ರೋಜಿಕ್
Abdu Rozik: ಸಣ್ಣ ವಯಸ್ಸಿನಲ್ಲಿ ಹಾರ್ಮೋನ್ ಸಮಸ್ಯೆಯಿಂದ ಬಳಲಿದ್ದ ಅವರು ಕುಬ್ಜರಾದರು. ಆದರೆ, ಅಬ್ದು ಎಂದಿಗೂ ಈ ಬಗ್ಗೆ ಬೇಸರ ಮಾಡಿಕೊಂಡಿಲ್ಲ. ಬದಲಿಗೆ ಅದನ್ನೇ ಅಸ್ತ್ರವಾಗಿ ಮಾಡಿಕೊಂಡರು.
ತಜಕಿಸ್ತಾನ್ನ ಸಿಂಗರ್ ಅಬ್ದು ರೋಜಿಕ್ (Abdu Rozik) ಅವರು ‘ಹಿಂದಿ ಬಿಗ್ ಬಾಸ್ ಸೀಸನ್ 16’ರ ಒಳಗೆ ಎಂಟ್ರಿ ಪಡೆದು ಸಾಕಷ್ಟು ಸುದ್ದಿ ಆದರು. ಹಲವು ತಿಂಗಳ ಕಾಲ ದೊಡ್ಮನೆಯಲ್ಲಿ ಇದ್ದು ಬಂದ ಅವರನ್ನು ಭರ್ಜರಿಯಾಗಿ ಸ್ವಾಗತಿಸಲಾಗಿದೆ. ಫಿನಾಲೆಗೆ ಕೆಲವೇ ವಾರ ಇರುವಾಗ ಅವರು ದೊಡ್ಮನೆಯಿಂದ ಹೊರ ಬಂದಿದ್ದು ಅನೇಕರಿಗೆ ಬೇಸರ ಮೂಡಿಸಿತ್ತು. ಈಗ ಅಬ್ದು ಅವರು ಶಾರುಖ್ ಖಾನ್ (Shah Rukh Khan) ಮನೆ ಮನ್ನತ್ ಮುಂದೆ ನಿಂತಿದ್ದಾರೆ. ಎಲ್ಲರಂತೆ ಅವರು ಶಾರುಖ್ ಭೇಟಿಗಾಗಿ ಕಾದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಬ್ದು ತಜಕಿಸ್ತಾನದವರಾದರೂ ಭಾರತದಲ್ಲೂ ಅನೇಕರಿಗೆ ಪರಿಚಿತರು. ದೇಹದ ಎತ್ತರ ಚಿಕ್ಕದಿದ್ದರೂ ಅವರು ನೀಡುವ ಎಂಟರ್ಟೇನ್ಮೆಂಟ್ ಸಾಕಷ್ಟು ದೊಡ್ಡದು. ಸಣ್ಣ ವಯಸ್ಸಿನಲ್ಲಿ ಹಾರ್ಮೋನ್ ಸಮಸ್ಯೆಯಿಂದ ಬಳಲಿದ್ದ ಅವರು ಕುಬ್ಜರಾದರು. ಆದರೆ, ಅಬ್ದು ಎಂದಿಗೂ ಈ ಬಗ್ಗೆ ಬೇಸರ ಮಾಡಿಕೊಂಡಿಲ್ಲ. ಬದಲಿಗೆ ಅದನ್ನೇ ಅಸ್ತ್ರವಾಗಿ ಮಾಡಿಕೊಂಡರು.
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಜನವರಿ 25ರಂದು ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರ ರಿಲೀಸ್ ಆದ ನಂತರದಲ್ಲಿ ಅಬ್ದು ಅವರು ಸನ್ರೂಫ್ ಇರುವ ಕಾರನ್ನು ತೆಗೆದುಕೊಂಡು ಹೋಗಿ ಶಾರುಖ್ ಖಾನ್ ಮನೆ ಮುಂದೆ ನಿಲ್ಲಿಸಿಕೊಂಡಿದ್ದಾರೆ. ಕಾರಿನ ಸನ್ರೂಫ್ ತೆಗೆದು ಅಬ್ದು ಹೊರ ನೋಡಿದ್ದಾರೆ.
‘ಶಾರುಖ್ ಖಾನ್ ಐ ಲವ್ ಯೂ. ನಿಮ್ಮ ಅಭಿಮಾನಿಗಳ ಜತೆ ಇಲ್ಲಿ ಕೂರೋಕೆ ಖುಷಿ ಆಗುತ್ತದೆ. ಒಂದೇ ಒಂದು ಕನಸು ಉಳಿದುಕೊಂಡಿದೆ. ನಿಮ್ಮನ್ನು ಭೇಟಿ ಮಾಡಬೇಕು’ ಎಂದು ಅವರು ಹೇಳಿದ್ದಾರೆ. ಈ ವಿಡಿಯೋನ ಪಾಪರಾಜಿಗಳು ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಅಬ್ದು ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿ ನೆರೆದಿದ್ದರು.
ಇದನ್ನೂ ಓದಿ: Pathaan Box Office Collection: ಬಾಕ್ಸ್ ಆಫೀಸ್ನಲ್ಲಿ ‘ಪಠಾಣ್’ ಮೋಡಿ; ಬಂಗಾರದ ಬೆಳೆ ತೆಗೆದ ಶಾರುಖ್ ಖಾನ್ ಸಿನಿಮಾ
ಬಿಗ್ ಬಾಸ್ಗೆ ತೆರಳಿದ ನಂತರದಲ್ಲಿ ಅವರ ಜನಪ್ರಿಯತೆ ಹೆಚ್ಚಿತು. ವಿದೇಶದಲ್ಲಿರುವ ಅವರ ಮನೆಯನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದರು. ಫಿನಾಲೆಗೂ ಮೊದಲೇ ಅವರು ದೊಡ್ಮನೆಯಿಂದ ಔಟ್ ಆಗಿದ್ದರು. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ