ಭಾವಿ ಪತ್ನಿಯ ಫೋಟೋ ಹಂಚಿಕೊಂಡ ಅಬ್ದು ರೋಜಿಕ್; ಇದು ಮಾಲ್‌ನಲ್ಲಿ ಮೂಡಿದ ಪ್ರೀತಿ
ಶಾರ್ಜಾ ಎಮಿರೇಟ್‌ನ ಅಮೀರಾ ಅವರನ್ನು ಅಬ್ದು ಮದುವೆ ಆಗಿತ್ತಿದ್ದಾರೆ. ದುಬೈ ಮಾಲ್‌ನಲ್ಲಿ ಇವರ ಭೇಟಿ ನಡೆದಿದೆ. ಮೊದಲ ಬಾರಿಗೆ ಅಬ್ದು ಅವರು ಅಮೀರಾ ಅವರನ್ನು ನೋಡಿದರು. ಮೊದಲ ನೋಟದಲ್ಲೇ ಅವರು ಸಾಕಷ್ಟು ಇಷ್ಟ ಆದರು. ಈಗ ಇವರು ಮದುವೆ ಆಗುತ್ತಿದ್ದಾರೆ.
‘ಬಿಗ್ ಬಾಸ್ ಹಿಂದಿ ಸೀಸನ್16’ರಲ್ಲಿ (Bigg Boss Hindi Season 16) ಕಾಣಿಸಿಕೊಂಡಾಗಿನಿಂದ ಗಾಯಕ ಅಬ್ದು ರೋಜಿಕ್ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಅವರಿಗೆ ಭಾರತದಲ್ಲೂ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಅಬ್ದು ರೋಜಿಕ್ ಈಗ ವೈಯಕ್ತಿಕ ವಿಚಾರದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಅಬ್ದು ಪ್ರೀತಿಯಲ್ಲಿದ್ದಾರೆ. ಗುರುವಾರ ವಿಡಿಯೋ ಪೋಸ್ಟ್ ಮಾಡುವ ಮೂಲಕ ಅಬ್ದು ತಮ್ಮ ಅಭಿಮಾನಿಗಳೊಂದಿಗೆ ಸಂತಸ ಸುದ್ದಿ ಹಂಚಿಕೊಂಡಿದ್ದಾರೆ. ಅಬ್ದು ಅವರು ಈಗ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇದರ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ. ಅಲ್ಲಿ ಅವರ ಭಾವಿ ಪತ್ನಿ ಬಿಳಿ ಬುರ್ಖಾದಲ್ಲಿದ್ದಾರೆ.
ಅಬ್ದು ಅವರ ಭಾವಿ ಪತ್ನಿ ಯಾರು?
ಶಾರ್ಜಾ ಎಮಿರೇಟ್‌ನ ಅಮೀರಾ ಅವರನ್ನು ಅಬ್ದು ಮದುವೆ ಆಗಿತ್ತಿದ್ದಾರೆ. ದುಬೈ ಮಾಲ್‌ನಲ್ಲಿ ಇವರ ಭೇಟಿ ನಡೆದಿದೆ. ಮೊದಲ ಬಾರಿಗೆ ಅಬ್ದು ಅವರು ಅಮೀರಾ ಅವರನ್ನು ನೋಡಿದರು. ಮೊದಲ ನೋಟದಲ್ಲೇ ಅವರು ಸಾಕಷ್ಟು ಇಷ್ಟ ಆದರು. ಈಗ ಇವರು ಮದುವೆ ಆಗುತ್ತಿದ್ದಾರೆ. ‘ನನ್ನ ಜೀವನದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದೇನೆ’ ಎಂದು ಅಬ್ದು ಹೇಳಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸಿದ್ದಾರೆ.
ಅಬ್ದು ಹೇಳಿದ್ದೇನು?
ಅಬ್ದು ರೋಜಿಕ್ ಅವರು ಇತ್ತೀಚೆಗೆ ವಿಡಿಯೋ ಹಂಚಿಕೊಂಡಿದ್ದರು. ‘ನನ್ನನ್ನು ಗೌರವಿಸುವ, ಪ್ರೀತಿಸುವ ಹುಡುಗಿ ಸಿಗುತ್ತಾಳೆ ಎಂದು ನಾನು ಯಾವಾಗಲೂ ಊಹಿಸಿರಲಿಲ್ಲ. ನಾನು ಎಷ್ಟು ಸಂತೋಷವಾಗಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನನಗೆ 20 ವರ್ಷ. ಪ್ರೀತಿಯಲ್ಲಿ ಬೀಳಬೇಕು, ನಾನು ಪ್ರೀತಿಸೋ ಹುಡುಗಿ ನನ್ನನ್ನು ಗೌರವಿಸಬೇಕು, ಅತಿಯಾಗಿ ಪ್ರೀತಿ ಮಾಡಬೇಕು ಎನ್ನುವ ಆಸೆ ಇತ್ತು. ಆಗ ಈ ಹುಡುಗಿ ಸಿಕ್ಕಳು’ ಎಂದಿದ್ದರು ಅಬ್ದು. ಈಗ ಅವರ ಜೊತೆ ರೋಜಿಕ್ ನಿಶ್ಚಿತಾರ್ಥ ನಡೆದಿದೆ. ಜುಲೈ 7ರಂದು ಅವರು ಮದುವೆ ಆಗಲಿದ್ದಾರೆ.
ಇದನ್ನೂ ಓದಿ: ‘ಬಿಗ್ ಬಾಸ್’ ಖ್ಯಾತಿಯ ಅಬ್ದು ರೋಜಿಕ್ ಮದುವೆ; ಆ ಲಕ್ಕಿ ಹುಡುಗಿ ಯಾರು?
20 ವರ್ಷದ ಅಬ್ದು ರೋಜಿಕ್ 19 ವರ್ಷದ ಯುವತಿಯನ್ನು ಮದುವೆಯಾಗಲಿದ್ದಾರೆ. ಅಭಿಮಾನಿಗಳು ಕೂಡ ಅಬ್ದು ಮದುವೆಗಾಗಿ ಕಾಯುತ್ತಿದ್ದಾರೆ. ಅಬ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಅಬ್ದು ಯಾವಾಗಲೂ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ‘ಬಿಗ್ ಬಾಸ್’ ನಿಂದಾಗಿ ಅಬ್ದು ಖ್ಯಾತಿ ಮತ್ತು ಜನಪ್ರಿಯತೆ ಹೆಚ್ಚಾಯಿತು. ಸಲ್ಮಾನ್ ಖಾನ್ ಅವರ ಜೊತೆಗೂ ಅಬ್ದು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:47 pm, Sat, 11 May 24