AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಕಿರುತೆರೆಗೆ ಮರಳಿದ ನಟಿ ಪ್ರೇಮಾ; ಇಲ್ಲಿದೆ ವಿವರ

ನಟಿ ಪ್ರೇಮಾ ಅವರು ಜೀ ಕನ್ನಡದ ರಿಯಾಲಿಟಿ ಶೋಗೆ ಜಡ್ಜ್ ಆಗಿ ಮರಳಿದ್ದಾರೆ. ಈ ಶೋ ಜೂನ್ 14 ರಿಂದ ಪ್ರಾರಂಭವಾಗಲಿದೆ. ಯುವ ನಟಿಯರಿಗೆ ಅವಕಾಶ ನೀಡುವ ಈ ಶೋನಲ್ಲಿ ರಮೇಶ್ ಅರವಿಂದ್, ತರುಣ್ ಸುಧೀರ್ ಮತ್ತು ನಿಶ್ವಿಕಾ ನಾಯ್ಡು ಸಹ ನ್ಯಾಯಾಧೀಶರಾಗಿ ಭಾಗವಹಿಸಲಿದ್ದಾರೆ. ಪ್ರೋಮೋ ಈಗಾಗಲೇ ಬಿಡುಗಡೆಯಾಗಿದೆ.

ಮತ್ತೆ ಕಿರುತೆರೆಗೆ ಮರಳಿದ ನಟಿ ಪ್ರೇಮಾ; ಇಲ್ಲಿದೆ ವಿವರ
ಪ್ರೇಮಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jun 09, 2025 | 1:01 PM

Share

ನಟಿ ಪ್ರೇಮಾ (Prema) ಅವರು ಹಿರಿತೆರೆಯಲ್ಲಿ ಮಿಂಚಿದವರು. ಅವರು ಇತ್ತೀಚೆಗೆ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದು ಕಡಿಮೆ. ಇದಕ್ಕೆ ಕಾರಣಗಳು ಹಲವು. ಈಗ ಅವರು ಕಿರುತೆರೆಯಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಅದೂ ಎರಡನೇ ಬಾರಿಗೆ ಅನ್ನೋದು ವಿಶೇಷ. ಹಾಗಾದರೆ, ನಟಿ ಪ್ರೇಮಾ ಅವರು ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ? ಅವರು ನಟಿಸುತ್ತಿರುವುದು ಧಾರಾವಾಹಿಯಲ್ಲಿ ಅಲ್ಲ. ಬದಲಿಗೆ ರಿಯಾಲಿಟಿ ಶೋ ಒಂದಕ್ಕೆ ಜಡ್ಜ್ ಆಗಿ ಬಂದಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿ ಗಮನ ಸೆಳೆದಿದೆ. ಆ ಬಗ್ಗೆ ಇಲ್ಲಿದೆ ವಿವರ.

ನಟಿ ಪ್ರೇಮಾ ಅವರು ಹಿರಿತೆರೆಯ ಬಳಿಕ ಕಿರುತೆರೆಯ ಜೊತೆ ನಂಟು ಬೆಳೆಸಿಕೊಂಡರು. ‘ಮಹಾನಟಿ’ ಹೆಸರಿನ ರಿಯಾಲಿಟಿ ಶೋ ಜೀ ಕನ್ನಡದಲ್ಲಿ ಪ್ರಸಾರ ಕಂಡು ಯಶಸ್ಸು ಕಂಡಿತು. ಈ ರಿಯಾಲಿಟಿ ಶೋಗೆ ಅವರು ಜಡ್ಜ್ ಸ್ಥಾನದಲ್ಲಿ ಇದ್ದರು. ಈಗ ಈ ರಿಯಾಲಿಟಿ ಶೋಗೆ ಎರಡನೇ ಸೀಸನ್ ಬರುತ್ತಿದೆ. ಕೇವಲ ಯುವತಿಯರಿಗೆ ಮಾತ್ರ ಇಲ್ಲಿ ಅವಕಾಶ. ಈ ಶೋನ ಜಡ್ಜ್ ಸ್ಥಾನದಲ್ಲಿ ಅವರೂ ಇರಲಿದ್ದಾರೆ.

ಇದನ್ನೂ ಓದಿ
Image
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್
Image
ದೀಪಿಕಾಳಿಂದ ದೂರವಾದ ಬಗ್ಗೆ ನನಗೆ ಬೇಸರ ಇಲ್ಲ; ಮಾಜಿ ಬಾಯ್​ಫ್ರೆಂಡ್ ಹೇಳಿಕೆ
Image
ಅಣ್ಣಾವ್ರ ಚಿತ್ರವನ್ನು ರಿಮೇಕ್ ಮಾಡಿದ್ದ ಅಮಿತಾಭ್
Image
ಭಾನುವಾರವೇ ಅತೀ ಕಡಿಮೆ ಗಳಿಕೆ ಮಾಡಿದ ‘ಥಗ್ ಲೈಫ್’; ಕನ್ನಡಿಗರ ತಂಟೆಗೆ ಬಂದವರ

‘ಮಹಾನಟಿ’ ರಿಯಾಲಿಟಿ ಶೋನಲ್ಲಿ ರಮೇಶ್ ಅರವಿಂದ್, ತರುಣ್ ಸುಧೀರ್, ನಿಶ್ವಿಕಾ ನಾಯ್ಡು ಹಾಗೂ ಪ್ರೇಮಾ ಜಡ್ಜ್ ಸ್ಥಾನದಲ್ಲಿ ಇದ್ದರು. ಈ ಬಾರಿಯೂ ಇದೇ ತಂಡ ಮುಂದುವರಿಯಲಿದೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ನಟನೆ ಹಾಗೂ ಅದರ ಪ್ರಾಮುಖ್ಯತೆ ಮತ್ತು ಕುಟುಂಬದವರು ಯಾವ ರೀತಿ ಬೆಂಬಲಿಸಬೇಕು ಎಂಬುದನ್ನು ವಿವರಿಸಲಾಗಿದೆ.

View this post on Instagram

A post shared by Zee Kannada (@zeekannada)

‘ಮಹಾನಟಿ ಸೀಸನ್ 2’ ಜೂನ್ 14ರಿಂದ ರಾತ್ರಿ 7.30ಕ್ಕೆ ಪ್ರಸಾರ ಕಾಣಲಿದೆ. ಈ ಮೊದಲು ‘ಸರಿಗಮಪ’ ಶೋ ಪ್ರಸಾರ ಕಾಣುತ್ತಿತ್ತು. ಅದು ಪೂರ್ಣಗೊಂಡ ಬಳಿಕ ಈ ಶೋ ಬರುತ್ತಿದೆ. ಒಂದೂವರೆ ಗಂಟೆಗಳ ಕಾಲ ಕಲಾವಿದೆಯರು ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಪಡಿಸಲಿದ್ದಾರೆ.

ಇದನ್ನೂ ಓದಿ: ‘ಮಹಾನಟಿ’ ಆಶಿಕಾ ಧ್ವನಿ ಮೆಚ್ಚಿದ ಸುದೀಪ್; ಇವರ ಹಿನ್ನೆಲೆ ಕೇಳಿದ್ರೆ ಅಚ್ಚರಿ ಪಡ್ತೀರಾ

‘ಮಹಾನಟಿ ಸೀಸನ್ 2’ಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ತೆರಳಿ ಆಡಿಷನ್ ಮಾಡಲಾಗಿದೆ. ಈ ಆಡಿಷನ್ ಮೂಲಕ ಆಯ್ಕೆ ಆದವರ ಪೈಕಿ ಒಂದಷ್ಟು ಮಂದಿಯನ್ನು ಈ ಶೋಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿವಿಧ ಹಂತದಲ್ಲಿ ಈ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿ ಈ ವೀಕೆಂಡ್​ನಲ್ಲಿ ರಿವೀಲ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ