AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ಶಾಕ್ ಆಗಿ ಅಳಲು ಆರಂಭಿಸಿದೆ’; ಗೆಳೆಯ ಪ್ರಪೋಸ್ ಮಾಡಿದ ಸಂದರ್ಭ ವಿವರಿಸಿದ ಖ್ಯಾತ ನಟಿ

Sreejita De: ಖ್ಯಾತ ಕಿರುತೆರೆ ನಟಿ ಶ್ರೀಜಿತಾ ಡೇ ಪ್ಯಾರಿಸ್​ನಲ್ಲಿರುವ ಐಫೆಲ್​ ಟವರ್ ಮುಂಭಾಗದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಂದರ್ಭದ ಚಿತ್ರಗಳು ವೈರಲ್ ಆಗಿವೆ.

‘ನನಗೆ ಶಾಕ್ ಆಗಿ ಅಳಲು ಆರಂಭಿಸಿದೆ’; ಗೆಳೆಯ ಪ್ರಪೋಸ್ ಮಾಡಿದ ಸಂದರ್ಭ ವಿವರಿಸಿದ ಖ್ಯಾತ ನಟಿ
ಐಫೆಲ್ ಟವರ್ ಮುಂಭಾಗದಲ್ಲಿ ಶ್ರೀಜಿತಾ ಡೆ- ಮೈಕೆಲ್ ಬ್ಲೋಹ್ಮ್
TV9 Web
| Updated By: shivaprasad.hs|

Updated on: Jan 03, 2022 | 6:06 PM

Share

ಭಾರತೀಯ ಕಿರುತೆರೆಯಲ್ಲಿ ಶ್ರೀಜಿತಾ ಡೇ (Sreejita De) ಬಹುದೊಡ್ಡ ಹೆಸರು. ಬಹುದೀರ್ಘ ಕಾಲ ಪ್ರಸಾರವಾದ ಧಾರವಾಹಿಗಳಲ್ಲಿ ಅವರ ‘ಉತ್ತರಣ್’ ಕೂಡ ಒಂದು. ಬರೋಬ್ಬರಿ ಆರು ವರ್ಷಗಳ ಕಾಲ ಆ ಧಾರವಾಹಿ ಪ್ರಸಾರವಾಗಿತ್ತು. ಅವರ ‘ನಜರ್’ ಕೂಡ ಅಪಾರ ಮೆಚ್ಚುಗೆ ಪಡೆದಿತ್ತು. ಈ ಕಾರಣದಿಂದಲೇ ಅವರಿಗೆ ಅಭಿಮಾನಿ ಬಳಗವೂ ದೊಡ್ಡದಿದೆ. ಇತ್ತೀಚೆಗೆ ನಟಿಗೆ ಅವರ ದೀರ್ಘಕಾಲದ ಗೆಳೆಯ ಮೈಖೆಲ್ ಬ್ಲೋಹ್ಮ್ ಪ್ರಪೋಸ್ ಮಾಡಿದ್ದಾರೆ. ನಂತರ ಈರ್ವರೂ ಐಫೆಲ್ ಟವರ್ ಮುಂದೆ ರಿಂಗ್ ಬದಲಾಯಿಸಿಕೊಂಡಿದ್ದಾರೆ. ಈ ಸಂದರ್ಭದ ಚಿತ್ರಗಳು ಸದ್ಯ ವೈರಲ್ ಆಗಿದ್ದು, ಗೆಳೆಯ ಪ್ರಪೋಸ್ ಮಾಡಿದಾಗ ಆನಂದದಿಂದ ಕಣ್ಣೀರು ಹಾಕಿದ್ದೆ ಎಂದು ನಟಿ ಹೇಳಿಕೊಂಡಿದ್ದಾರೆ.

ಶ್ರೀಜಿತಾಗೆ ಗೆಳೆಯ ಮೈಖೆಲ್ ಬ್ಲೋಹ್ಮ್ ಪ್ರೇಮ ನಿವೇದನೆ ಮಾಡಿದ ಘಳಿಗೆ ಹೇಗಿತ್ತು? ನಟಿ ವಿವರಿಸಿದ್ದು ಹೀಗೆ. ‘‘ಅದೊಂದು ದಿನ ಸಂಜೆ. ಸುಮಾರು 7.30ರ ಸಮಯ. ತಣ್ಣನೆಯ ವಾತಾವರಣ ಇತ್ತು. ನಾನು ಮತ್ತು ಗೆಳೆಯ ಮೈಖೆಲ್ ನಡೆಯುತ್ತಿದ್ದೆವು. ಅರೆ ಕ್ಷಣದಲ್ಲಿ ಮೈಖೆಲ್ ಮಂಡಿಯೂರಿ ಕುಳಿತಿದ್ದ. ನನಗೆ ಶಾಕ್ ಆಗಿದ್ದಲ್ಲದೇ ಸಂತಸಕ್ಕೆ ಪಾರವೇ ಇರಲಿಲ್ಲ. ಕೂಡಲೇ ಅಳಲು ಆರಂಭಿಸಿದೆ’’ ಎಂದಿದ್ದಾರೆ ನಟಿ.

ಅಲ್ಲದೇ ಈ ರೀತಿಯ ಪ್ರೇಮ ನಿವೇದನೆ ಅವರು ನಿಜ ಜೀವನದಲ್ಲೂ ಆಗುತ್ತದೆ ಎನ್ನುವುದನ್ನು ಅವರು ಊಹಿಸಿರಲಿಲ್ಲವಂತೆ. ಕೇವಲ ತೆರೆಯ ಮೇಲೆ ಮಾತ್ರ ಈ ರೀತಿ ಆಗುತ್ತದೆ ಎಂದು ಭಾವಿಸಿದ್ದೆ. ಆ ಕ್ಷಣವನ್ನು ವಿವರಿಸಲು ಅಸಾಧ್ಯ. ಖುಷಿಯಿಂದ ಗೆಳೆಯನಿಗೆ ಮತ್ತೊಮ್ಮೆ ಹಾಗೇ ಪ್ರಪೋಸ್ ಮಾಡಲು ಹೇಳಿದೆ’’ ಎಂದಿದ್ದಾರೆ ಶ್ರೀಜಿತಾ.

ಶ್ರೀಜಿತಾ ಹಾಗೂ ಮೈಖೆಲ್ ಡಿಸೆಂಬರ್ 21ಕ್ಕೆ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಫ್ರಾನ್ಸ್​​ನ ಐಫೆಲ್ ಟವರ್ ಮುಂಭಾಗದಲ್ಲಿ ಈರ್ವರೂ ರಿಂಗ್ ಬದಲಾಯಿಸಿದ್ದು, ಆ ಸಂದರ್ಭದ ಚಿತ್ರಗಳು ವೈರಲ್ ಆಗಿವೆ. ನಟಿ ತಮ್ಮ ಕಲ್ಯಾಣ ಯಾವಾಗ ಎಂಬುದರ ಕುರಿತೂ ಮಾತನಾಡಿದ್ದಾರೆ. ಈ ವರ್ಷದ ಅಂತ್ಯದೊಳಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೇವೆ. ಜರ್ಮನ್ ಸಂಪ್ರದಾಯದಂತೆ ವಿವಾಹವಾಗುತ್ತೇವೆ. ನಂತರ ಬಂಗಾಳಿ ಸಂಪ್ರದಾಯದಲ್ಲಿಯೂ ವಿವಾಹವಾಗುತ್ತೇವೆ ಎಂದಿದ್ದಾರೆ 32 ವರ್ಷದ ನಟಿ. ಅಲ್ಲದೇ ವಿವಾಹವಾದ ನಂತರ ಮುಂದಿನ 5ವ ವರ್ಷಗಳ ಕಾಲ ಮುಂಬೈನಲ್ಲೇ ಉಳಿಯುತ್ತೇನೆ ಎಂದೂ ನಟಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:

Covid 19: ಬಾಲಿವುಡ್​​ ತಾರೆಯರನ್ನು ಬೆಂಬಿಡದ ಕೊರೊನಾ; ಇದೀಗ ಮತ್ತೆ ಮೂವರಿಗೆ ಪಾಸಿಟಿವ್

Kareena Kapoor: ಬರೀ ಮೂರೇ ದಿನಕ್ಕೆ ಹೊಸ ವರ್ಷದ ರೂಲ್ ಬ್ರೇಕ್ ಮಾಡಿದ ಕರೀನಾ; ಫ್ಯಾನ್ಸ್​​ಗೆ ನೀಡಿದ ಸಂದೇಶವೇನು?