ಸಹ ನಟನ ಜೊತೆ ಸಿಕ್ಕಿಬಿದ್ದ ಕಿರುತೆರೆ ನಟಿ; ವಿವಾಹವಾದ ಆರೇ ತಿಂಗಳಿಗೆ ಕೊನೆ ಆಯ್ತು ಸಂಸಾರ

ಹಿಂದಿ ಕಿರುತೆರೆ ನಟಿ ಅದಿತಿ ಶರ್ಮಾ ಅವರು ಅಭಿನೀತ್ ಕೌಶಿಕ್ ಅವರೊಂದಿಗೆ ಆರು ತಿಂಗಳ ಹಿಂದೆ ವಿವಾಹ ಆಗಿದ್ದಾರೆ. ಈಗ ಇವರು ವಿಚ್ಛೇದನ ಪಡೆಯುತ್ತಿದ್ದಾರೆ. ಗುಟ್ಟಾಗಿ ನಡೆದ ಮದುವೆಯ ಬಳಿಕ ಅದಿತಿ ಅವರು ಧಾರಾವಾಹಿಯ ಸಹನಟನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅಭಿನೀತ್ ಆರೋಪಿಸಿದ್ದಾರೆ. ಈ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಹ ನಟನ ಜೊತೆ ಸಿಕ್ಕಿಬಿದ್ದ ಕಿರುತೆರೆ ನಟಿ; ವಿವಾಹವಾದ ಆರೇ ತಿಂಗಳಿಗೆ ಕೊನೆ ಆಯ್ತು ಸಂಸಾರ
ಅಭಿನೀತ್-ಅದಿತಿ | ಸಮರ್ಥ್ಯ-ಅದಿತಿ (ಜೊತೆಯಾಗಿ ಇರುವವರು)

Updated on: Mar 11, 2025 | 7:37 AM

ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ವಿಚ್ಛೇದನ ಅನ್ನೋದು ಸರ್ವೇ ಸಮಾನ್ಯ ಆಗಿದೆ. ಈ ಬಗ್ಗೆ ಹೆಚ್ಚು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಈಗ ಹಿಂದಿ ಕಿರುತೆರೆ ನಟಿ ಅದಿತಿ ಶರ್ಮಾ (Aditi Sharma) ಅವರು ವಿಚ್ಛೇದನ ಪಡೆಯುತ್ತಿದ್ದಾರೆ. ಇವರ ಸಂಸಾರಕ್ಕೆ ತುಂಬಿದ್ದು ಕೇವಲ ಆರು ತಿಂಗಳು ಮಾತ್ರ. ಅಭಿನೀತ್ ಕೌಶಿಕ್ ಜೊತೆ ಗುಟ್ಟಾಗಿ ವಿವಾಹ ಆಗಿದ್ದ ಅದಿತಿ ಈಗ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರಂತೆ. ಈ ವಿಚಾರ ರಿವೀಲ್ ಆಗಿ ಸದ್ದು ಮಾಡುತ್ತಿದೆ. ಅವರ ಅಭಿಮಾನಿಗಳಿಗೆ ಇದು ಶಾಕಿಂಗ್ ಎನಿಸಿದೆ.

ಅದಿತಿ ಹಾಗೂ ಅಭಿನೀತ್ ಅವರು 2024ರ ನವೆಂಬರ್ 12ರಂದು ವಿವಾಹ ಆದರು. ಈ ಮದುವೆ ಗುರುಗ್ರಾಮದ ನಿವಾಸದಲ್ಲೇ ನಡೆಯಿತು. ಕೇವಲ ಕುಟುಂಬದವರು ಹಾಗೂ ಕೆಲವೇ ಆಪ್ತರು ವಿವಾಹಕ್ಕೆ ಹಾಜರಿ ಹಾಕಿದ್ದರು. ಈ ಫೋಟೋಗಳು ಎಲ್ಲೂ ಹೊರಬರದಂತೆ ನೋಡಿಕೊಳ್ಳಲಾಗಿತ್ತು. ವಿವಾಹ ಆದ ಬಳಿಕ ಆಫರ್​ಗಳು ಇಲ್ಲದಾಗುವ ಪರಿಸ್ಥಿತಿ ಎದುರಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಅದಿತಿ ಅವರು ಗುಟ್ಟಾಗಿ ವಿವಾಹ ಆಗುವ ನಿರ್ಧಾರಕ್ಕೆ ಬಂದಿದ್ದರು. ಇದಕ್ಕೆ ಅಭಿನೀತ್ ಕೂಡ ಬೆಂಬಲ ಕೊಟ್ಟಿದ್ದರು.

ಇದನ್ನೂ ಓದಿ
‘ಹುಡುಗರು’ ಸಿನಿಮಾ ನಟಿ ಅಭಿನಯಾ ಎಂಗೇಜ್​ಮೆಂಟ್; ಫೋಟೋ ಮೂಲಕ ಸಿಹಿ ಸುದ್ದಿ
ಪತ್ನಿಗೊಂದು ಚಾನ್ಸ್ ಕೊಡಿ; ‘ಮ್ಯಾಕ್ಸ್’ ನಿರ್ಮಾಪಕನ ಬಳಿ ರಂಭಾ ಪತಿ ಕೋರಿಕೆ
ಚಾಂಪಿಯನ್ಸ್ ಆದ ಖುಷಿಯಲ್ಲಿ ಅನುಷ್ಕಾಗೆ ರೋಹಿತ್ ಶರ್ಮಾ ಪ್ರೀತಿಯ ಅಪ್ಪುಗೆ
ಕರಣ್ ಜೋಹರ್​ಗೆ ಇರೋದು ರೋಗವೇ? ವಿಪರೀತ ತೂಕ ಇಳಿದಿದ್ದಕ್ಕೆ ಕಾರಣ ಇಲ್ಲಿದೆ


‘ಒಂದೂವರೆ ವರ್ಷಗಳ ಕಾಲ ನನ್ನನ್ನು ಮದುವೆಯಾಗಲು ಆಕೆ ಪ್ರಯತ್ನಿಸುತ್ತಿದ್ದಳು. ಆದರೆ ನಾನು ಸಿದ್ಧನಿರಲಿಲ್ಲ. ಸಾಕಷ್ಟು ಮನವೊಲಿಸಿದ ನಂತರ, ನಾನು ಒಪ್ಪಿಕೊಂಡೆ. ಆದರೆ, ವಿವಾಹ ವಿಚಾರ ಯಾರಿಗೂ ತಿಳಿಯಬಾರದು ಎಂದು ಅವಳು ನನಗೆ ಒತ್ತಾಯಿಸಿದಳು’ ಎಂದಿದ್ದಾರೆ ಅಭಿನೀತ್.

ಇದನ್ನೂ ಓದಿ: ಮದುವೆ ಬಳಿಕ ಚಿತ್ರರಂಗದಿಂದ ದೂರಾಗುತ್ತಾರಾ ನಟಿ ಅದಿತಿ ರಾವ್ ಹೈದರಿ?

ಇವರ ವಕೀಲ ರಾಕೇಶ್ ಶೆಟ್ಟಿ ಹೇಳುವ ಪ್ರಕಾರ ಅಭಿನೀತ್ ಹಾಗೂ ಅದಿತಿ ಹಲವು ವರ್ಷಗಳ ಕಾಲ ಒಟ್ಟಾಗಿ ಇದ್ದರು. ಆ ಬಳಿಕ ಇವರು ವಿವಾಹ ಆದರು. ಕೆಲ ತಿಂಗಳ ಹಿಂದೆ ಇವರು ಅಪಾರ್ಟ್​ಮೆಂಟ್​ನ ಖರೀದಿ ಮಾಡಿ ಅಲ್ಲಿ ವಾಸ ಮಾಡುತ್ತಾ ಇದ್ದರು.

‘ಅಪೊಲ್ಲೆನಾ’ ಧಾರಾವಾಹಿಯಲ್ಲಿ ಅದಿತಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ನಟ ಸಮರ್ಥ್ಯ ಜೊತೆ ಅದಿತಿ ಆಪ್ತತೆ ಬೆಳೆಸಿಕೊಳ್ಳುತ್ತಿರುವ ಬಗ್ಗೆ ಅಭಿನೀತ್​ಗೆ ಅನುಮಾನ ಬಂದಿದೆ. ಹೋಗಿ ಪರೀಕ್ಷಿಸಿದಾಗ ಇಬ್ಬರೂ ಒಟ್ಟಿಗೆ ಆಪ್ತವಾಗಿ ಇದ್ದಿದ್ದು ಕಂಡು ಬಂದಿದೆ. ಈ ಕಾರಣದಿಂದ ಅಭಿನೀತ್ ಅವರು ದೂರ ಆಗುವ  ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಅದಿತಿ ಬಳಿ ಪ್ರಶ್ನೆ ಮಾಡಿದಾಗ, ‘ನಮ್ಮ ಮದುವೆಗೆ ಯಾವುದೇ ಮಾನ್ಯತೆ ಇಲ್ಲ’ ಎಂದು ಹೇಳಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:03 am, Tue, 11 March 25