‘ಬಿಗ್ ಬಾಸ್ ಕನ್ನಡ’ ಹಳೆಯ ಸೀಸನ್​ಗಳ ವಿನ್ನರ್​ಗಳು ಯಾರು? ಇಲ್ಲಿದೆ ವಿವರ

| Updated By: ರಾಜೇಶ್ ದುಗ್ಗುಮನೆ

Updated on: Jan 25, 2025 | 6:31 AM

ಬಿಗ್ ಬಾಸ್ ಕನ್ನಡದ ಎಲ್ಲಾ ಸೀಸನ್‌ಗಳ ವಿಜೇತರ ಮತ್ತು ರನ್ನರ್-ಅಪ್‌ಗಳ ಪಟ್ಟಿ ಇಲ್ಲಿದೆ. 2013ರಿಂದ 2024ರವರೆಗೆ ಪ್ರಸಾರವಾದ ಎಲ್ಲಾ ಸೀಸನ್‌ಗಳ ವಿವರಗಳನ್ನು ಒಳಗೊಂಡಿದೆ. ಪ್ರತಿ ಸೀಸನ್‌ನ ವಿಜೇತರು, ರನ್ನರ್ ಅಪ್‌ಗಳು ಮತ್ತು ಪ್ರಮುಖ ಘಟನೆಗಳನ್ನು ಈ ಲೇಖನ ತಿಳಿಸುತ್ತದೆ. ಬಿಗ್ ಬಾಸ್ ಕನ್ನಡದ ಇತಿಹಾಸವನ್ನು ಸೀಸನ್​ನಲ್ಲಿ ತಿಳಿದುಕೊಳ್ಳಬಹುದು.

‘ಬಿಗ್ ಬಾಸ್ ಕನ್ನಡ’ ಹಳೆಯ ಸೀಸನ್​ಗಳ ವಿನ್ನರ್​ಗಳು ಯಾರು? ಇಲ್ಲಿದೆ ವಿವರ
Bbk
Follow us on

ನೋಡುತ್ತಾ ನೋಡುತ್ತಾ ಬಿಗ್ ಬಾಸ್ ಫಿನಾಲೆ ಬಂದೇ ಬಿಟ್ಟಿದೆ. ಆರು ಸ್ಪರ್ಧಿಗಳು ಇದ್ದು ಇವರ ಪೈಕಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಸ್ಪರ್ಧಿಗಳಿಗೆ ಇದೆ. ಮೋಕ್ಷಿತಾ ಪೈ, ಹನುಮಂತ, ತ್ರಿವಿಕ್ರಂ, ಮಂಜು, ಭವ್ಯಾ ಹಾಗೂ ರಜತ್ ಫಿನಾಲೆ ಲಿಸ್ಟ್​ನಲ್ಲಿ ಇದ್ದಾರೆ.  ಹೀಗಿರುವಾಗಲೇ ಬಿಗ್ ಬಾಸ್ ಹಳೆಯ ಸೀಸನ್​ಗಳ ವಿನ್ನರ್​ಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮೊದಲ ಸೀಸನ್​ಗಳಲ್ಲಿ ಯಾರೆಲ್ಲ ವಿನ್ ಆಗಿದ್ದರು ಎನ್ನುವುದರ ವಿವರ ಇಲ್ಲಿದೆ.

ಬಿಗ್ ಬಾಸ್ ಸೀಸನ್ 1: 2013ರಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ಲಾಂಚ್ ಆಯಿತು. ಹಿಂದಿಯಲ್ಲಿ ಗಮನ ಸೆಳೆದ ಈ ಶೋನ ಕನ್ನಡ ವರ್ಷನ್ ಇಟಿವಿ ಕನ್ನಡದಲ್ಲಿ ಪ್ರಸಾರ ಕಂಡಿತ್ತು. ಮಾರ್ಚ್ 24ರಂದು ಆರಂಭ ಆದ ಈ ಶೋ 98 ದಿನಗಳ ಕಾಲ ನಡೆಯಿತು. ಸುದೀಪ್ ಇದರ ಹೋಸ್ಟ್ ಆದರು. ವಿಜಯ್ ರಾಘವೇಂದ್ರ ಇದರ ವಿನ್ನರ್ ಆದರು.

ಬಿಗ್ ಬಾಸ್ ಸೀಸನ್ 2: 2014ರ ಜೂನ್ 29ರಿಂದ ಅಕ್ಟೋಬರ್ 5ರವರೆಗೆ ‘ಬಿಗ್ ಬಾಸ್ ಸೀಸನ್ 2’ ನಡೆಯಿತು. ಸೃಜನ್ ಲೋಕೆಶ್ ರನ್ನರ್ ಅಪ್​ ಆದರೆ, ಅಕುಲ್ ಬಾಲಾಜಿ ವಿನ್ನರ್ ಆದರು. ಏಷ್ಯಾನೆಟ್ ಸುವರ್ಣದಲ್ಲಿ ಈ ಶೋ ಪ್ರಸಾರ ಕಂಡಿತ್ತು. 15 ಸ್ಪರ್ಧಿಗಳು ಇದ್ದರು.

ಬಿಗ್ ಬಾಸ್ ಸೀಸನ್ 3: 18 ಸ್ಪರ್ಧಿಗಳನ್ನು ಒಳಗೊಂಡಿದ್ದ ‘ಬಿಗ್ ಬಾಸ್ 3’ 2015ರ ಅಕ್ಟೋಬರ್ 25ರಿಂದ 2016ರ ಜನವರಿ 31ರವರೆಗೆ ನಡೆಯಿತು. 98 ದಿನ ಶೋ ಪ್ರಸಾರ ಕಂಡಿತ್ತು. ಚಂದನ್ ಕುಮಾರ್ ರನ್ನರ್​ ಅಪ್ ಆದರೆ, ಶ್ರುತಿ ವಿನ್ನರ್ ಆದರು.

ಬಿಗ್ ಬಾಸ್ ಸೀಸನ್ 4: ಪ್ರಥಮ್ ಅವರು ವಿನ್ ಆದ ಸೀಸನ್ ‘ಬಿಗ್ ಬಾಸ್ 4’. ಮೊದಲ ಬಾರಿಗೆ ಶೋ 100 ದಿನಗಳನ್ನು ದಾಟಿತ್ತು. ಆ ಸೀಸನ್​ನಲ್ಲಿ ಎರಡು ವಾರ ಹೆಚ್ಚುವರಿಯಾಗಿ ನಡೆಸಲಾಯಿತು. 112 ದಿನಗಳ ಕಾಲ ಶೋ ನಡೆಯಿತು. 2016ರ ಅಕ್ಟೋಬರ್ 9ರಿಂದ 2017ರ ಜನವರಿ 29ರವರೆಗೆ ಶೋ ಪ್ರಸಾರ ಕಂಡಿತು.

ಬಿಗ್ ಬಾಸ್ ಸೀಸನ್ 5: ಚಂದನ್ ಶೆಟ್ಟಿ ಅವರು ಐದನೇ ಸೀಸನ್ ವಿನ್ ಆದರು. 20 ಜನ ಇದ್ದ ಸ್ಪರ್ಧೆ 105 ದಿನಗಳ ಕಾಲ ನಡೆಯಿತು. 2017ರ ಅಕ್ಟೋಬರ್ 15ರಿಂದ 2018ರ ಜನವರಿ 28ರವರೆಗೆ ಶೋ ನಡೆಯಿತು.

ಬಿಗ್ ಬಾಸ್ ಸೀಸನ್ 6: ಶಶಿಕುಮಾರ್ ಅವರು ಆರನೇ ಸೀಸನ್ ವಿನ್ ಆದರು. ಕಲರ್ಸ್ ಸೂಪರ್​ನಲ್ಲಿ ಶೋ ಪ್ರಸಾರ ಕಂಡಿತು. 2018ರ ಅಕ್ಟೋಬರ್ 21ರಿಂದ 2019ರ ಜನವರಿ 27ರವರೆಗೆ ಶೋ ಪ್ರಸಾರ ಕಂಡಿತು. ನವೀನ್ ಸಜ್ಜು ರನ್ನರ್ ಅಪ್ ಆದರು.

ಬಿಗ್ ಬಾಸ್ ಸೀಸನ್ 7: ಶೈನ್ ಶೆಟ್ಟಿ ಅವರು ಈ ಸೀಸನ್ ವಿನ್ ಆದರು. ಕುರಿ ಪ್ರತಾಪ್ ರನ್ನರ್ ಅಪ್ ಆದರು. ಈ ಸೀಸನ್ ಹೆಚ್ಚು ಮನರಂಜನೆ ನೀಡಿತ್ತು. 112 ದಿನಗಳ ಕಾಲ ಶೋ ನಡೆದಿತ್ತು. 2019ರ ಅಕ್ಟೋಬರ್ 13ರಿಂದ 2020ರ ಫೆಬ್ರವರಿವರೆಗೆ ಶೋ ನಡೆಯಿತು.

ಬಿಗ್ ಬಾಸ್ ಸೀಸನ್ 8: ಮಂಜು ಪಾವಗಡ ಶೋನ ವಿನ್ನರ್ ಆದರೆ, ಅರವಿಂದ್ ಕೆಪಿ ರನ್ನರ್​ ಅಪ್ ಆದರು. 120 ದಿನಗಳ ಕಾಲ ಶೋನ ನಡೆಯಿತು. ಕೊವಿಡ್ ಎರಡನೆ ಅಲೆ ಕಾರಣದಿಂದ ಶೋನ ಅರ್ಧಕ್ಕೆ ನಿಲ್ಲಿಸಿ ಮತ್ತೆ ಕರೆತರಲಾಗಿತ್ತು. ಇದು ಭಿನ್ನ ಸೀಸನ್ ಎನಿಸಿಕೊಂಡಿದೆ.

ಬಿಗ್ ಬಾಸ್ ಸೀಸನ್ 9: ಈ ಸೀಸನ್​​ನಲ್ಲಿ ಹಳೆಯ ಸ್ಪರ್ಧಿಗಳು ಬಂದಿದ್ದರು. ಒಟಿಟಿ ಬಳಿಕ ಟಿವಿ ಶೋ ಆರಂಭಿಸಲಾಯಿತು. ರೂಪೇಶ್ ಶೆಟ್ಟಿ ವಿನ್ನರ್ ಆದರೆ, ರಾಕೇಶ್ ಅಡಿಗ ರನ್ನರ್ ಅಪ್ ಆದರು. ಇದಕ್ಕೂ ಮೊದಲು ಒಟಿಟಿ ಶೋ ಕೂಡ ನಡೆದಿತ್ತು. ಇದರಲ್ಲೂ ರೂಪೇಶ್ ಮೊದಲ ಸ್ಥಾನದಲ್ಲಿ ಇದ್ದರು.

ಇದನ್ನೂ ಓದಿ: ಬಿಗ್ ಬಾಸ್ 11: ಕಿಚ್ಚನ ಹೇರ್ ಕಟಿಂಗ್ ಮಾಡುವುದು ಇವರೇ ನೋಡಿ

ಬಿಗ್ ಬಾಸ್ ಸೀಸನ್ 10: ಕಾರ್ತಿಕ್ ಮಹೇಶ್ ಅವರು ಈ ಸೀಸನ್ ವಿನ್ ಆದರು. ಡ್ರೋನ್ ಪ್ರತಾಪ್ ರನ್ನರ್ ಅಪ್ ಆದರು. ಇದರಲ್ಲಿ ಸಾಕಷ್ಟು ವಿವಾದಗಳು ಕೂಡ ಹುಟ್ಟಿಕೊಂಡಿದ್ದವು.

ಬಿಗ್ ಬಾಸ್ ಸೀಸನ್ 11: ಈ ಬಾರಿ ಒಟ್ಟು 120 ದಿನ ಬಿಗ್ ಬಾಸ್ ನಡೆಯುತ್ತಿದೆ. ಕಿಚ್ಚ ಸುದೀಪ್ ಹೋಸ್ಟ್ ಮಾಡುವ ಕೊನೆ ಸೀಸನ್ ಎನ್ನಲಾಗಿದೆ. ಒಟ್ಟು 20 ಸ್ಪರ್ಧಿಗಳು ಮನೆಯಲ್ಲಿ ಇದ್ದರು. ಈ ಬಾರಿ ಸಾಕಷ್ಟು ವಿವಾದ ಕೂಡ ಆಗಿದೆ. ಜನವರಿ 26ರಂದು ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.