KBC 13: ನಾನ್ ಸ್ಟಾಪ್ ಸಾಂಸಾರಿಕ ಸಮಸ್ಯೆ ಹೇಳಿಕೊಂಡ ಜೋಡಿ; ಉತ್ತರ ತೋಚದೇ ತಲೆ ಮೇಲೆ ಕೈಹೊತ್ತು ಕುಳಿತ ಅಮಿತಾಭ್

Amitabh Bachchan: ಕೆಬಿಸಿ 13ರಲ್ಲಿ ಇತ್ತೀಚಿನ ಸಂಚಿಕೆಯೊಂದರಲ್ಲಿ ನಡೆದಿರುವ ಘಟನೆ ನೋಡುಗರ ಅಚ್ಚರಿಗೆ ಕಾರಣವಾಗಿದೆ. ಆ ಸಂಚಿಕೆಯಲ್ಲಿ ಏನು ಉತ್ತರ ಹೇಳಬೇಕು ಎಂದು ತೋಚದೇ ಅಮಿತಾಭ್ ತಲೆ ಮೇಲೆ ಕೈಹೊತ್ತ ಪ್ರಸಂಗವೂ ನಡೆದಿದೆ. ಏನಿದು ಸಮಾಚಾರ?

KBC 13: ನಾನ್ ಸ್ಟಾಪ್ ಸಾಂಸಾರಿಕ ಸಮಸ್ಯೆ ಹೇಳಿಕೊಂಡ ಜೋಡಿ; ಉತ್ತರ ತೋಚದೇ ತಲೆ ಮೇಲೆ ಕೈಹೊತ್ತು ಕುಳಿತ ಅಮಿತಾಭ್
ಅಮಿತಾಭ್ ಬಚ್ಚನ್
Edited By:

Updated on: Oct 24, 2021 | 3:28 PM

ಕೌನ್ ಬನೇಗಾ ಕರೋಡ್​ಪತಿಯ 13ನೇ ಸೀಸನ್ ಹಲವು ಅಪರೂಪದ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಅಂತೆಯೇ ಹಲವಾರು ಮಜವಾದ ಘಟನೆಗಳಿಗೂ ಸಾಕ್ಷಿಯಾಗುತ್ತಿದೆ. ಇತ್ತೀಚಿನ ಸಂಚಿಕೆಯೊಂದರಲ್ಲಿ ಹಾಟ್ ಸೀಟ್​ ಮೇಲೆ ಕುಳಿತಿದ್ದ ಜೋಡಿಯೊಂದು ತಮ್ಮ ಸಾಂಸಾರಿಕ ಸಮಸ್ಯೆಗಳನ್ನು ಅಮಿತಾಭ್ ಮುಂದೆ ಹೇಳಿಕೊಂಡಿದ್ದಾರೆ. ಅವರ ನಾನ್ ಸ್ಟಾಪ್ ಮಾತುಗಳಿಗೆ ಅಮಿತಾಭ್ ಉತ್ತರ ತಿಳಿಯದೇ ಮೌನಕ್ಕೆ ಶರಣಾದ ಪ್ರಸಂಗವೂ ನಡೆದಿದೆ. ಕೆಬಿಸಿ ವೇದಿಕೆಯಲ್ಲಿ ಆ ಜೋಡಿ ಹೇಳಿಕೊಂಡಿದ್ದನ್ನು ವಾಹಿನಿ ಪ್ರೋಮೋ ಮುಖಾಂತರ ಬಿಡುಗಡೆ ಮಾಡಿದ್ದು, ಅದರಲ್ಲಿನ ಅಮಿತಾಭ್ ಪ್ರತಿಕ್ರಿಯೆಗೆ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ.

ಹಾಟ್ ಸೀಟ್​ನಲ್ಲಿ ಧರ್ವಾಲ್ ಹಾಗೂ ಅವರ ಪತ್ನಿ ಕುಳಿತು ಶೋನಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಧರ್ವಾಲ್ ಅವರ ಪತ್ನಿಗೆ ಫ್ಲಾಶ್ ಮಾಬ್ ಮುಖಾಂತರ ಅದ್ದೂರಿಯಾಗಿ ಪ್ರಪೋಸ್ ಮಾಡಿದ್ದನ್ನು ಹಂಚಿಕೊಂಡರು. ಆಗ ಅಮಿತಾಭ್, ಧರ್ವಾಲ್ ಅವರ ಪತ್ನಿಯಲ್ಲಿ ನಿಮ್ಮ ಪತಿ ಈಗಲೂ ರೊಮ್ಯಾಂಟಿಕ್ ಆಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪತ್ನಿಯು, ‘ಇಲ್ಲ ಸರ್, ಅವರು ನನಗೀಗ ಸಮಯವನ್ನೇ ನೀಡುವುದಿಲ್ಲ’ ಎಂದಿದ್ದಾರೆ. ಅದನ್ನು ಕೇಳಿದ ಧರ್ವಾಲ್ ಸುಮ್ಮನಿರದೇ, ನೇರವಾಗಿ ಅಮಿತಾಭ್ ಜೀವನವನ್ನೇ ಉದಾಹರಿಸಿದ್ದಾರೆ. ‘ಸರ್, ನೀವೇ ಹೇಳಿ ಈಕೆಗೆ. ನಿಮಗೂ ಜಯಾ ಬಚ್ಚನ್ ಅವರಿಗೆ ಹೆಚ್ಚು ಸಮಯವನ್ನು ನೀಡಲು ಕಷ್ಟವಾಗುತ್ತದ ಅಲ್ವೇ?’ ಎಂದು ಧರ್ವಾಲ್ ಪ್ರತಿಕರಿಯೆ ನೀಡಿದ್ದಾರೆ.

ಆಗ ಅಮಿತಾಭ್, ತಾವೀಗ ಅಧಿಕೃತವಾಗಿ ಮ್ಯಾರೇಜ್ ಕೌನ್ಸೆಲರ್ ಆಗಿದ್ದೇನೆ ಎಂದು ತಮಾಷೆ ಮಾಡಿದ್ದಾರೆ. ಇದೇ ವೇಳೆ ಧರ್ವಾಲ್ ದಂಪತಿಯ ನಾನ್ ಸ್ಟಾಪ್ ಮಾತುಕತೆ ಮುಂದುವರೆದಿದೆ. ಅಮಿತಾಭ್ ಕೊನೆಗೆ ಎಲ್ಲವೂ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ, ಧರ್ವಾಲ್ ಅವರ ಪತ್ನಿ, ‘ನನ್ನದು ಇನ್ನೂ ಒಂದು ಕಂಪ್ಲೇಂಟ್ ಇದೆ ಸರ್’ ಎಂದಿದ್ದಾರೆ. ಆಗ ಅಮಿತಾಭ್ ತಲೆ ಮೇಲೆ ಕೈಹೊತ್ತು, ‘ನನ್ನನ್ನು ಇವರಿಂದ ಯಾರಾದರೂ ಬಚಾವು ಮಾಡಿ’ ಎಂದು ಗೋಗರೆದಿದ್ದಾರೆ. ಅಮಿತಾಭ್ ನುಡಿದಿರುವ ತಮಾಷೆಯ ಮಾತುಗಳು ಎಲ್ಲರಿಗೂ ನಗು ತರಿಸಿದೆ.

ಶೋನ ಪ್ರೋಮೋ ಇಲ್ಲಿದೆ:

ಕೆಬಿಸಿಯಲ್ಲಿ ಇತ್ತೀಚಿನ ಸಂಚಿಕೆಯಲ್ಲಿ ಈ ಸೀಸನ್​ನ ಎರಡನೇ ಕೋಟ್ಯಧಿಪತಿ ಹೊರಹೊಮ್ಮಿದ್ದಾರೆ. ಸಾಹಿಲ್ ಅಹಿರ್ವಾರ್ ಎನ್ನುವವರು ₹ 1 ಕೋಟಿ ಮೊತ್ತದ ಜೊತೆಗೆ ಒಂದು ಕಾರನ್ನೂ ಗೆದ್ದಿದ್ದಾರೆ.

ಇದನ್ನೂ ಓದಿ:

KBC 13: ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ₹ 1 ಕೋಟಿಗೆ ತೃಪ್ತಿಪಟ್ಟ 19 ವರ್ಷದ ಯುವಕ; ನಿಮಗೆ ಉತ್ತರ ತಿಳಿದಿದೆಯೇ?

ಕೆಬಿಸಿಯಲ್ಲಿ 1 ಕೋಟಿ ಮೊತ್ತದ ಈ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?

Amitabh Bachchan: ನಟಿ ಕೃತಿ ಸನೋನ್ ಜೊತೆ ಹೆಜ್ಜೆ ಹಾಕುತ್ತಾ ಕಾಲೇಜು ದಿನಗಳ ನೆನಪಿಗೆ ಜಾರಿದ ಅಮಿತಾಭ್