KBC 13: ಕೌನ್ ಬನೇಗಾ ಕರೋಡ್ಪತಿಯ 13ನೇ ಸೀಸನ್ ಭರ್ಜರಿಯಾಗಿ ಮೂಡಿಬರುತ್ತಿದ್ದು, ವೀಕ್ಷಕರಿಗೆ ಇಷ್ಟವಾಗುತ್ತಿದೆ. ಇದರಲ್ಲಿ ಭಾಗಿಯಾಗುವ ಸೆಲೆಬ್ರಿಟಿಗಳು, ಸಾಮಾನ್ಯರು ಹಲವು ಕುತೂಹಲಕರ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಮಾತನಾಡುವಾಗ ನಿರೂಪಕ ಅಮಿತಾಭ್ ಬಚ್ಚನ್ ಕೂಡ ಹಲವು ಅಚ್ಚರಿಯ ಸಂಗತಿಗಳನ್ನು ಹೇಳಿಕೊಳ್ಳುತ್ತಾರೆ. ಇತ್ತೀಚೆಗೆ ನಡೆದ ಸಂಚಿಕೆಯಲ್ಲಿ ಅಮಿತಾಭ್, ಸ್ಪರ್ಧಿಯೊಂದಿಗೆ ಆನ್ಲೈನ್ ತರಗತಿಗಳ ಕುರಿತಾಗಿ ಮಾತನಾಡುತ್ತಾ, ಅವರ ಮೊಮ್ಮಗಳು ಆರಾಧ್ಯ ಬಚ್ಚನ್ಗೆ ಆನ್ಲೈನ್ ಕ್ಲಾಸ್ಗೆ ಯಾರು ಸಹಾಯ ಮಾಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ.
ಕೆಬಿಸಿ 13ರ ಇತ್ತೀಚಿನ ಸಂಚಿಕೆಯಲ್ಲಿ ಗ್ವಾಲಿಯರ್ನ ಶಾಲೆಯೊಂದರ ಮುಖ್ಯೋಪಾಧ್ಯಾಯೆಯಾದ ಕಲ್ಪನಾ ಸಿಂಗ್ ಭಾಗವಹಿಸಿದ್ದರು. ಅವರೊಂದಿಗೆ ಮಾತನಾಡುವಾಗ ಅಮಿತಾಭ್, ಕೊರೊನಾ ಕಾಲಘಟ್ಟದ ನಂತರ ರೂಪುಗೊಂಡಿರುವ ಹೊಸ ಪದ್ಧತಿಯಾದ ಶಾಲಾ ಮಕ್ಕಳ ಆನ್ಲೈನ್ ತರಗತಿಗಳ ಕುರಿತು ಚರ್ಚಿಸಿದ್ದಾರೆ. ಆ ಸಂದರ್ಭದಲ್ಲಿ ಅಮಿತಾಭ್ ತಮ್ಮ ಮನೆಯ ಅನುಭವವನ್ನು ಹೇಳಿಕೊಂಡಿದ್ದಾರೆ.
ಆರಾಧ್ಯಾಳ ಆನ್ಲೈನ್ ತರಗತಿಗೆ ಪೋಷಕರಾದ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಸಹಾಯ ಮಾಡುತ್ತಾರಂತೆ. ‘‘ನಮ್ಮ ಮನೆಯಲ್ಲೂ ಆನ್ಲೈನ್ ತರಗತಿಗೆ ಹಾಜರಾಗುವ ಪುಟಾಣಿಯೊಬ್ಬಳಿದ್ದಾಳೆ. ಇಡೀ ದಿನವೂ ಅವಳು ಕ್ಲಾಸ್ಗಳಲ್ಲಿ ಬ್ಯುಸಿಯಾಗಿರುತ್ತಾಳೆ. ಪೋಷಕರು ಅವಳಿಗೆ ಕಂಪ್ಯೂಟರ್ ಬಳಸುವ ಕುರಿತು, ಪ್ರೆಸೆಂಟೇಶನ್ಗಳನ್ನು ಮಾಡುವುದರ ಕುರಿತು ಹೇಳಿಕೊಡುತ್ತಾರೆ’’ ಎಂದಿದ್ದಾರೆ ಅಮಿತಾಭ್.
‘‘ಕೆಲವೊಮ್ಮೆ ಅವಳು ಕಂಪ್ಯೂಟರ್ ಮುಂದೆ ಕುಳಿತು ಯೋಗ ಕ್ಲಾಸ್ನಲ್ಲಿ ಭಾಗಿಯಾಗಿರುವುದನ್ನೂ ನೋಡಿ ಅಚ್ಚರಿಗೊಂಡಿದ್ದೇನೆ. ನಾನು ಕೂಡ ಆರಾಧ್ಯಾಳ ಕೆಲವು ತರಗತಿಗಳನ್ನು ಕೇಳಿದ್ದು, ಅವುಗಳ ವಾತಾವರಣ ಉತ್ತಮವಾಗಿದೆ’‘ ಎಂದಿದ್ದಾರೆ ಬಾಲಿವುಡ್ ಬಿಗ್ಬಿ. 2019ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಆರಾಧ್ಯಾ ಕೆಬಿಸಿ ಶೋವನ್ನು ವೀಕ್ಷಿಸುವುದರ ಕುರಿತು ಅಮಿತಾಭ್ ಮಾತನಾಡಿದ್ದರು. ‘‘ಪತ್ನಿ ಜಯಾ ಬಚ್ಚನ್ ಒಂದು ದಿನವೂ ಶೋ ತಪ್ಪಿಸುವುದಿಲ್ಲ. ಐಶ್ವರ್ಯಾ ಹಾಗೂ ಶ್ವೇತಾ(ಅಮಿತಾಭ್ ಮಗಳು)- ಈರ್ವರೂ ಪೈಪೋಟಿಯಲ್ಲಿ ಉತ್ತರಗಳನ್ನು ಹೇಳುತ್ತಾ ಶೋವನ್ನು ಎಂಜಾಯ್ ಮಾಡುತ್ತಾರೆ. ಪುಟಾಣಿ ಆರಾಧ್ಯಾ ಕೂಡ ಕೆಬಿಸಿಯನ್ನು ಇಷ್ಟಪಟ್ಟು ನೋಡುತ್ತಾಳೆ’’ ಎಂದಿದ್ದರು ಅಮಿತಾಭ್.
ಕೌನ್ ಬನೇಗಾ ಕರೋಡ್ಪತಿ ಚೆನ್ನಾಗಿ ಮೂಡಿಬರುತ್ತಿದ್ದು, ಕಳೆದ ವಾರದ ಸೆಲೆಬ್ರಿಟಿ ಶೋನಲ್ಲಿ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು. ಪ್ರತೀ ಶುಕ್ರವಾರ ಮೂಡಿಬರುವ ಸೆಲೆಬ್ರಿಟಿ ಸಂಚಿಕೆಯ ಕಾರ್ಯಕ್ರಮದಲ್ಲಿ ಈ ವಾರ, ಬಾಲಿವುಡ್ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ಫರ್ಹಾ ಖಾನ್ ಭಾಗವಹಿಸಿದ ಸಂಚಿಕೆ ಪ್ರಸಾರವಾಗಲಿದೆ. ಈಗಾಗಲೇ ಇದರ ಪ್ರೊಮೊಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸಿವೆ.
ಇದನ್ನೂ ಓದಿ:
ಸ್ವಂತ ತಮ್ಮನನ್ನೇ ಬೆಳೆಸಲಿಲ್ಲ ಆಮಿರ್ ಖಾನ್; ನಟನೆ ಬರಲ್ಲ ಅಂತ ಬೈಯಿಸಿಕೊಂಡಿದ್ದ ಫೈಸಲ್ ಖಾನ್ ಬಿಚ್ಚಿಟ್ಟ ರಹಸ್ಯ
‘ಹಾಗಲ್ಲ ಸರ್..’ ಎಂದು ಅಮಿತಾಭ್ಗೆ ನಟನೆ ಹೇಳಿಕೊಟ್ಟ ದೀಪಿಕಾ, ಫರ್ಹಾ ಖಾನ್; ವಿಡಿಯೋ ವೈರಲ್
(Amitabh Bachchan reveals who helps Aradhya with her online classes)