
‘ಅಮೃತಧಾರೆ’ ಧಾರಾವಾಹಿಯು ರೋಚಕ ಘಟ್ಟವನ್ನು ತಲುಪಿದೆ. ಈ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಗೌತಮ್ ಬೇರೆ ಆಗಿರೋದು ಗೊತ್ತೇ ಇದೆ. ಈಗ ಇವರು ಒಂದಾಗುವ ಸಮಯ ಹತ್ತಿರವಾಗಿದೆ. ಭೂಮಿಕಾಳನ್ನು ಹುಡುಕಿಕೊಂಡು ನಾನಾ ಊರಿಗೆ ತೆರಳುತ್ತಿರುವ ಗೌತಮ್ಗೆ ಕೊನೆಗೂ ಆಕೆ ಸಿಕ್ಕಿದ್ದಾಳೆ. ಕುಶಾಲನಗರದಲ್ಲಿ ಈ ಭೇಟಿ ನಡೆದಿದೆ. ಆ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ.
‘ಅಮೃತಧಾರೆ’ ಧಾರಾವಾಹಿಯಲ್ಲಿ ಇತ್ತೀಚೆಗೆ ಹಲವು ಬೆಳವಣಿಗೆಗಳು ನಡೆದವು. ಈ ಬೆಳವಣಿಗೆಗಳಲ್ಲಿ ಗೌತಮ್ ಹಾಗೂ ಭೂಮಿಕಾ ಬೇರೆ ಆಗಿದ್ದು ಕೂಡ ಒಂದು. ಭೂಮಿಕಾಳಿಗೆ ಶಕುಂತಲ ಬೆದರಿಕೆ ಹಾಕಿದ್ದಾಳೆ. ಈ ಬೆದರಿಕೆಯಿಂದ ಬೇಸತ್ತು ಭೂಮಿಕಾ ಮಗನ ಕರೆದುಕೊಂಡು ಮನೆ ಬಿಟ್ಟು ಹೋಗುತ್ತಾಳೆ. ಆಕೆ ಹೋಗಿ ಕುಶಾಲನಗರದಲ್ಲಿ ಸೆಟಲ್ ಆಗುತ್ತಾಳೆ. ಅಲ್ಲಿ ಶಾಲೆ ಒಂದರಲ್ಲಿ ಶಿಕ್ಷಕಿ ಆಗಿರುತ್ತಾಳೆ.
ಈಗ ಕಥೆ ಐದು ವರ್ಷ ಮುಂದಕ್ಕೆ ಹೋಗಿದೆ. ಭೂಮಿಕಾಳನ್ನು ಹುಡುಕುತ್ತಾ ಗೌತಮ್ ಇಷ್ಟು ವರ್ಷ ಕಳೆದಿರುತ್ತಾನೆ. ಈಗ ಆತ ಕ್ಯಾಬ್ ಡ್ರೈವರ್. ಆತ ಭೂಮಿಕಾಳನ್ನು ಹುಡುಕುತ್ತಾ ಹುಡುಕುತ್ತಾ ಕುಶಾಲನಗರ ತಲುಪುತ್ತಾನೆ. ಅಲ್ಲಿ ಭೂಮಿಕಾ ಸಿಗುತ್ತಾಳೆ. ಕಳೆದ ಕೆಲವು ದಿನಗಳಿಂದ ಭೂಮಿಕಾಳನ್ನು ಹುಡುಕಿದರೂ ಆಕೆ ಸಿಕ್ಕಿರೋದಿಲ್ಲ. ಕೊನೆಗೂ ಅವರಳು ಕಾಣಿಸುತ್ತಾಳೆ.
ಇದನ್ನೂ ಓದಿ:‘ಕರ್ಣ’ ಧಾರಾವಾಹಿ ಅಲ್ಲ; ಈ ಮೊದಲೇ ಆಗಿತ್ತು ಕಿರಣ್-ಭವ್ಯಾ ಭೇಟಿ
ಗೌತಮ್ ಭೂಮಿಕಾಗೆ ಗುಲಾಬಿ ಹೂವನ್ನು ಕಳುಹಿಸುತ್ತಾನೆ. ‘ಒಂದಾಗಿ ಜೀವನ ಮಾಡೋಕೆ ಸಾವಿರ ಕಾರಣಗಳು ಇದ್ದವಲ್ಲ’ ಎಂದು ಭೂಮಿಕಾಗೆ ಗೌತಮ್ ಹೇಳುತ್ತಾನೆ. ಇದಕ್ಕೆ ಭೂಮಿಕಾ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ. ಭೂಮಿಕಾ ಹಾಗೂ ಗೌತಮ್ ಹಾಯಾಗಿ ಜೀವನ ನಡೆಸಿಕೊಂಡಿದ್ದವರು ಈಗ ಬೇರೆ ಆಗಿದ್ದಾರೆ. ಮುಂದೆ ಇವರು ಮತ್ತೆ ಒಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಅತ್ತ ಜಯದೇವ್ ಕಂಪನಿಯಲ್ಲಿ 600 ಕೋಟಿ ರೂಪಾಯಿ ಸಾಲದ ವಿಚಾರ ಬೆಳಕಿಗೆ ಬಂದಿದೆ. ಈ ಹಣವನ್ನು ಜಯದೇವ್ ದುರ್ಬಳಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬ್ಯಾಂಕ್ನವರು ಹಣ ಹಿಂದಿರುಗಿಸುವಂತೆ ಕೋರಿದ್ದಾರೆ. ಇದಕ್ಕಾಗಿ ಜಯದೇವ್ ಸದ್ಯ ಗೌತಮ್ ಹುಡುಕಾಟದಲ್ಲಿ ಇದ್ದಾನೆ. ಈಗ ಆಸ್ತಿಯೆಲ್ಲ ಮರಳಿ ಸಿಗುತ್ತದೆಯೇ ಎನ್ನುವ ಕುತೂಹಲ ಮೂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ