ಬೆಡ್​ರೂಂನಲ್ಲಿ ಬ್ಲ್ಯಾಂಕೆಟ್ ಮುಚ್ಚಿಕೊಂಡು ಬಿಗ್ ಬಾಸ್​ ಸ್ಪರ್ಧಿಗಳ ಸರಸ; ವಿಡಿಯೋ ನೋಡಿ ನೆಟ್ಟಿಗರ ಛೀಮಾರಿ

ಬೆಡ್​ ಮೇಲೆ ಅಂಕಿತಾ ಹಾಗೂ ವಿಕ್ಕಿ ಮಲಗಿದ್ದರು. ನಂತರ ಬ್ಲ್ಯಾಂಕೆಟ್ ಮುಚ್ಚಿಕೊಂಡು ಹೊರಳಾಡಿದ್ದಾರೆ. ಒಳಗೆ ಏನು ನಡೆದಿರಬಹುದು ಎಂಬುದನ್ನು ನೆಟ್ಟಿಗರು ಊಹಿಸಿಕೊಂಡು ಟೀಕೆ ಮಾಡುತ್ತಿದ್ದಾರೆ.

ಬೆಡ್​ರೂಂನಲ್ಲಿ ಬ್ಲ್ಯಾಂಕೆಟ್ ಮುಚ್ಚಿಕೊಂಡು ಬಿಗ್ ಬಾಸ್​ ಸ್ಪರ್ಧಿಗಳ ಸರಸ; ವಿಡಿಯೋ ನೋಡಿ ನೆಟ್ಟಿಗರ ಛೀಮಾರಿ
ಅಂಕಿತಾ-ವಿಕ್ಕಿ

Updated on: Dec 28, 2023 | 7:29 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ವಿವಾದಗಳಿಗೆ ಕೊರತೆ ಇರುವುದಿಲ್ಲ. ಒಂದೊಲ್ಲಾ ಒಂದು ಕಾರಣಕ್ಕೆ ಈ ಶೋ ಸುದ್ದಿ ಆಗುತ್ತಲೇ ಇರುತ್ತದೆ. ಹಿಂದಿ ಬಿಗ್ ಬಾಸ್​​​ನಲ್ಲಂತೂ ಲೆಕ್ಕವಿಲ್ಲದಷ್ಟು ವಿವಾದಗಳು ಆಗುತ್ತವೆ. ಈಗ ವಿಕ್ಕಿ ಜೈನ್ ಹಾಗೂ ಅವರ ಪತ್ನಿ ಅಂಕಿತಾ ಲೋಖಂಡೆ ಬೆಡ್​ ಮೇಲೆ ಮಲಗಿ, ಬ್ಲ್ಯಾಂಕೆಟ್ ಮುಚ್ಚಿಕೊಂಡು ಸರಸ ಸಲ್ಲಾಪ ಆಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ಇದೆಂಥ ಫ್ಯಾಮಿಲಿ ಶೋ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಬಿಗ್ ಬಾಸ್​ಗೆ ವಿಕ್ಕಿ ಜೈನ್ ಹಾಗೂ ಅಂಕಿತಾ ಬಂದಾಗಿನಿಂದಲೂ ಸಾಕಷ್ಟು ಚರ್ಚೆ ಆಗುತ್ತಿದ್ದಾರೆ. ಇಬ್ಬರೂ ಒಂದಲ್ಲಾ ಒಂದು ವಿಚಾರಕ್ಕೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇವರು ವಿಚ್ಛೇದನ ತೆಗೆದುಕೊಳ್ಳುವ ವಿಚಾರವನ್ನೂ ಮಾತನಾಡಿದ್ದಿದೆ. ಇದನ್ನು ನೋಡಿ ಕೆಲವರಿಗೆ ಶಾಕ್ ಆಗಿತ್ತು. ಈಗ ಅವರು ನಡೆದುಕೊಂಡ ರೀತಿ ಮತ್ತಷ್ಟು ಶಾಕ್ ತಂದಿದೆ.

ಬೆಡ್​ ಮೇಲೆ ಅಂಕಿತಾ ಹಾಗೂ ವಿಕ್ಕಿ ಮಲಗಿದ್ದರು. ನಂತರ ಬ್ಲ್ಯಾಂಕೆಟ್ ಮುಚ್ಚಿಕೊಂಡು ಹೊರಳಾಡಿದ್ದಾರೆ. ಒಳಗೆ ಏನು ನಡೆದಿರಬಹುದು ಎಂಬುದನ್ನು ನೆಟ್ಟಿಗರು ಊಹಿಸಿಕೊಂಡು ಟೀಕೆ ಮಾಡುತ್ತಿದ್ದಾರೆ. ತಾವು ಕ್ಯಾಮೆರಾ ಕಣ್ಗಾವಲಲ್ಲಿ ಇದ್ದೇವೆ ಎಂಬುದನ್ನೇ ಮರೆಯುವುದು ಎಷ್ಟು ಸರಿ ಎಂದು ಅನೇಕರು ಛೀಮಾರಿ ಹಾಕಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ಪತಿ-ಪತ್ನಿ ಸಂಬಂಧ; ಅಂಕಿತಾ ಕೆನ್ನೆಗೆ ಹೊಡೆಯಲು ಹೋದ ವಿಕ್ಕಿ

ಬಿಗ್ ಬಾಸ್ ಫ್ಯಾಮಿಲಿ ಶೋ ಎಂದು ಹಿಂದಿ ಕಲರ್ಸ್ ವಾಹಿನಿ ಹೇಳಿಕೊಳ್ಳುತ್ತಲೇ ಬರುತ್ತಿದೆ. ಆದರೆ, ಕೆಲವೊಮ್ಮೆ ಶೋನಲ್ಲಿ ನಡೆಯುವ ಘಟನೆಗಳು ಎಲ್ಲೆ ಮೀರಿ ಇರುತ್ತವೆ. ಈ ರೀತಿಯ ಕಂಟೆಂಟ್​ಗಳು ಇದ್ದರೆ ಶೋ ಒಳ್ಳೆಯ ಟಿಆರ್​ಪಿ ಪಡೆಯುತ್ತದೆ ಅನ್ನೋದು ಕೆಲವರ ನಂಬಿಕೆ. ಈ ಕಾರಣದಿಂದಲೇ ಈ ರೀತಿಯ ಅಂಶಗಳನ್ನು ಸೇರಿಸಲಾಗುತ್ತದೆ ಎಂದು ವೀಕ್ಷಕರು ಆರೋಪಿಸಿದ್ದಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಪತ್ನಿ ಕೊಟ್ಟ ಮಾತಿನ ಪೆಟ್ಟಿಗೆ ಕಂಗಾಲಾದ ತುಕಾಲಿ ಸಂತೋಷ್

ವಿಕ್ಕಿ ಅವರು ಸ್ವಂತ ಉದ್ಯಮ ಹೊಂದಿದ್ದಾರೆ. ಅಂಕಿತಾ ಅವರು ಕಿರುತೆರೆ ಮೂಲಕ ಗುರುತಿಸಿಕೊಂಡಿದ್ದಾರೆ. ಅವರು ಈ ಮೊದಲು ಸುಶಾಂತ್ ಸಿಂಗ್ ರಜಪೂತ್ ಜೊತೆ ಪ್ರೀತಿಯಲ್ಲಿದ್ದರು. ಐದು ವರ್ಷಗಳ ಕಾಲ ಇಬ್ಬರೂ ಡೇಟಿಂಗ್ ಮಾಡಿದರು. ಆ ಬಳಿಕ ಇವರದ್ದು ಬ್ರೇಕಪ್ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:06 am, Thu, 28 December 23