ಬಿಗ್ ಬಾಸ್ ಎಂದರೆ ಹಲವು ಕಿರಿಕ್ಗಳು ಇದ್ದಿದ್ದೇ. ಎಷ್ಟೇ ಆಪ್ತರಾಗಿದ್ದರೂ ಕೂಡ ದೊಡ್ಮನೆಯಲ್ಲಿ ಗಲಾಟೆಗಳು ಸಹಜ. ಗಂಡ-ಹೆಂಡತಿ ಜೊತೆಯಾಗಿ ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಸಿದರೂ ಸಹ ಕಿತ್ತಾಟ ತಪ್ಪಿಸಲು ಸಾಧ್ಯವಿಲ್ಲ. ಅದಕ್ಕೆ ಬೆಸ್ಟ್ ಉದಾಹರಣೆ ಎಂದರೆ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ (Vicky Jain). ಬಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ಇವರಿಬ್ಬರು ‘ಬಿಗ್ ಬಾಸ್ ಹಿಂದಿ ಸೀಸನ್ 17’ ಶೋನಲ್ಲಿ ಭಾಗವಹಿಸಿದ್ದಾರೆ. ಹೊರಜಗತ್ತಿನಲ್ಲಿ ತುಂಬ ಚೆನ್ನಾಗಿ ಇದ್ದ ಈ ದಂಪತಿಯು ದೊಡ್ಮನೆಗೆ ಬಂದ ಬಳಿಕ ಬದ್ಧ ವೈರಿಗಳಂತೆ ಜಗಳ ಮಾಡಿಕೊಳ್ಳುತ್ತಿದ್ದಾರೆ. ಗಂಡನಿಗೆ ಅಂಕಿತಾ ಲೋಖಂಡೆ (Ankita Lokhande) ಅವರು ಚಪ್ಪಲಿಯಲ್ಲಿ ಹೊಡೆದಿದ್ದಾರೆ.
ಊಟದ ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ನಡೆಯುತ್ತಿತ್ತು. ವಿಕ್ಕಿ ಜೈನ್ ಹೇಳಿದ ಮಾತುಗಳು ಅಂಕಿತಾ ಲೋಖಂಡೆ ಅವರಿಗೆ ಇಷ್ಟ ಆಗಲಿಲ್ಲ. ಅದನ್ನು ಅವರು ವಿರೋಧಿಸಿದರು. ಜಗಳ ಇನ್ನೊಂದು ಹಂತಕ್ಕೆ ಹೋದಾಗ ಅಂಕಿತಾ ಲೋಖಂಡೆ ಅವರು ತಾಳ್ಮೆ ಕಳೆದುಕೊಂಡರು. ಗಂಡನಿಗೆ ಅವರು ಚಪ್ಪಲಿ ಬೀಸಿ ಹೊಡೆದರು. ವಿಕ್ಕಿ ಜೈನ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕೂಡ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಇವರಿಬ್ಬರ ಸಂಬಂಧ ಇನ್ನಷ್ಟು ಕೆಟ್ಟು ಹೋಗಲಿದೆ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.
Mujhe yeh vali fight dekhni hain
Serious vali nahibolna mat chappal maari 😂
Kyuki yeh bohot Masti vala tha jaise bestfriends ek dooshre ko maarte hainEk gala daba raha ek chapal 😂😂🤣
Ankita is in muanku mood#ankitalokhande #vickyjain #biggboss17 #munawarfaruqui pic.twitter.com/zbtRESokWN
— Ankitalokhande (fan) (@Ankitafam) November 19, 2023
ಹೆಂಡತಿಯಿಂದ ಚಪ್ಪಲಿ ಏಟು ತಿಂದರೂ ಕೂಡ ವಿಕ್ಕಿ ಜೈನ್ ಅವರು ಕೂಲ್ ಆಗಿ ವರ್ತಿಸಿದ್ದಾರೆ. ಆ ಕ್ಷಣವನ್ನು ಅವರು ತುಂಬ ತಮಾಷೆಯಾಗಿ ಸ್ವೀಕರಿಸಿದ್ದಾರೆ. ‘ಹೆಂಡತಿ ತುಂಬಾ ದುಬಾರಿ ಚಪ್ಪಲಿಯಲ್ಲಿ ಹೊಡೆದಿದ್ದಾಳೆ’ ಎಂದು ಜೋಕ್ ಮಾಡುತ್ತಾ, ವಾತಾವರಣವನ್ನು ತಿಳಿಗೊಳಿಸಲು ಅವರು ಪ್ರಯತ್ನಿಸಿದ್ದಾರೆ. ಹಾಗಿದ್ದರೂ ಕೂಡ ಅಂಕಿತಾ ಲೋಖಂಡೆ ಅವರು ನಡೆದುಕೊಂಡ ರೀತಿ ನೋಡಿ ಇನ್ನುಳಿದ ಸ್ಪರ್ಧಿಗಳಿಗೆ ಅಚ್ಚರಿ ಆಗಿದೆ. ಈ ಮೊದಲಿನ ಎಪಿಸೋಡ್ಗಳಲ್ಲೂ ಕೂಡ ಗಂಡನ ಬಗ್ಗೆ ಅಂಕಿತಾ ಅವರು ಹಲವು ಆರೋಪಗಳನ್ನು ಮಾಡಿದ್ದರು.
ಇದನ್ನೂ ಓದಿ: ಸಂಗೀತಾ ದುಡುಕಿನ ನಿರ್ಧಾರ; ಕಾರ್ತಿಕ್ ಜತೆಗಿನ ಕಿರಿಕ್ ಬಳಿಕ ಬಿಗ್ ಬಾಸ್ ಮನೆಯಿಂದ ಔಟ್?
ಹಿಂದಿ ಕಿರುತೆರೆಯ ಮೂಲಕ ಅಂಕಿತಾ ಲೋಖಂಡೆ ಗುರುತಿಸಿಕೊಂಡರು. ಸುಶಾಂತ್ ಸಿಂಗ್ ರಜಪೂತ್ ಜೊತೆ ಅವರು ‘ಪವಿತ್ರಾ ರಿಷ್ತಾ’ ಸೀರಿಯಲ್ನಲ್ಲಿ ನಟಿಸಿದ್ದರು. ಇಬ್ಬರ ನಡುವೆ ನಿಜ ಜೀವನದಲ್ಲೂ ಪ್ರೀತಿ ಮೂಡಿತ್ತು. ಆದರೆ ಒಂದಷ್ಟು ವರ್ಷಗಳ ಬಳಿಕ ಅಂಕಿತಾ ಲೋಖಂಡೆ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರು ಬ್ರೇಕಪ್ ಮಾಡಿಕೊಂಡರು. ಆ ನಂತರ ಸುಶಾಂತ್ ಅವರು ರಿಯಾ ಚರ್ಕವರ್ತಿ ಜೊತೆ ಪ್ರೀತಿಯಲ್ಲಿ ಮುಳುಗಿದರು. ಅಂಕಿತಾ ಅವರು ವಿಕ್ಕಿ ಜೈನ್ ಜೊತೆ ಮದುವೆಯಾದರು. ಈಗ ಇವರಿಬ್ಬರು ಬಿಗ್ ಬಾಸ್ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.