ವಿಚ್ಛೇದನ ಪಡೆಯಬೇಕಿದ್ದ ನಟಿ ಈಗ ಪ್ರೆಗ್ನೆಂಟ್; ಆದರೆ, ಪತಿಗೆ ಗೊತ್ತಿಲ್ಲ ಮಗುವಿನ ವಿಚಾರ

ಹಿಂದಿ ಕಿರುತೆರೆ ನಟಿ ಅಂಕಿತಾ ಲೋಖಂಡೆ ಮತ್ತು ಉದ್ಯಮಿ ವಿಕ್ಕಿ ಜೈನ್ ವಿಚ್ಛೇದನದ ಅಂಚಿನಲ್ಲಿದ್ದರು. ಆದರೆ, ‘ಲಾಫ್ಟರ್ ಶೆಫ್ಸ್ ಸೀಸನ್ 2’ ಶೋನಲ್ಲಿ ಅಂಕಿತಾ ತಾನು ಗರ್ಭಿಣಿ ಎಂದು ಘೋಷಿಸಿದ್ದಾರೆ. ಆದರೆ, ಈ ವಿಷಯ ಪತಿ ವಿಕ್ಕಿಗೆ ಗೊತ್ತಿಲ್ಲ ಎಂಬುದು ಆಶ್ಚರ್ಯಕರ ಸಂಗತಿ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವಿಚ್ಛೇದನ ಪಡೆಯಬೇಕಿದ್ದ ನಟಿ ಈಗ ಪ್ರೆಗ್ನೆಂಟ್; ಆದರೆ, ಪತಿಗೆ ಗೊತ್ತಿಲ್ಲ ಮಗುವಿನ ವಿಚಾರ
ಅಂಕಿತಾ-ವಿಕ್ಕಿ

Updated on: Jun 27, 2025 | 3:03 PM

ಚಿತ್ರರಂಗದಲ್ಲಿ ಏನೆಲ್ಲ ನಡೆಯುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಇಲ್ಲಿ ವಿಚ್ಛೇದನ, ಲವ್ ಅಫೇರ್ ತುಂಬಾನೇ ಸಾಮಾನ್ಯ. ಆದರೆ, ಈಗ ಒಂದು ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ವಿಚ್ಛೇದನ ತೆಗೆದುಕೊಂಡು ಬಿಡುತ್ತಾರೆ ಎಂಬಂತಿದ್ದ ಹಿಂದಿ ಕಿರುತೆರೆ ನಟಿ ಅಂಕಿತಾ ಲೋಖಂಡೆ ಹಾಗೂ ಉದ್ಯಮಿ ವಿಕ್ಕಿ ಜೈನ್ (Vicky Jain) ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಶಾಕಿಂಗ್ ವಿಚಾರ ಏನೆಂದರೆ ಈ ವಿಚಾರ ಪತಿಗೆ ಗೊತ್ತೇ ಇಲ್ಲವಂತೆ! ಈ ಅಚ್ಚರಿಯ ಘಟನೆ ನಡೆದಿದ್ದು ‘ಲಾಫ್ಟರ್ ಶೆಫ್ಸ್ ಸೀಸನ್ 2’ನಲ್ಲಿ. ಇದರ ಪ್ರೋಮೋನ ಕಲರ್ಸ್​ ಟಿವಿ (ಹಿಂದಿ) ಹಂಚಿಕೊಂಡಿದೆ.

ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೈನ್ 2021ರಲ್ಲಿ ವಿವಾಹ ಆದರು. ಈ ಮೊದಲು ಅವರು ಬಿಗ್ ಬಾಸ್​ಗೆ ಬಂದಿದ್ದರು. ಈ ವೇಳೆ ಇಬ್ಬರೂ ಸಾಕಷ್ಟು ಬಾರಿ ಕಿತ್ತಾಡಿಕೊಂಡಿದ್ದರು. ಪತ್ನಿಯನ್ನು ವಿಕ್ಕಿ ಸಾಕಷ್ಟು ನಿಂದಿಸುತ್ತಿದ್ದರು. ಇಬ್ಬರೂ ವಿಚ್ಛೇದನ ತೆಗೆದುಕೊಳ್ಳುತ್ತಾರೆ ಎಂಬ ಹಂತದವರೆಗೆ ಹೋಗಿತ್ತು. ಆದರೆ, ಈಗ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಇವರು ಕುಕಿಂಗ್ ಶೋಗೆ ಬಂದಿದ್ದಾರೆ.

ಇದನ್ನೂ ಓದಿ
ಡ್ರಗ್ಸ್ ತೆಗೆದುಕೊಳ್ಳೋ ಕಲಾವಿದರು ಇನ್ಮುಂದೆ ಚಿತ್ರರಂಗದಿಂದ ಬ್ಯಾನ್
ನಿಧನ ಹೊಂದುವ ಹಿಂದಿನ ದಿನ ಸಾಯುವ ದೃಶ್ಯವನ್ನೇ ಶೂಟ್ ಮಾಡಿದ್ದ ಶಂಕರ್ ನಾಗ್
ಡ್ರಗ್ ಕೇಸ್​ನಲ್ಲಿ ಮತ್ತೋರ್ವ ಹೀರೋ ಅರೆಸ್ಟ್; ಬೆಳೆಯುತ್ತಲೇ ಇದೆ ಪಟ್ಟಿ
‘ಆರ್ಯನ್ ಯಾವಾಗಲೂ ನಾನು ಮುಸ್ಲಿಂ ಎಂದೇ ಹೇಳುತ್ತಾನೆ’; ಗೌರಿ ಖಾನ್

ಶೋನ ಆ್ಯಂಕರ್ ಕೃಷ್ಣ ಅಭಿಷೇಕ್ ಅವರು ಅಂಕಿತಾ ಲೋಖಂಡೆ ಬಳಿಯಿಂದ ಒಂದು ಪದಾರ್ಥವನ್ನು ಕಸಿದುಕೊಂಡು ಓಡಿದರು. ಇದರಿಂದ ಅಂಕಿತಾ ಸಾಕಷ್ಟು ಓಡಬೇಕಾಯಿತು. ಈ ವೇಳೆ ‘ನಾನು ಪ್ರೆಗ್ನೆಂಟ್’ ಎಂದು ಅಂಕಿತಾ ಹೇಳಿದರು. ಇದರಿಂದ ಎಲ್ಲರೂ ಶಾಕ್​ಗೆ ಒಳಗಾದರು.

‘ಗಂಡು ಮಗು ಬರಲಿದೆ’ ಎಂದು ಜೋಕ್ ಮಾಡಿದರು ಕೃಷ್ಣ ಅಭಿಷೇಕ್. ಈ ವೇಳೆ ಅಲ್ಲಿಗೆ ಬಂದ ಕರಣ್ ಕುಂದ್ರಾ ‘ನೀವು ನಿಜಕ್ಕೂ ಪ್ರೆಗ್ನೆಂಟಾ’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕೆಲವರು ನಟಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನೂ ಕೆಲವರು ‘ಟಿಆರ್​ಪಿಗೋಸ್ಕರ ಸುಳ್ಳು ಹೇಳಬೇಡಿ’ ಎಂದಿದ್ದಾರೆ. ಅಂಕಿತಾ ಸುಳ್ಳು ಹೇಳುತ್ತಿರುವುದು ಸ್ಪಷ್ಟವಾಗಿದೆ. ಹೀಗಾಗಿ, ‘ಮಗುವಿನ ವಿಚಾರ ನಿಮ್ಮ ಪತಿಗೆ ಗೊತ್ತಿಲ್ಲ ಅನಿಸುತ್ತದೆ ಅಲ್ಲವೇ’ ಎಂದು ಕೆಲವರು ಹೇಳಿದ್ದಾರೆ. ಶೋನಲ್ಲಿ ವಿಕ್ಕಿ ಕೂಡ ಇದ್ದರು. ಆದರೆ, ಅವರು ಮೌನವಹಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ಪತಿ-ಪತ್ನಿ ಸಂಬಂಧ; ಅಂಕಿತಾ ಕೆನ್ನೆಗೆ ಹೊಡೆಯಲು ಹೋದ ವಿಕ್ಕಿ

ಅಂಕಿತಾ ಹಾಗೂ ವಿಕ್ಕಿ ಜೈನ್ 2021ರಲ್ಲಿ ವಿವಾಹ ಆದರು. ‘ಪವಿತ್ರ ರಿಷ್ತಾ’ ಹಾಗೂ ಮಣಿಕರ್ಣಿಕಾ’ ಪ್ರಾಜೆಕ್ಟ್​ಗಳಲ್ಲಿ ಕಾಣಿಸಿಕೊಂಡಿದ್ದರು. ಈ ಮೊದಲು ಅಂಕಿತಾ ಅವರು ಪತಿಯ ಜೊತೆ ಸೇರಿ ಸಮಾಲೋಚನೆಗೆ ಒಳಪಡಲು ನಿರ್ಧರಿಸಿದ್ದರು. ಆದರೆ, ಇದಕ್ಕೆ ವಿಕ್ಕಿ ಸಿದ್ಧರಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:39 am, Fri, 27 June 25