ಕಲರ್ಸ್ ಕನ್ನಡ ವಾಹಿನಿ ಸಾಕಷ್ಟು ಹೆಸರು ಮಾಡಿದೆ. ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿದ ಖ್ಯಾತಿ ಈ ವಾಹಿನಿಗೆ ಸಲ್ಲಿಕೆ ಆಗುತ್ತದೆ. ಸದ್ಯ ಕಲರ್ಸ್ ಕನ್ನಡದಲ್ಲಿ ಹಲವು ಒಳ್ಳೊಳ್ಳೆಯ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಧಾರಾವಾಹಿಗಳಲ್ಲಿ ನಟಿಸಿದ ಎಲ್ಲರಿಗೂ ಒಂದು ಕುಟುಂಬದ ಭಾವನೆ ಮೂಡಿದೆ. ಈ ಭಾವನೆಯನ್ನು ಮತ್ತಷ್ಟು ಗಟ್ಟಿ ಮಾಡುವ ಉದ್ದೇಶದಿಂದ ಆರಂಭವಾಗಿದ್ದೇ ‘ಅನುಬಂಧ ಅವಾರ್ಡ್ಸ್’ (Anubandha Awards) ಕಾರ್ಯಕ್ರಮ. ಈ ಅವಾರ್ಡ್ಸ್ಗೆ ಈಗ 10 ವರ್ಷಗಳ ಸಂಭ್ರಮ. ದಶಕಗಳ ಕಾಲ ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ವಾಹಿನಿ ನಡೆದುಕೊಂಡು ಬಂದಿದೆ.
ಸಿನಿಮಾ ಜಗತ್ತು ಸಾಕಷ್ಟು ವಿಸ್ತಾರವಾಗಿದೆ. ಅಲ್ಲಿ ಪ್ರತಿ ವರ್ಷ ಅವಾರ್ಡ್ಗಳನ್ನು ನೀಡಲಾಗುತ್ತದೆ. ಅದೇ ರೀತಿ ಕಿರುತೆರೆ ಜಗತ್ತು ಕೂಡ ವಿಸ್ತಾರವಾಗಿ ಬೆಳೆದಿದೆ. ಕಲರ್ಸ್ ಕನ್ನಡ ವಾಹಿನಿ ದಶಕಗಳ ಹಿಂದೆ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮ ಆರಂಭಿಸಿತು. ಈ ವಾಹಿನಿಯಲ್ಲಿ ಪ್ರಸಾರ ಕಾಣುವ ಎಲ್ಲಾ ಧಾರಾವಾಹಿಗಳನ್ನು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ.
ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಅತ್ತೆ, ಅತ್ಯುತ್ತಮ ಸೊಸೆ, ಅತ್ಯುತ್ತಮ ವಿಲನ್ ಹೀಗೆ ಹಲವು ವಿಭಾಗಗಳನ್ನು ಮಾಡಲಾಗಿದೆ. ಮೊದಲು ನಾಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. ಆ ಬಳಿಕ ವೋಟ್ ಮಾಡೋಕೆ ಅವಕಾಶ ಇರುತ್ತದೆ. ನಂತರ ಅವಾರ್ಡ್ ಫಂಕ್ಷನ್ ದಿನ ವಿನ್ನರ್ಗಳ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ.
10 ವರ್ಷ ಅನ್ನೋದು ಪ್ರಮುಖ ಮೈಲಿಗಲ್ಲು ಎಂದು ಅನೇಕರು ಪರಿಗಣಿಸಿದ್ದಾರೆ. ಈ ಕಾರಣಕ್ಕೆ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮ ಈ ಬಾರಿ ಸಖತ್ ಅದ್ದೂರಿಯಾಗಿ ನೆರವೇರಲಿದೆ ಎಂದು ತಿಳಿದು ಬಂದಿದೆ. ಸದ್ಯ ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋ ಹಂಚಿಕೊಂಡಿದೆ. ‘10 ವರ್ಷಗಳ ಅನುಬಂಧ. ಅನುಬಂಧ ಅವಾರ್ಡ್ಸ್- 2023’ ಎಂದು ಪ್ರೋಮೋಗೆ ಕ್ಯಾಪ್ಶನ್ ನೀಡಲಾಗಿದೆ. ಈ ಕಾರ್ಯಕ್ರಮ ಯಾವಾಗ ನಡೆಯಲಿದೆ ಎಂಬ ಮಾಹಿತಿಯನ್ನು ವಾಹಿನಿಯವರು ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: Megha Shetty: ಕಲರ್ಸ್ ಕನ್ನಡದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಮೇಘಾ ಶೆಟ್ಟಿ
ಕಲರ್ಸ್ ಕನ್ನಡದಲ್ಲಿ ‘ಭಾಗ್ಯಲಕ್ಷ್ಮೀ’ ಹಾಗೂ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಗಳು ಗಮನ ಸೆಳೆಯುತ್ತಿವೆ. ‘ಕುಸುಮಾಗೆ ಅತ್ಯುತ್ತಮ ಅತ್ತೆ ಹಾಗೂ ಭಾಗ್ಯನಿಗೆ ಅತ್ಯುತ್ತಮ ಸೊಸೆ ಪ್ರಶಸ್ತಿ ಸಿಗೋದು ಪಕ್ಕಾ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ‘ಕನ್ನಡತಿ’ ಧಾರಾವಾಹಿ ಪೂರ್ಣಗೊಂಡಿದೆ. ಹರ್ಷ ಹಾಗೂ ಭುವಿ ಕಾಂಬಿನೇಷನ್ನ ಜನರು ಇಷ್ಟಪಟ್ಟಿದ್ದರು. ಈ ಬಾರಿ ಅವರು ಅವಾರ್ಡ್ ಕಾರ್ಯಕ್ರಮದಲ್ಲಿ ಇರುವುದಿಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿದೆ. ‘ಮಿಸ್ ಯೂ ಭುವಿ’ ಎಂಬ ಕಮೆಂಟ್ಗಳು ಬಂದಿವೆ. ‘ಗಿಣಿ ರಾಮ’ ಜೋಡಿಯನ್ನು ಕೆಲವರು ಮಿಸ್ ಮಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ