ಆ್ಯಂಕರಿಂಗ್​ಗೆ ಗುಡ್​ ಬೈ ಹೇಳಿದ ಅನುಪಮಾ ಗೌಡ; ಕಾರಣ ಕೊಟ್ಟ ನಟಿ

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಮತ್ತು ನಟಿ ಅನುಪಮಾ ಗೌಡ ಆ್ಯಂಕರಿಂಗ್‌ಗೆ ಹಠಾತ್ ವಿದಾಯ ಹೇಳಿದ್ದಾರೆ. ವಾಹಿನಿಯ ಕೆಲವು ಪ್ರಾಮಿಸ್‌ಗಳು ಈ ನಿರ್ಧಾರಕ್ಕೆ ಮುಖ್ಯ ಕಾರಣವಾಗಿವೆ. ತಮ್ಮ ಕೊನೆಯ ಶೋ ಅರ್ಧಕ್ಕೆ ನಿಂತ ಬೇಸರದಲ್ಲಿದ್ದಾರೆ. ಅಭಿಮಾನಿಗಳು ಅವರ ಮುಂದಿನ ಪ್ರಯಾಣಕ್ಕೆ ಶುಭ ಹಾರೈಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಟನೆಯತ್ತ ಹೆಚ್ಚು ಗಮನ ಹರಿಸುವ ಸುಳಿವು ಕೊಟ್ಟಿದ್ದಾರೆ.

ಆ್ಯಂಕರಿಂಗ್​ಗೆ ಗುಡ್​ ಬೈ ಹೇಳಿದ ಅನುಪಮಾ ಗೌಡ; ಕಾರಣ ಕೊಟ್ಟ ನಟಿ
ಅನುಪಮಾ ಗೌಡ
Image Credit source: Parashu Films

Updated on: Aug 18, 2026 | 7:08 AM

ಮುಖ್ಯಾಂಶಗಳು

  • ಆ್ಯಂಕರಿಂಗ್ ಅಖಾಡಕ್ಕೆ ಗುಡ್‌ಬೈ: ಹಠಾತ್ ನಿರ್ಧಾರಕ್ಕೆ ಕಾರಣವೇನು?
  • ಕೊನೆಯ ಶೋ ಅಪೂರ್ಣ: ಸೋಶಿಯಲ್ ಮೀಡಿಯಾದಲ್ಲಿ ಭಾವುಕರಾದ ನಟಿ
  • ಬಾಲನಟಿಯಿಂದ ಪ್ರಸಿದ್ಧ ನಿರೂಪಕಿಯವರೆಗೆ: ಸವಾಲುಗಳ ಪಯಣ

ನಟಿ ಅನುಪಮಾ ಗೌಡ ಅವರು (Anupama Gowda) ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಗಮನ ಸೆಳೆದವರು. ಅವರು ಸೋಶಿಯಲ್ ಮೀಡಿಯಾದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಆ್ಯಂಕರಿಂಗ್ ಕೂಡ ಮಾಡುತ್ತಿದ್ದರು. ಕಲರ್ಸ್ ಕನ್ನಡದಲ್ಲಿ ಹಲವು ಶೋಗಳನ್ನು ಅವರು ಹೋಸ್ಟ್ ಮಾಡಿದ್ದರು. ಆದರೆ, ಈಗ ಅವರು ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಅನಿವಾರ್ಯವಾಗಿ ಆ್ಯಂಕರಿಂಗ್​ಗೆ ಗುಡ್​ಬೈ ಹೇಳುವ ಕೆಲಸ ಮಾಡಿದ್ದಾರೆ. ಈ ವಿಷಯದಲ್ಲಿ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಅವರು ನಿರ್ಧಾರ ಬದಲಿಸಬೇಕು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಮುಂದಿನ ಜರ್ನಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಅರ್ಧಕ್ಕೆ ನಿಂತ ಕಿರುತೆರೆ ಪಯಣ

‘ಮಜಾ ಭಾರತ್​’, ‘ಕನ್ನಡ ಕೋಗಿಲೆ’, ‘ರಾಜಾ ರಾಣಿ’, ‘ನಮ್ಮಮ್ಮ ಸೂಪರ್ ಸ್ಟಾರ್’, ‘ಸುವರ್ಣ ಸೂಪರ್​ಸ್ಟಾರ್ಸ್’, ‘ಸುವರ್ಣ ಜ್ಯಾಕ್​ಪಾಟ್’, ‘ಗರ್ಲ್ಸ್ vs ಬಾಯ್ಸ್’, ‘ಕ್ವಾಟ್ಲೆ ಕಿಚನ್’ ಶೋಗಳನ್ನು ಅವರು ಹೋಸ್ಟ್ ಮಾಡಿದ್ದಾರೆ. ಕೊನೆಯ ಶೋ ಅನ್ನು ಅವರಿಗೆ ಪೂರ್ಣವಾಗಿ ಮುಗಿಸುವ ಅವಕಾಶವೂ ಸಿಕ್ಕಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿದೆ.

YouTube video player

ಸೋಶಿಯಲ್ ಮೀಡಿಯಾದಲ್ಲಿ ಅನುಪಮಾ ಭಾವುಕ ಮಾತು

ವಿಡಿಯೋದಲ್ಲಿ ಅವರು ತಮ್ಮ ಆ್ಯಂಕರಿಂಗ್ ಜರ್ನಿ ನೆನೆದಿದ್ದಾರೆ. ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ‘ನಾನು ನಿಮ್ಮೆಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಹೊಸ ಶೋನಲ್ಲಿ ನಾನು ಇರಬೇಕಿತ್ತು. ಆದರೆ, ಇಲ್ಲ. ವಾಹಿನಿಯವರು ಏನೇನೋ ಪ್ರಾಮಿಸ್ ಮಾಡಿಕೊಂಡಿದ್ದಾರೆ. ಅದೇನು ಎಂಬುದು ನಾನು ಮಾಡಿಲ್ಲ. ಅಪೂರ್ಣವಾಗಿ ಈ ಪ್ರಯಾಣ ಕೊನೆ ಮಾಡುತ್ತಿದ್ದೇನೆ. ನೀವೆಲ್ಲ ಸಾಕಮ್ಮ ಎನ್ನುವುದರೊಳಗೆ ನಾನೇ ಆ್ಯಂಕರಿಂಗ್ ಮುಗಿಸಿದ್ದೇನೆ’ ಎಂದಿದ್ದಾರೆ ಅನುಪಮಾ. ‘ಸೀರಿಯಲ್​ಗೆ ಮತ್ತೆ ಬರುತ್ತೇನೋ ಇಲ್ಲವೋ ಎಂಬುದು ಗೊತ್ತಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಅನುಪಮಾ ಗೌಡ ಎದುರು ಹುಡುಗಿ ವಿಚಾರಕ್ಕೆ ನಾಚಿ ನೀರಾದ ರಾಜ್ ಬಿ ಶೆಟ್ಟಿ

ಅನುಪಮಾ ಗೌಡ ಜರ್ನಿ

2003ರಲ್ಲಿ ರಿಲೀಸ್ ಆದ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಬಾಲನಟಿಯಾಗಿ ಅನುಪಮಾ ಗಮನ ಸೆಳೆದರು. ಆ ಬಳಿಕ 2014ರಲ್ಲಿ ರಿಲೀಸ್ ಆದ ‘ಅಕ್ಕ’ ಧಾರಾವಾಹಿ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಈ ಧಾರಾವಾಹಿಯಲ್ಲಿ ಅವರು ದ್ವಿಪಾತ್ರದಲ್ಲಿ ಮಿಂಚಿದ್ದರು. ಇದು ಅವರಿಗೆ ದೊಡ್ಡ ಸವಾಲಾಗಿತ್ತು. 2017-18ರಲ್ಲಿ ಬಿಗ್ ಬಾಸ್​ನಲ್ಲಿ ಸ್ಪರ್ಧೆ ಮಾಡಿದರು. ಅವರು ಕೆಲವು ಸಿನಿಮಾ ಕೂಡ ಮಾಡಿದ್ದು, ರಾಜ್ಯ ಪ್ರಶಸ್ತಿ ಗೆದ್ದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Loading...
Unable to load recommendations.
Follow Us