
ಅನುಪಮಾ ಗೌಡ (Anupama Gowda) ಬಣ್ಣದ ಲೋಕದಲ್ಲಿ ಗಮನ ಸೆಳೆದಿದ್ದಾರೆ. ಅವರು ಎರಡು ಬಾರಿ ಬಿಗ್ ಬಾಸ್ಗೂ ಕಾಲಿಟ್ಟಿದ್ದರು. ಅವರು ಮಾಧ್ಯಮಗಳ ಎದುರು ಬಂದಾಗ ವೈಯಕ್ತಿಕ ಜೀವನಗಳ ಬಗ್ಗೆ ಮಾತನಾಡಿದ್ದು ಕಡಿಮೆ. ಈಗ ಅನುಪಮಾ ಗೌಡ ತಮ್ಮ ಬ್ರೇಕಪ್ ಸ್ಟೋರಿ ರಿವೀಲ್ ಮಾಡಿದ್ದಾರೆ. ‘ರಾಜೇಶ್ ಗೌಡ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಬ್ರೇಕಪ್ ಯಾಕೆ ಆಯಿತು ಮತ್ತು ಅದಕ್ಕೆ ಕಾರಣ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ. ಆದರೆ, ಹುಡುಗನ ಹೆಸರನ್ನು ಅವರು ಎಲ್ಲಿಯೂ ಹೇಳಿಲ್ಲ.
‘ಅಕ್ಕ ಧಾರಾವಾಹಿ ಮಾಡುತ್ತಿದ್ದೆ. ನನ್ನದು ದ್ವಿಪಾತ್ರ ಆಗಿತ್ತು. ನೆಗೆಟಿವ್ ಪಾತ್ರ ತುಂಬಾನೇ ಟಾಕ್ಸಿಕ್ ಆಗಿತ್ತು. ರಿಯಲ್ ಲೈಫ್ನಲ್ಲೂ ಹಾಗೆಯೇ ಆಡುತ್ತಿದ್ದೆ. ಗಲಾಟೆ ಜಾಸ್ತಿ ಆಯ್ತು. ಕಳೆದುಕೊಂಡು ಬಿಡ್ತೀನಿ ಎಂಬ ಭಯದಲ್ಲಿ ಹೇಗೇಗೋ ಆಡ್ತಾ ಇದ್ದೆ. ಎರಡೂ ಕಡೆಗಳಲ್ಲೂ ಹಾಗೆಯೇ ಇತ್ತು. ಒಂದೇ ಇಂಡಸ್ಟ್ರಿಯವರಿಗೆ ಸೆಟ್ ಆಗಲ್ಲ ಎಂಬುದೂ ಇರಬಹುದು. ನೆಗೆಟಿವ್ ಆಗೋಕೆ ಶುರುವಾಯ್ತು. ಒಬ್ಬರು ಕಿರುಚಿ, ಒಬ್ಬರು ಸುಮ್ಮನಿದ್ದರೆ ಸಂಬಂಧ ಸರಿದೂಗುತ್ತದೆ. ಆದರೆ, ಎರಡೂ ಕಡೆ ಹಾಗೆಯೇ ಇದ್ದಾಗ ಸಂಬಂಧ ಹಾಳಾಗುತ್ತದೆ’ ಎಂದಿದ್ದಾರೆ ಅನುಪಮಾ ಗೌಡ.
‘ಸಂಬಂಧ ಹೆಂಗೆ ಕೊನೆ ಆಯ್ತು ಅನ್ನೋದು ಗೊತ್ತಾಗಲಿಲ್ಲ. ಎಷ್ಟೋ ಗಲಾಟೆ ಆಗುತ್ತಿತ್ತು. ಮತ್ತೆ ಸರಿ ಆಗುತ್ತಿತ್ತು. ತುಂಬಾನೇ ಕಾಳಜಿ ವಹಿಸುತ್ತಿದ್ದ ವ್ಯಕ್ತಿ. ಡೇಟ್ಸ್ ಇರಲಿಲ್ಲ, ಧಾರಾವಾಹಿ, ಆರ್ಥಿಕ ಸಮಸ್ಯೆ ಇಂದ ಹೀಗೆ ಆಯ್ತು. ಈಗ ತಿರುಗಿ ನೋಡಿದ್ರೆ ಆಗೋದಲ್ಲ ಒಳ್ಳೆಯದಕ್ಕೆ ಅನಿಸುತ್ತದೆ’ ಎಂದಿದ್ದಾರೆ ಅನುಪಮಾ ಗೌಡ.
‘ಒಂದು ವ್ಯಕ್ತಿನ ಪ್ರೀತಿ ಮಾಡುತ್ತೇನೆ. ಏನೋ ಕಾರಣ ಬಂದು ದೂರವಾಗುತ್ತಾರೆ. ಮರುದಿನದಿಂದ ದ್ವೇಷಿಸಲು ಹೇಗೆ ಸಾಧ್ಯ? ನನಗೆ ಅದು ಸಾಧ್ಯವಿಲ್ಲ. ಎಕ್ಸ್ ಜೊತೆ ಫ್ರೆಂಡ್ ಆಗಿರಲು ಸಾಧ್ಯವೇ ಇಲ್ಲ. ಆದರೆ, ಹೇಟ್ ಮಾಡಲು ಹೇಗೆ ಸಾಧ್ಯ ಅನ್ನೋದು ನನಗೆ ತಿಳಿದಿಲ್ಲ’ ಎಂದಿದ್ದಾರೆ ಅನುಪಮಾ ಗೌಡ.
ಇದನ್ನೂ ಓದಿ: ನೇಹಾ ಗೌಡ ಮಗಳು ಶಾರದಾ ಜೊತೆ ಖುಷಿಯ ಕ್ಷಣ ಕಳೆದ ಅನುಪಮಾ ಗೌಡ
‘ಆರು ವರ್ಷಗಳ ಕಾಲ ಶೂಟಿಂಗ್, ಮನೆ ಆ ವ್ಯಕ್ತಿ. ಇಷ್ಟೇ ಜೀವನ ಆಗಿತ್ತು. ಆದರೆ, ಎಲ್ಲವೂ ಒಂದು ದಿನ ಕಟ್ ಆಯ್ತು. ನಾನು ಸಾಕಷ್ಟು ಡಿಪೆಂಡ್ ಆಗಿದ್ದೆ. ಇದಾದ ಬಳಿಕ ಸಾಕಷ್ಟು ಕಷ್ಟ ಆಯ್ತು. ನಾನು ಸಾಕಷ್ಟು ಕನಸು ಕಂಡಿದ್ದೆ. ಅರ್ಧ ದೇಹ ಕಟ್ ಮಾಡಿದಂತಾಗುತ್ತದೆ’ ಎಂದಿದ್ದಾರೆ ಅನುಪಮಾ ಗೌಡ. ಅನುಪಮಾ ಅವರು ಆತ್ಮಹತ್ಯೆ ಪ್ರಯತ್ನವನ್ನೂ ಮಾಡಿದ್ದರು. ಎರಡು ದಿನ ಆಸ್ಪತ್ರೆಯಲ್ಲಿ ಕಳೆದರು. ಆ ಬಳಿಕ ಬಿಗ್ ಬಾಸ್ ಆಫರ್ ಬಂತು. ಇದು ಅವರ ಜೀವನ ಬದಲಿಸಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.