Video: ‘ತಡ ಮಾಡದೇ ಮಗು ಮಾಡಿಕೊಳ್ಳಿ’ ಎಂದು ಸಲಹೆ; ನಾಚುತ್ತಲೇ ‘ಓಕೆ’ ಎಂದ ಅನುಶ್ರೀ

ಅನುಶ್ರೀ ಅವರು ಇತ್ತೀಚೆಗೆ ವಿವಾಹವಾಗಿ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಒಂದು ವೈರಲ್ ವಿಡಿಯೋದಲ್ಲಿ ಮಗು ಮಾಡಿಕೊಳ್ಳುವ ಬಗ್ಗೆ ಮಾಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸಮೀರ್ ಆಚಾರ್ಯ ಅವರ ಪತ್ನಿ ಶ್ರಾವಣಿ ಅವರೊಂದಿಗೆ ಮಾತನಾಡುವಾಗ ಅನುಶ್ರೀ ಅವರು ತಮ್ಮ ಮಗು ಆಸೆಯನ್ನು ಹಂಚಿಕೊಂಡಿದ್ದಾರೆ.

Video: ‘ತಡ ಮಾಡದೇ ಮಗು ಮಾಡಿಕೊಳ್ಳಿ’ ಎಂದು ಸಲಹೆ; ನಾಚುತ್ತಲೇ ‘ಓಕೆ’ ಎಂದ ಅನುಶ್ರೀ
ಅನುಶ್ರೀ

Updated on: Sep 10, 2025 | 9:40 AM

ಆ್ಯಂಕರ್ ಅನುಶ್ರೀ (Anushree) ಅವರು ಇತ್ತೀಚೆಗೆ ಮದುವೆ ಆಗಿದ್ದಾರೆ. ಐಟಿ ಕ್ಷೇತ್ರದಲ್ಲಿ ಇರೋ ರೋಷನ್ ಅವರನ್ನು ವಿವಾಹ ಆಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈಗ ಅನುಶ್ರೀ ಅವರು ಮತ್ತೆ ತಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹೀಗಿರುವಾಗಲೇ ಅವರ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಗು ಮಾಡಿಕೊಳ್ಳುವಂತೆ ಸಲಹೆ ಕೊಟ್ಟವರಿಗೆ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಸಮೀರ್ ಆಚಾರ್ಯ ಈ ಮೊದಲು ಬಿಗ್ ಬಾಸ್ ಹಾಗೂ ಕನ್ನಡದ ಕೋಟ್ಯಧಿಪತಿ ಶೋಗೆ ಬಂದಿದ್ದರು. ಈಗ ಅವರು ‘ನಾವು ನಮ್ಮವರು’ ಶೋನಲ್ಲಿ ಸ್ಪರ್ಧಿ ಆಗಿದ್ದಾರೆ. ಅನುಶ್ರೀ ಅವರು ಜೀ ಕನ್ನಡದವರಿಗಾಗಿ ವಿಶೇಷ ಊಟ ಹಾಕಿಸಿದ್ದಾರೆ. ಇದರಲ್ಲಿ ಸಮೀರ್ ಆಚಾರ್ಯ ಅವರ ಪತ್ನಿ ಶ್ರಾವಣಿ ಕೂಡ ಇದ್ದರು. ಅವರು ಅನುಶ್ರೀ ಜೊತೆ ಮಾತನಾಡಿದ್ದಾರೆ. ಈ ವಿಡಿಯೋದಲ್ಲಿ ಅನುಶ್ರೀಗೆ ಅವರು ಬೇಗ ಮಗು ಮಾಡಿಕೊಳ್ಳೋ ಬಗ್ಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ
ರಜನಿಕಾಂತ್ ಉದಾಹರಣೆ ನೀಡಿ ಅಮಿತಾಭ್ ಬಚ್ಚನ್​​ಗೆ ಪಾಠ ಮಾಡಿದ ನೆಟ್ಟಿಗರು
‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್
ಸುಧಾರಾಣಿ ಬಿಗ್ ಬಾಸ್​ಗೆ ಬರ್ತಾರೆ ಎಂದವರಿಗೆ ಉತ್ತರಿಸಿದ ನಟಿ
‘ಸು ಫ್ರಮ್ ಸೋ’ ಒಟಿಟಿ ದಿನಾಂಕ ರಿವೀಲ್; 45ನೇ ದಿನವೂ ಅಬ್ಬರದ ಕಲೆಕ್ಷನ್

ಅನುಶ್ರೀ ವಿಡಿಯೋ

ಸಮೀರ್ ಆಚಾರ್ಯ-ಶ್ರಾವಣಿ ಮಗಳನ್ನು ನೋಡಿ ಅನುಶ್ರೀ ಖುಷಿಯಾದರು. ಅನುಶ್ರೀ ಆ ಮಗುವನ್ನು ಪ್ರೀತಿಯಿಂದ ಮಾತನಾಡಿಸಿದರು. ‘ಆದಷ್ಟು ಬೇಗ ಇಂಥದ್ದೊಂದು ಮಗು ಬರಲಿ’ ಎಂದು ಅನುಶ್ರೀ ಅವರಿಗೆ ಶ್ರಾವಣಿ ಸಲಹೆ ನೀಡಿದರು. ‘ಹು..’ ಎಂದು ರಾಗ ಎಳೆದ ಅನುಶ್ರೀ, ‘ನಂಗೆ ಹೆಣ್ಣು ಪಾಪು ಇಷ್ಟ’ ಎಂದರು. ‘ತಡ ಮಾಡಂಗಿಲ್ಲ’ ಎಂದು ಶ್ರಾವಣಿ ಸಲಹೆ ನೀಡಿದರು. ಇದಕ್ಕೆ ಅನುಶ್ರೀ ಓಕೆ ಎಂದಿದ್ದಾರೆ.

ಇದನ್ನೂ ಓದಿ: ನಾನು ಕೋಟ್ಯಧಿಪತಿ ಅಲ್ಲ, ಐಟಿ ಕಂಪನಿ ಕೆಲಸ ಮಾಡ್ತೀನಿ: ಅನುಶ್ರೀ ಪತಿ ಸ್ಪಷ್ಟನೆ

ಅನುಶ್ರೀ ಹಾಗೂ ರೋಷನ್ ಅವರು ಪುನೀತ್ ಅಭಿಮಾನಿಗಳು. ಈ ಕಾರಣಕ್ಕೆ ಇವರ ಮಧ್ಯೆ ಒಳ್ಳೆಯ ಗೆಳೆತನ ಬೆಳೆಯಿತು. ಆ ಬಳಿಕ ಅದು ಪ್ರೀತಿಗೆ ತಿರುಗಿತು. ಇವರು ವಿವಾಹ ಆದರು. ವೈರಲ್ ಆಗಿರೋ ವಿಡಿಯೋ ನೋಡಿದ ಬಳಿಕ ಅನೇಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಒಂದೊಮ್ಮೆ ಮಗು ಮಾಡಿಕೊಂಡರೆ ಅವರು ಆ್ಯಂಕರಿಂಗ್​ಗೆ ಕೆಲ ವರ್ಷ ಬ್ರೇಕ್ ಹಾಕಬೇಕಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 8:53 am, Wed, 10 September 25