ಅರ್ಜುನ್ ಜನ್ಯ ಮ್ಯೂಸಿಕಲ್ ನೈಟ್ಸ್ನ ಉಚಿತವಾಗಿ ನೋಡೋ ಅವಕಾಶ; ಎಲ್ಲಿ, ಯಾವಾಗ?
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ‘ಮ್ಯೂಸಿಕಲ್ ನೈಟ್’ ಕಾರ್ಯಕ್ರಮ ಉಚಿತವಾಗಿ ನೋಡುವ ಅವಾಕಾಶ ಸಿಕ್ಕಿದೆ. ಜಸ್ಕರಣ್ ಸಿಂಗ್ ಸೇರಿದಂತೆ ಅನೇಕ ಪ್ರತಿಭಾವಂತ ಗಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕೊಳ್ಳೇಗಾಲದಲ್ಲಿ ಚಿತ್ರೀಕರಿಸಲಾದ ಈ ಕಾರ್ಯಕ್ರಮವು ಸಂಗೀತ ಪ್ರಿಯರಿಗೆ ಖುಷಿ ಕೊಡಲಿದೆ.

ಖ್ಯಾತ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಅನೇಕ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಜಸ್ಕರಣ್ ಸಿಂಗ್ ಬಳಿ ‘ದ್ವಾಪರ..’ ಹಾಡನ್ನು ಹಾಡಿಸಿ ಅವರನ್ನು ಸ್ಟಾರ್ ಆಗಿ ಮಾಡಿದರು. ಈ ರೀತಿ ಅನೇಕ ಗಾಯಕರಿಗೆ ಅವಕಾಶಗಳನ್ನು ಅರ್ಜುನ್ ಜನ್ಯ ನೀಡಿದ್ದಾರೆ. ಈಗ ಅವರು ಮ್ಯೂಸಿಕಲ್ನೈಟ್ ಮಾಡಿದ್ದಾರೆ. ಇದನ್ನು ಉಚಿತವಾಗಿ ನೋಡುವ ಅವಕಾಶವನ್ನು ಜೀ ಕನ್ನಡ ಕಲ್ಪಿಸಿದೆ. ಈ ಬಗ್ಗೆ ಪ್ರೋಮೋನ ವಾಹಿನಿ ಹಂಚಿಕೊಂಡಿದೆ.
ಕೊಳ್ಳೆಗಾಲದಲ್ಲಿ ‘ಅರ್ಜುನ್ ಜನ್ಯ ಮ್ಯೂಸಿಕಲ್ ನೈಟ್ಸ್’ ನಡೆದಿದೆ. ಇದನ್ನು ಶೂಟ್ ಮಾಡಿ ಇಟ್ಟುಕೊಳ್ಳಲಾಗಿದ್ದು, ಮಾರ್ಚ್ 9ರಂದು ಪ್ರಸಾರ ಕಾಣಲಿದೆ. ಮಧ್ಯಾಹ್ನ 3 ಗಂಟೆಗೆ ಈ ಕಾರ್ಯಕ್ರಮದ ಪ್ರಸಾರ ಆರಂಭ ಆಗಲಿದೆ. ಮನೆಯಲ್ಲೇ ಇದ್ದು ಕೊಂಡು ಮ್ಯೂಸಿಕಲ್ ನೈಟ್ನ ಎಂಜಾಯ್ ಮಾಡಬಹುದು. ಅದೂ ಉಚಿತವಾಗಿ ಅನ್ನೋದು ವಿಶೇಷ.
ಅರ್ಜುನ್ ಜನ್ಯ ಅವರು ಹಾಡುವುದರ ಮೂಲಕ ಎಲ್ಲರನ್ನೂ ರಂಜಿಸಲಿದ್ದಾರೆ. ಅಲ್ಲದೆ ಜಸ್ಕರಣ್ ಮೊದಲಾದ ಖ್ಯಾತ ಗಾಯಕರು ಕೂಡ ಈ ಕಾನ್ಸರ್ಟ್ನಲ್ಲಿ ಭಾಗಿ ಆಗಿದ್ದಾರೆ. ಈ ಮೂಲಕ ಸಂಗೀತ ರಸಸಂಜೆ ಉಣಿಸಲು ಜೀ ವಾಹಿನಿ ಸಿದ್ಧವಾಗಿದೆ.
View this post on Instagram
ಸದ್ಯ ಜೀ ಕನ್ನಡ ಪ್ರೋಮೋ ಹಂಚಿಕೊಂಡಿದೆ. ಇದಕ್ಕೆ ‘ಮ್ಯಾಜಿಕಲ್ ಕಂಪೋಸರ್ ಸಾರಥ್ಯದಲ್ಲಿ ಕೊಳ್ಳೇಗಾಲದಲ್ಲಿ ಮನರಂಜನೆಯ ಸಂಭ್ರಮ ತಂದ ಮನಸೆಳೆಯೋ ಹಾಡುಗಳ ಹಬ್ಬ. ಅರ್ಜುನ್ ಜನ್ಯ ಮ್ಯೂಸಿಕಲ್ ನೈಟ್ಸ್. ಮಾರ್ಚ್ 9ಕ್ಕೆ’ ಎಂದು ಕ್ಯಾಪ್ಶನ್ ನೀಡಲಾಗಿದೆ.
ಇದನ್ನೂ ಓದಿ: ಸುದೀಪ್ ಸಿಕ್ಕ ಮೇಲೆ ಬದುಕು ಬದಲಾಯಿತು; ಅರ್ಜುನ್ ಜನ್ಯ ಹೇಳಿದ ಅಪರೂಪದ ವಿಚಾರ
ಸಿನಿಮಾ ವಿಚಾರಕ್ಕೆ ಬರೋದಾದರೆ ಅರ್ಜುನ್ ಜನ್ಯ ಅವರು ಹಲವು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುವುದರಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ‘ಸರಿಗಮಪ’ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ‘45’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ, ಶಿವರಾಜ್ಕುಮಾರ್ ಹಾಗೂ ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ರಿಲೀಸ್ ಡೇಟ್ ಇನ್ನಷ್ಟೇ ರಿವೀಲ್ ಆಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:34 am, Wed, 26 February 25