‘ಸೀತಾ ರಾಮ’: ಹೊಸ ಆಟ ಶುರು ಮಾಡಿದ ಅಶೋಕ; ಭಾಗರ್ವಿಗೆ ನಡುಕ

‘ಸೀತಾ ರಾಮ’ ಧಾರಾವಾಹಿಯಲ್ಲಿ ಸುಬ್ಬಿಯ ಸ್ವಭಾವದಲ್ಲಿನ ಬದಲಾವಣೆಯು ಭಾರ್ಗವಿಯನ್ನು ಆತಂಕಕ್ಕೀಡು ಮಾಡಿದೆ. ಅಶೋಕನ ಕ್ಷಮೆಯಿಂದ ಆತ ಹಾಗೂ ರಾಮ್ ನಡುವಿನ ಗೆಳೆತನಕ್ಕೆ ಧಕ್ಕೆಯಾಗುವುದು ತಪ್ದೆ. ಆದರೆ, ಅಶೋಕನ ಹೊಸ ಯೋಜನೆಯಿಂದ ಭಾರ್ಗವಿಯ ನಿಜವಾದ ಮುಖ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

‘ಸೀತಾ ರಾಮ’: ಹೊಸ ಆಟ ಶುರು ಮಾಡಿದ ಅಶೋಕ; ಭಾಗರ್ವಿಗೆ ನಡುಕ
ಸೀತಾ ರಾಮ
Updated By: ರಾಜೇಶ್ ದುಗ್ಗುಮನೆ

Updated on: May 09, 2025 | 7:53 AM

‘ಸೀತಾ ರಾಮ’ (Seetha Rama Serial) ಧಾರಾವಾಹಿಯಲ್ಲಿ ಸುಬ್ಬಿಯು ಸಿಹಿಯಾಗಿ ಬದಲಾದ ಬಳಿಕ ಧಾರಾವಾಹಿಯ ವಿಲನ್ ಭಾರ್ಗವಿಗೆ ನಿದ್ದೆಯೇ ಇಲ್ಲದಂತೆ ಆಗಿದೆ. ಆಕೆ ಸದಾ ಚಿಂತೆಯಲ್ಲಿ ದಿನ ಕಳೆಯುವಂತೆ ಆಗಿದೆ. ಈಗ ಭಾರ್ಗವಿಯು ಮಾಡಿದ ಒಂದು ಕುತಂತ್ರದಿಂದ ಅಶೋಕ್ ಹಾಗೂ ಕಥಾ ನಾಯಕ ರಾಮ್ ಗೆಳೆತನವು ಬೇರೆ ಆಗುವುದರಲ್ಲಿ ಇತ್ತು. ಆದರೆ, ಈಗ ಇದು ಸರಿ ಆಗಿದೆ. ಈ ಮಧ್ಯೆ ಭಾರ್ಗವಿಗೆ ನಡುಕ ಹುಟ್ಟುವಂತೆ ಮಾಡಿದ್ದಾನೆ ಅಶೋಕ. ಇದನ್ನು ಕೇಳಿ ಆಕೆಗೆ ಚಿಂತೆ ಶುರುವಾಗಿದೆ.

ಅಶೋಕನು ಮಕ್ಕಳ ಬಳಿ ನಾಟಕ ಮಾಡಿಸಿದ್ದ. ಸುಬ್ಬಿಯನ್ನು ಮುಂದಿಟ್ಟುಕೊಂಡು ಸಿಹಿ ಸತ್ತ ದಿನ ಏನಾಯಿತು ಎಂಬುದನ್ನು ವಿವರಿಸುವ ರೀತಿಯಲ್ಲಿ ನಾಟಕ ಮಾಡಿದ್ದನು. ಇದರಲ್ಲಿ ಭಾರ್ಗವಿ ವಿಲನ್ ಎನ್ನುವ ರೀತಿ ತೋರಿಸುವ ಪ್ರಯತ್ನ ನಡೆಯಿತು. ಈ ನಾಟಕವು ರಾಮನಿಗೆ ಕೊಂಚವೂ ಇಷ್ಟ ಆಗಲೇ ಇಲ್ಲ. ಆತನು ರಾಮನ ಮೇಲೆ ಸಿಟ್ಟಾದನು ಮತ್ತು ಚಿಕ್ಕಿಯ (ಭಾರ್ಗವಿ) ಮೇಲೆ ಅಪರಾಧ ಹೊರಿಸಿದ್ದನ್ನು ಸಹಿಸಿಕೊಳ್ಳಲು ರೆಡಿ ಇರಲಿಲ್ಲ. ಇದರಿಂದ ಅಶೋಕ್ ಹಾಗೂ ರಾಮನ ಗೆಳೆತನ ಮುರಿದು ಬೀಳುವುದರಲ್ಲಿ ಇತ್ತು.

ಇದನ್ನೂ ಓದಿ
ಮದುವೆ ವಿಚಾರದಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತಿನಂತೆ ನಡೆದುಕೊಂಡ ಚೈತ್ರಾ
ಚೈತ್ರಾ ಕುಂದಾಪುರ ಮದುವೆ; ವಿಡಿಯೋ ಮೂಲಕ ಹುಡುಗನ ಪರಿಚಯ
ಶಾರುಖ್ ಮೋಸ ಮಾಡಿದರೆ...; ಗೌರಿ ಖಾನ್ ಬೋಲ್ಡ್ ಉತ್ತರ ಮೆಚ್ಚಲೇಬೇಕು
‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್

ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿ: ಅಶೋಕ್​ಗೆ ಗೊತ್ತಾಗಿ ಹೋಯ್ತು ಸಿಹಿಯ ಆತ್ಮದ ಕಥೆ; ಮುಂದೇನು?

ಆದರೆ, ಅಶೋಕ ಈಗ ಕ್ಷಮೆ ಕೇಳಿದ್ದಾನೆ. ಈ ಬೆನ್ನಲ್ಲೇ ಭಾರ್ಗವಿ ಖುಷಿ ಆಗಿದ್ದಾಳೆ. ‘ಆತ್ಮ ಗೌರವ ಬಿಟ್ಟು ಬಂದು ಕ್ಷಮೆ ಕೇಳಿದ್ಯಲ್ಲೋ ಅಶೋಕ’ ಎಂದಳು ಭಾರ್ಗವಿ. ಆದರೆ, ಇದಕ್ಕೆ ಅಶೋಕ ಕೊಟ್ಟ ಉತ್ತರವು ಆಕೆಯನ್ನು ಹೆಚ್ಚು ಕಂಗಾಲು ಮಾಡಿದೆ. ‘ನನ್ನ ಗೆಳೆಯನಿಗೋಸ್ಕರ ಕತ್ತೆ ಕಾಲು ಹಿಡಿಯೋಕು ರೆಡಿ. ಅಶೋಕನ ಹೊಸ ಆಟ ಶುರು.  ಭಾರ್ಗವಿಯಲ್ಲಿ ಚಿಕ್ಕಿ’ ಎಂದು ಹೇಳಿದ್ದಾನೆ ಅಶೋಕ್.


ಅಶೋಕನಿಗೆ ಭಾರ್ಗವಿಯ ನಿಜವಾದ ಮುಖ ತಿಳಿದು ಹೋಗಿದೆ. ಇದನ್ನು ರಾಮನಿಗೆ ಹೇಳುವ ಪ್ರಯತ್ನವನ್ನೂ ಆತ ಮಾಡಿದ್ದಾನೆ. ಆದರೆ, ಅದು ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಅವನಿಗೆ ಬೇಸರ ಇದೆ. ಈಗ ಆತನು ಯಾವ ರೀತಿಯ ಆಟ ಆಡುತ್ತಾನೆ ಮತ್ತು ಭಾರ್ಗವಿಯ ನಿಜವಾದ ಮುಖವನ್ನು ಹೇಗೆ ಬಯಲು ಮಾಡುತ್ತಾನೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.